ಬೆಂಗಳೂರು, (www.thenewzmirror.com):
ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು, BBMP ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.
ಆರ್ ಅಶೋಕ್- ದಕ್ಷಿಣ ವಲಯ
ಡಾ.ಅಶ್ವಥ್ ನಾರಾಯಣ್- ಪೂರ್ವ ವಲಯ
ವಿ ಸೋಮಣ್ಣ- ಪಶ್ಚಿಮ ವಲಯ
ಎಸ್ ಟಿ ಸೋಮಶೇಖರ್ -ಆರ್ ಆರ್ ನಗರ ವಲಯ
ಬೈರತಿ ಬಸವರಾಜ್- ಮಹದೇವಪುರ ವಲಯ
ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ
ಮುನಿರತ್ನ -ಯಲಹಂಕ ಮತ್ತು ದಾಸರಹಳ್ಳಿ ವಲಯ