ಬೆಂಗಳೂರು,(www.thenezmirror.com) ;
ಕರೋನಾದಿಂದ ತತ್ತರಿಸಿ ಹೋಗಿದ್ದ ಬೆಂಗಳೂರಿನ ಲೈಫ್ ಸ್ಟೈಲ್ ಸಹಜ ಸ್ಥಿತಿಗೆ ಮರಳುವ ಕಾಲ ಬಂದಿದೆ. ಅದರಲ್ಲೂ ಮನೆ ಮಾಲೀಕರಿಗೆ ಇದೀಗ ಬಂಪರ್ ಸಿಕ್ಕಿದೆ ಅಂತ ಹೇಳಿದರೂ ತಪ್ಪಿಲ್ಲ. ಯಾಕಂದರೆ ಕೊವೀಡ್ ಕಂಪ್ಲೀಟ್ ಮುಗಿದ ಬಳಿಕ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್‌ಬಂದಿದೆ.
ಹೌದು, ಬೆಂಗಳೂರಿನಲ್ಲಿರೋ ಬಹುತೇಕ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾನ್ಸೆಪ್ಟ್ ಅನ್ನ ಕಡಿತಕ್ಕೆ ತೀರ್ಮಾನ ಮಾಡಿವಡಯಂತೆ. ಹೀಗಾಗಿ ಇಷ್ಟು ದಿನ ಮನಡಯಿಂದಲೇ ಕೆಲಸ ಮಾಡುತ್ತಿದ್ದ ಟೆಕ್ಕಿಗಳು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ.
ಇದರಿಂದ ಬೆಂಗಳೂರು ಮಹಾನಗರಿಯಲ್ಲಿ ಮನೆಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಬಾಡಿಗೆ ದರವೂ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿದೆಯಂತೆ. ಹೀಗಾಗಿ ಮನೆ ಬಾಡಿಗೆ ಸಾಕಷ್ಟು ದುಬಾರಿಯಾಗುತ್ತಿದ್ದು, ಶೇಕಡಾ 20 ರಿಂದ 30 ರಷ್ಟು ಏರಿಕೆಯಾಗುತ್ತಿವೆಯಂತೆ.
ಇಷ್ಟು ದಿನ ತಿಂಗಳಿಗೆ ಒಮ್ಮೆ ಮಾತ್ರ ಕಚೇರಿಗೆ ಬರುವಂತೆ ಸೂಚಿಸುತ್ತಿದ್ದ ಕಂಪನಿಗಳು ಇದೀಗ ವಾರಕ್ಕೆ ಮೂರು ದಿನ ಕಚೇರಿಗೆ ಹಾಜರಾಗುವಂತೆ ಹೇಳಿವೆಯಂತೆ. ಹೀಗಾಗಿ ಕರೋನಾದಿಂ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಟೆಕ್ಕಿಗಳು ಇದೀಗ ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿದ್ದಾರೆ.
ಕರೋನಾದಿಂದ ಬೆಂಗಳೂರಿನಲ್ಲಿ ಸೂರು ಮಾಡಿದ್ದ ಟೆಕ್ಕಿಗಳು ಅದನ್ನ ಮಾರಿ ಹುಟ್ಟೂರಿಗೆ ತೆರಳಿದ್ರು. ಇದೀಗ ಅವರೆಲ್ಲಾ ಐಟಿ ಸಿಟಿ, ಬಿಟಿ ಸಿಟಿಗೆ ಆಗಮಿಸುತ್ತಿದ್ದು ಮತ್ತೆ ಮನೆ ಹುಡುಕುವತ್ತ ಗಮನ ಹರಿಸಿದ್ದಾರೆ. ಹೀಗಾಗಿ ಬಾಡಿಗೆ ಮನೆ ದರ ಸದ್ದಿಲ್ಲದೆ ಏರಿಕೆಯಾಗಿದೆ ಅಂತಾರೆ ಮನೆ ಮಾಲೀಕರು.
ಇಷ್ಟು ದಿನ ಒಂದು BHK ಮನೆ 8 ರಿಂದ 10 ಸಾವಿರಕ್ಕೆ ಸಿಗುತ್ತಿತ್ತು. ಆದರೀಗ ಅದು 11 ರಿಂದ 14 ಸಾವಿರಕ್ಕೆ ಏರಿಕೆಯಾಗಿದೆ. ಅದರಲ್ಲೂ ಐಟಿ ಸಂಸ್ಥೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ದರ ಕೊಂಚ ಹೆಚ್ಚಾಗಿವೆ ಅಂತಾರೆ ಟೆಕ್ಕಿ ಸಂತೋಷ್ ಕುಮಾರ್ ಕಿರುವಾಸೆ.
ಕೋರಮಂಗಲ, ಸರ್ಜಾಪುರ, ಇಂದಿರಾನಗರ, ಜೆ.ಪಿ.ನಗರ, ಬೆಳ್ಳಂದೂರು, ಬನ್ನೇರು ಘಟ್ಟ, ಸರ್ಜಾಪುರ, ಮಹಾದೇವಪುರ, ITPL, ಎಲೆಕ್ಟ್ರಾನಿಕ್ ಸಿಟಿ, HSR ಲೇಔಟ್ ,ಸೇರಿದಂತೆ ಹೊರ ವರ್ತುಲಗಳ ಏರಿಯಾಗಳಲ್ಲಿ ಬಾಡಿಗೆ ಮನೆ ಏರಿಕೆ ಬಿಸಿ ತಟ್ಟುತ್ತಿದೆ ಅಂತ ಹೇಳ್ತಿದೆ ರಿಯಲ್ ಎಸ್ಟೇಟ್ ಉದ್ಯಮ.