ಬೆಂಗಳೂರು, (www.thenewzmirror.com) :
ಅಚ್ಚರಿ ಅನ್ಸಿದ್ರೂ ಇದು ಸತ್ಯ ಸತ್ಯ.., ಬೆಂಗಳೂರಿನಲ್ಲಿ ಒಂದ್ ಕಾಲ ಮಿಂಚಿ ಮರೆಯಾದ ಡಬಲ್ ಡೆಕ್ಕರ್ ಬಸ್ಗಳು ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕಾಣಿಸಲಿವೆ.., ಇಂಥದೊಂದು ಪ್ಲಾನ್ ಅನ್ನ ಬಿಎಂಟಿಸಿ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಇಂಥ ಯೋಚನೆ ಮಾಡುತ್ತಿದೆ.
ಬಿಎಂಟಿಸಿ ಕಳೆದ ಕೆಲ ದಿನಗಳಿಂದ ಎಲೆಕ್ಟ್ರಿಕ್ ಬಸ್ ಗಳನ್ನ ರೋಡಿಗಿಳಿಸುತ್ತಿರೋದು ಗೊತ್ತಿರೋ ವಿಚಾರವೇ.., ಇದರ ಜೊತೆಗೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಇದೀಗ ಚಿಂತನೆ ನಡೆಸುತ್ತಿದೆ. ಇಇಎಸ್ಎಲ್ ಎನರ್ಜಿ ಎಫಿಶಿಯನ್ಸಿ ಸರ್ವಿಸ್ ಲಿಮಿಟೆಡ್ ಕಂಪನಿಯಿಂದ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಗಳನ್ನ ಪಡೆಯಲು ಪ್ರಸ್ತಾವನೆ ನೀಡಿದೆ. ಕೆಂದ್ರ ಸರ್ಕಾರದ ಅಧೀನ ಕಂಪನಿ ಇಇಎಸ್ಎಲ್, ದೇಶದ ಎಲ್ಲಾ ಸಾರಿಗೆ ನಿಗಮಗಳಿಗೂ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ನೀಡಲು ಚಿಂತನೆ ನಡೆಸಿದ್ದು, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಗಳನ್ನ ಇಡೀ ದೇಶದಲ್ಲಿ ಅವಶ್ಯಕತೆ ಇರುವ ಸಾರಿಗೆ ನಿಗಮಗಳಿಗೆ ಪುನಃ ಪರಿಚಯ ಮಾಡಲು ಮುಂದಾಗಿದೆ.
ಬೆಂಗಳೂರಿನ ರಸ್ತೆಗಳ ಮೇಲೆ ಡಬ್ಬಲ್ ಡೆಕ್ಕರ್ ಬಸ್ ಗಳನ್ನ ನೋಡೋದೇ ಒಂಥರಾ ಮಜಾ…, ಕಾಲ ಕಳೆದಂತೆ ಅದ್ರಲ್ಲೂ ನಗರ ಬೆಳೆದಂತೆ ನಿಧಾನವಾಗಿ ಡಬ್ಬಲ್ ಡೆಕ್ಕರ್ ಬಸ್ ಗಳು ಕಣ್ಮರೆಯಾಗ್ತಾ ಹೋದ್ವು…., ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ರಸ್ತೆ ಮೇಲೆ ಓಡಾಡ್ತಿದ್ದ ಡಬ್ಬಲ್ ಡೆಕ್ಕರ್ ಬಸ್ ಗಳು ಮತ್ತೆ ನಗರದಲ್ಲಿ ಓಡಾಟ ಮಾಡಲಿವೆ..,
ಮೊದಲ ಹಂತದಲ್ಲಿ ಪ್ರಯೋಗಿಕವಾಗಿ 5 ಡಬಲ್ ಡೆಕ್ಕರ್ ಬಸ್ ಗಳನ್ನ ನೀಡುವಂತೆ ಬಿಎಂಟಿಸಿ ಹೇಳಿದ್ದು ಬೆಂಗಳೂರಲ್ಲಿ ಫ್ಲೈಓವರ್, ಸ್ಕೈವಾಕ್, ಕೇಬಲ್, ಮರಗಳು ಹೆಚ್ಚಾಗಿರೋದ್ರಿಂದ ಸಿಟಿ ಸ್ಟ್ರೆಕ್ಚರ್ , ಜನರ ಅಭಿಪ್ರಾಯ ಪಡೆಯಲು ಪ್ರಾಯೋಗಿಕ ಸಂಚಾರ ನಡೆಸಲಾಗುವುದು ಎಂದಿದೆ. ಈ ಸಂಬಂಧ ಆರಂಭಿಕ ಹಂತದಲ್ಲಿ ಚರ್ಚೆಗಳು ಆಗ್ತಾಯಿದ್ದು ಪ್ರಾಯೋಗಿಕ ಸಂಚಾರದ ನಂತರ ಮುಂದಿನ ದಿನಗಳಲ್ಲಿ ಬಿಎಂಟಿಸಿ ನಿರ್ಧಾರ ಕೈಗೊಳ್ಳಲಿದೆ.
ನಿಗಮದಲ್ಲಿ ಮೊದಲೇ ಸಿಬ್ಬಂದಿಗೆ ನೀಡೋಕೆ ಹಣವಿಲ್ಲ.., ಇಂಥ ಸಂಧರ್ಭದಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿ ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್ ಓಡಿಸೋಕೆ ಮುಂದಾಗಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಈಗಾಗಲೇ ಓಡಾಡ್ತಿರೋ ಬಸ್ ಗಳನ್ನೇ ಸರಿಯಾಗಿ ನಿರ್ವಹಣೆ ಮಾಡೋಕೆ ಆಗ್ತಿಲ್ಲ.., ಇಂಥದ್ರಲ್ಲಿ ಇಂಥ ಹುಚ್ಚು ಯೋಜನೆ ಅಗತ್ಯವಿಲ್ಲ ಕೂಡಲೇ ಪ್ರಸ್ತಾವನೆ ಕೈ ಬಿಡ್ಬೇಕು ಅಂತ ಮನವಿ ಮಾಡ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ಬಿಎಂಟಿಸಿಗೆ ಡಬ್ಬಲ್ ಡೆಕ್ಕರ್ ಬಸ್ ಏನೋ ಬೆಂಗಳೂರಿಗೆ ಬರ್ತಿದೆ.., ಆದ್ರೆ ಅದ್ರ ನಿರ್ವಹಣೆ.., ಅದರ ಖರ್ಚು ವೆಚ್ಚದ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ…, ಅದೇನೇ ಇರ್ಲಿ, ಕಾಂಟ್ರಿಕ್ ನಗರ.., ಫ್ಲೈ ಓವರ್ ಗಳ ರಸ್ತೆಗಳ ನಡುವೆ ಇಂಥ ಬಸ್ ಗಳನ್ನ ಓಡಿಸೋಕೆ ಸಾಧ್ಯವಾಗುತ್ತಾ ಅನ್ನೋದೇ ಯಕ್ಷ ಪ್ರಶ್ನೆ.
ಡಬಲ್ ಡೆಕ್ಕರ್ ಬಸ್ ಸಂಬಂಧ ಬಸ್ ಖರೀದಿ , ಗುತ್ತಿಗೆ ಹಾಗೂ ಆ ಬಸ್ ಗಳ ಖರ್ಚು ವೆಚ್ಚಗಳ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮುಂದಿನ ದಿನಗಳಲ್ಲಿ ಕಂಪನಿ ಜೊತೆ ಚರ್ಚೆ ನಡೆಸಿ ಬಿಎಂಟಿಸಿ ನಿರ್ಧಾರ ಕೈಗೊಳ್ಳಲಿದ್ದು, ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಗಳು ಮತ್ತೆ ಸಂಚಾರ ಮಾಡುತ್ವಾ ಕಾದು ನೋಡಬೇಕಿದೆ.