ಬೆಂಗಳೂರು, (www.thenewzmirror.com):
ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ.. ಬಿಬಿಎಂಪಿ ಕೊಟ್ಟಿರುವ ಮಾಹಿತಿ ಇದೀಗ ಆತಂಕವನ್ನ ಹುಟ್ಟಿಸಿದೆ. ಅದು ಏನಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 400 ಕ್ಕೂ ಹೆಚ್ಚು ಅಪಾಯದ ಹಂತದಲ್ಲಿರುವ ಕಟ್ಟಡಗಳು ಇದಾವಂತೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ವಿಚಾರವನ್ನ ತಿಳಿಸಿದ್ದು, ರ್ಯಾಪಿಡ್ ಸರ್ವೆ ನಡೆಸಲು ಮುಂದಾಗಿದೆ. ಈ ಹಿಂದೆ ಅಂದರೆ 2019ರಲ್ಲಿ ನಡೆದಿದ್ದ ಸರ್ವೆ ಪ್ರಕಾರ 195 ಕಟ್ಟಡಗಳು ಅಪಾಯದ ಅಂಚಿನಲ್ಲಿದ್ದವು, ಇದಾಗಿ ಎರಡೇ ವರ್ಷದಲ್ಲಿ ಇದರ ಪ್ರಮಾಣ ದ್ವಿಗುಣವಾಗಿದ್ದು, ಸಿಟಿ ಮಂದಿಯ ನೆಮ್ಮದಿ ಕೆಡಿಸಿದೆ.
ಯಾವಾಗ ನಾವಿರುವ ಮನೆ ಬೀಳುತ್ತೆ.., ನಮ್ಮ ಪಕ್ಕದ ಕಟ್ಟಡ ಯಾವಾಗ ನೆಲಕ್ಕುರುಳುತ್ತೆ ಅನ್ನುವ ಆತಂದಲ್ಲೇ ಕಾಲ ಕಳೆಯುವ ಜತೆಗೆ ನಿದ್ದೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರ್ಯಾಪಿಡ್ ಆಧಾರದ ಮೇಲೆ ಸರ್ವೇ ನಡೆಸಿ ಡೆಮಾಲಿಷನ್ ಮಾಡಲು ಮುಂದಾಗಿರುವ ಬಿಬಿಎಂಪಿ, ಆದಷ್ಟು ಬೇಗ ಸರ್ವೆ ಮುಗಿಸುವ ಜವಾಬ್ದಾರಿ ಹೊತ್ತಿದೆ.
ಬಿಬಿಎಂಪಿ ಎಡವಟ್ಟಿಗೆ ಮತ್ತೊಂದು ಕಟ್ಟಡ ಹಾನಿ
ಮಹಾಲಕ್ಷ್ಮೀ ಲೇಔಟ್ ನಲ್ಲಿ ತಡರಾತ್ರಿ ಕುಸಿದಿದ್ದ ಕಟ್ಟಡ ತೆರವು ಮಾಡುವ ವೇಳೆ ಬಿಬಿಎಂಪಿ ಮಾಡಿರುವ ಎಡವಟ್ಟು ಮತ್ತೊಂದು ಕಟ್ಟಡಕ್ಕೆ ಹಾನಿಯುಂಟಾಗಿದೆ. ಕಮಲಾನಗರದ NGO ಕಾಲೋನಿಯಲ್ಲಿದ್ದ 3 ಅಂತಸ್ಥಿನ ಕಟ್ಟಡದ ಒಂದು ಭಾಗ ಹಾಗೂ ಎರಡಂತಸ್ಥಿನ ಕಟ್ಟಡದ ಹಿಂಭಾಗ ಏಕಾಏಕಿ ಕುಸಿದಿದೆ. ಅಳಿದುಳಿದ ಅವಶೇಷಗಳನ್ನ ತೆರವು ಮಾಡುವ ವೇಳೆ ಪಕ್ಕದಲ್ಲೇ ಇದ್ದ ಚಿಕ್ಕ ಸೀಟಿನ ಮನೆಯೂ ಧರೆಗುರುಳಿತು. ಇದರಿಂದ ಮನೆ ಮಾಲೀಕರು ಪಾಲಿಕೆಗೆ ಹಾಗೂ ಪೊಲೀಸರಿಗೆ ಹಿಡಿಶಾಪ ಹಾಕಿದ್ರು.