ಬೆಂಗಳೂರಿನಲ್ಲಿವೆ 13 ಸಾವಿರಕ್ಕೂ ಹೆಚ್ಚು ಅಪಾಯದ ಕಟ್ಟಡಗಳು..!

ಬೆಂಗಳೂರು, (www.thenewzmirror.com) :

ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವವರೇ ಎಚ್ಚರ ಎಚ್ಚರ…., ನಗರದಲ್ಲಿದ್ದಾವೆ ಬರೋಬ್ಬರಿ 13 ಕ್ಕೂ ಹೆಚ್ಚು ಅಪಾಯದ ಹಂತದಲ್ಲಿರುವ ಕಟ್ಟಡಗಳು…, 2010 ರಲ್ಲಿ ಕಾರ್ಲ್ ಟನ್ ಟವರ್ ನಲ್ಲಿ ನಡೆದ ಅಗ್ನಿ ದುರಂತದ ಬಳಿಕ ಅಗ್ನಿ ಶಾಮಕ ದಳ ಬೆಂಗಳೂರಿನಲ್ಲಿರುವ ಕಟ್ಟಡಗಳನ್ನ ಸರ್ವೆ ಡೆಸಲು ಮುಂದಾಗಿತ್ತು. ಈ ವೇಳೆ ನಡೆಸಿದ ಸರ್ವೇಯಲ್ಲಿ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ.

RELATED POSTS

 ದಿನದಿಂದ ದಿನಕ್ಕೆ ಬೆಳೆಯುತ್ತಿರೋ ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಕಟ್ಟಡಗಳೂ ಏರುತ್ತಿವೆ.., ನೋಡ ನೋಡುತ್ತಲೇ ಗಗನಚುಂಬಿ ಕಟ್ಟಡಗಳು ತಲೆ ಎತ್ತು ನಿಲ್ಲುತ್ತಿವೆ.., ನೋಡೋಕೆ ಅಂದ ಕಂಡ್ರೂ ಅದರಿಂದ ಅನಾಹುತಗಳು ಕಾಲ ಕ್ರಮೇಣದಲ್ಲಿ ಆಗುತ್ತೆ ಅನ್ನೋದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳು ಕಣ್ಮುಂದೆ ಇದಾವೆ.

ಸಾಮಾನ್ಯವಾಗಿ ಯಾವುದೇ ಒಂದು ಕಟ್ಟಡ ಕಟ್ಟಬೇಕಂದ್ರೂ ಕೆಲವೊಂದು ನಿಯಮಗಳನ್ನ ಪಾಲನೆ ಮಾಡಲೇಬೇಕು.., ಸ್ಥಳೀಯ ಸಂಸ್ಥೆಯ ಅನುಮತಿ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆದರಷ್ಟೇ ಅದು ಅಧಿಕೃತ ಇಲ್ಲದಿದ್ದರೆ ಅದು ಅನಧಿಕೃತ ಹೀಗೆ ಅಗ್ನಿ ಶಾಮಕ ದಳದ ಅನುಮತಿ ಪಡೆಯದೇ 13,214 ಕಟ್ಟಡಗಳು 2015 ರಲ್ಲೇ ನಗರದಲ್ಲಿ ಇದ್ದವು ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ.

ಕಟ್ಟಡ ಕಟ್ಟಬೇಕಾದ ಅನುಸರಿಸಬೇಕಾದ ಅಕ್ರಮಗಳು ಯಾವುವು ಅಂದರೆ….?

– ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ  ಕನಿಷ್ಠ 12 ಮೀಟರ್ ಅಂತರ
– ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗ ಬಿಡಬೇಕು
– ಮೇಲ್ಛಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಕಡ್ಡಾಯ
– ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆ ಮಾಡಬೇಕು
– ಕಟ್ಟಡದಲ್ಲಿ ಕಡ್ಡಾಯವಾಗಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ನೇಮಿಸಬೇಕು
– ಎಲೆಕ್ಟ್ರಿಕ್ ಅಲಾರಾಂ, ಅಗ್ನಿ ನಂದಿಸುವ ಸಲಕರಣೆ ಕಡ್ಡಾಯ
– ಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು ಹಾಗೂ ಲಿಫ್ಟ್ ಇರಬೇಕು
– ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

ಇಷ್ಟೇಲ್ಲಾ ನಿಯಮಗಳನ್ನ ಪಾಲನೆ ಮಾಡಿ ಕಟ್ಟಡ ಕಟ್ಟಬೇಕು. ಆದ್ರೆ ಹನದಾಸೆಗೆ ಬಿದ್ದು ಮನಸ್ಸಿಗೆ ಬಂದಂತೆ ಕಟ್ಟಡಗಳನ್ನ ಕಟ್ಟುವ ಮನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಆದಾಗ ಮಾತ್ರ ಇಂಥ ಅಕ್ರಮಕ್ಕೆಲ್ಲಾ ಬ್ರೇಕ್ ಬೀಳಲಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist