ಬೆಂಗಳೂರು,(www.thenewzmirror.com)
ಅಯ್ಯೋ ಮಿನಿಸ್ಟರ್ ಸಿಗ್ತಿಲ್ಲ…., ಯಾವಾಗ ಫೋನ್ ಮಾಡಿದ್ರೂ ಆ ಜಿಲ್ಲೆಯಲ್ಲಿ ಇದ್ದೀನಿ.., ಈ ಜಿಲ್ಲೆಯಲ್ಲಿ ಇದ್ದೀನಿ.., ಅಯ್ಯೋ ಸಚಿವರ ಹತ್ರ ಒಂದು ಕೆಲ್ಸ ಆಗ್ಬೇಕಿತ್ತು.., ಯಾವಾಗ ಬರ್ತಾರೋ ಏನೋ…? ಈ ರೀತಿಯ ಪ್ರಶ್ನೆಗಳು ವಿಧಾನಸೌಧ ಪಡಸಾಲೆಯಲ್ಲಿ ಕೇಳಿ ಬರ್ತಿದೆ..,
ಅಷ್ಟಕ್ಕೂ ಈ ರೀತಿ ಸಮಸ್ಯೆ ಬಿಜೆಪಿ ಸರ್ಕಾರದಲ್ಲಿ ಆಗ್ತಿದೆ ಅನ್ನೋ ಆರೋಪ ಕೇಳಿ ಬರ್ತಿದೆ.., ಸದ್ಯ ರಾಜ್ಯದಲ್ಲಿ ಸಾರಿಗೆ ಸಚಿವರು ಶ್ರೀರಾಮುಲು.., ಉತ್ತರ ಕರ್ನಾಟಕದ ಕ್ಷೇತ್ರವೊಂದರಲ್ಲಿ ಗೆದ್ದು ಸಚಿವರಾಗಿರೋ ರಾಮುಲು, ಕೈಗೆ ಸಿಗುತ್ತಿಲ್ಲ.., ಒಲ್ಲದ ಮನಸ್ಸಿನಿಂದ ಅಧಿಕಾರ ಸ್ವೀಕಾರ ಮಾಡಿದ್ರೂ ಯಾರ ಕೈಗೂ ಸಿಗದೇ ಓಡಾಡುತ್ತಿದ್ದಾರಂತೆ..,
ಯಾವುದೇ ಒಂದು ಟ್ರಾನ್ಸ್ ಫರ್.., ಪ್ರಮೋಷನ್.., ಅಮಾನತು ರದ್ದು, ಹೀಗೆ ಯಾವುದೇ ಕೆಲ್ಸ ಆಗ್ಬೇಕಂದ್ರೂ ಸಾರಿಗೆ ಸಚಿವರು ಕೈಗೆ ಸಿಗೋದೇ ಇಲ್ಲ.., ಯಾವಾಗ ನೋಡಿದ್ರೂ ಬಳ್ಳಾರಿ, ಗದಗ, ಚಿತ್ರದುರ್ಗ ಅಂತ ಅಲ್ಲಿ ಹೆಚ್ಚಿನ ಗಮನ ಕೊಡ್ತಿದ್ದಾರೆ ಅನ್ನೋ ಆರೋಪ ಶ್ರೀರಾಮುಲು ಮೇಲಿದೆ..,
ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದಿರೋ ಶ್ರೀರಾಮುಲು ತಮ್ಮ ಸ್ವಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಕೊಡೋದು ಸರ್ವೆ ಸಾಮಾನ್ಯ.., ಇಲಾಖೆಯ ಯಾವುದಾದರೂ ಸಭೆ, ಕಾರ್ಯಕ್ರಮ ಇದ್ರೆ ಬೆಂಗಳೂರಿಗೆ ಬಂದು ಮತ್ತೆ ವಾಪಾಸ್ ಸ್ವಕ್ಷೇತ್ರಕ್ಕೆ ತೆರಳುತ್ತಾರಂತೆ.., ಹೀಗಾಗಿ ಕೈಗೇ ಸಿಗ್ತಿಲ್ಲ ಅನ್ನೋ ಬೇಸರ ಕೆಲವರಿಂದ ಕೇಳಿ ಬರ್ತಿದೆ.
ಬೆಂಗಳೂರಿಗರೇ ಯಾಕೇ ಬೇಕು…..?
ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಾಗ ಆರ್ ಅಶೋಕ್ ಸಾರಿಗೆ ಸಚಿವರಾಗಿದ್ರು. ಅದಾದ ನಂತ್ರ ಕಾಂಗ್ರೆಸ್ ಸರ್ಕಾರದಲ್ಲಿ ರಾಮಲಿಂಗಾರೆಡ್ಡಿ, ರೇವಣ್ಣ ಸಚಿವರಾದ್ರು.. ಇವರೆಲ್ಲರೂ ಬೆಂಗಳೂರಿನವರೇ.., ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ತಮ್ಮಣ್ಣ ಸಾರಿಗೆ ಸಚಿವರಾಗಿದ್ರೂ ಸ್ವಕ್ಷೇತ್ರ ಮದ್ದೂರಿನಲ್ಲಿ ಇರ್ತಾ ಇದ್ದಿದ್ದು ತೀರಾ ಕಡಿಮೆ..,
ಇನ್ನು ಬಿಜೆಪಿ ಆಡಳಿತ ಬರ್ತಿದ್ದಂತೆ ಲಕ್ಷ್ಮಣ್ ಸವದಿ ಸಾರಿಗೆ ಸಚಿವರಾದ್ರು ಅವ್ರೂ ಅಧಿಕಾರಿಗಳ ಕೈಗೆ ಸಿಗ್ತಾನೇ ಇರ್ಲಿಲ್ಲ.., ಇದಾದ ಬಳಿಕ ಶ್ರೀರಾಮುಲು ಇವ್ರೂ ಕೂಡ ಅದೇ ರಾಗ ಅಂತ ಸ್ವತಃ ಅಧಿಕಾರಿಗಳು ಗೊಣಗುತ್ತಿದ್ದಾರಂತೆ..,
ಬೆಂಗಳೂರಿನ ಮೂಲಕದವ್ರಿಗೆ ಸಾರಿಗೆ ಸಚಿವ ಸ್ಥಾನ ಕೊಟ್ರೆ ಅನುಕೂಲ ಹೆಚ್ಚು ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.., ಬಿಎಂಟಿಸಿ, ಕೆಎಸ್ಸಾರ್ಟಸಿ, ಆರ್ ಟಿಓ ಹೀಗೆ ಎಲ್ಲಾ ಕೇಂದ್ರ ಕಚೇರಿಗಳು ಬೆಂಗಳೂರಿನಲ್ಲಿಯೇ ಇರೋದ್ರಿಂದ ಇಲ್ಲಿದ್ದವ್ರಿಗೆ ಕೊಟ್ರೆ ಅನುಕೂಲ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.
ಸಾರಿಗೆ ನೌಕರರ ಮುಷ್ಕರದಲ್ಲಿ ನನ್ನನ್ನ ಅಮಾನತು ಮಾಡಲಾಗಿದೆ. ಕರ್ತವ್ಯಕ್ಕರ ಹಾಜರಾಗಿದ್ರೂ ಗೈರು ಹಾಜರಿ ಅಂತ ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳಿಗೆ ಹೇಳಿದ್ರೆ ಕೇಳುತ್ತಿಲ್ಲ.., ಇನ್ನು ಸಾರಿಗೆ ಸಚಿವರ ಗಮನಕ್ಕೆ ತರೋಣ ಅಂದ್ರೆ ಕಳೆದ ಮೂರು ತಿಂಗಳಿನಿಂದ ಅವ್ರು ಕೈಗೆ ಸಿಗುತ್ತಿಲ್ಲ ಅಂತ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಿಎಂಟಿಸಿಯಲ್ಲಿ ಭ್ರಷ್ಟಚಾರ ವಿಪರೀತವಾಗಿದೆ.., ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.., ಇದನ್ನ ಸಚಿವರ ಗಮನಕ್ಕೆ ತರೋಣ ಅಂದ್ರೆ ಅವ್ರು ಶಕ್ತಿ ಸೌಧದ ತಮ್ಮ ಕಚೇರಿಯಲ್ಲಿ ಇರೋದೇ ಇಲ್ಲ.., ಹೀಗಿರಬೇಕಾದ್ರೆ ಭ್ರಷ್ಟಚಾರಕ್ಕೆ ಕಡಿವಾಣ ಹೇಗೆ ಸಾಧ್ಯ ಅಂತ ಅಧಿಕಾರಿಯೊಬ್ಬರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಸಾರಿಗೆ ಸಚಿವರಾದವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಲಭ್ಯರಿರಬೇಕು.., ತಮ್ಮ ಅಧೀನದಲ್ಲಿ ಇರುವ ಇಲಾಖೆಗಳ ಸಮಸ್ಯೆಗಳನ್ನ ಆಲಿಸಬೇಕು.., ಆದ್ರೆ ಶ್ರೀರಾಮುಲು ಕೈಯಲ್ಲಿ ಇದು ಸಾಧ್ಯವಾಗುತ್ತಿಲ್ಲ ಅನ್ನೋದು ಮಾತ್ರ ಬೇಸರದ ಸಂಗತಿ.