ಬೆಂಗಳೂರು, ( www.thenewzmirror.com):
ಬಿಬಿಎಂಪಿಯಲ್ಲಿ ಯಾವುದೂ ಸರಿಯಿಲ್ಲ.., ಉತ್ತಮ ಆಡಳಿತ ನಡೆಸ್ಬೇಕಾದ IAS ಅಧಿಕಾರಿಗಳು ಕೆಲ್ಸ ನಿರ್ವಹಣೆ ಮಾಡ್ತಿಲ್ಲ.., ಇದೆಲ್ಲದನ್ನ ನಿರ್ವಹಣೆ ಮಾಡ್ಬೇಕಾದ ಮುಖ್ಯ ಆಯುಕ್ತ ಗೌರವ್ ಗುಪ್ತ ಕಣ್ಮುಚ್ಚಿ ಕುಳಿತಿದ್ದಾರೆ.., ಅವ್ರಿಗೆ ಕೆಳ ಹಂತದ ಅಧಿಕಾರಿಗಳು ಗೌರವ ಕೊಡ್ತಿಲ್ಲ.., ಅವ್ರು ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ. ಇಂಥದೊಂದು ಆರೋಪ ಬಿಬಿಎಂಪಿ ಪಡಸಾಲೆಯಲ್ಲಿ ಕೇಳಿ ಬರ್ತಿದೆ.
ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿ ಮುಖ್ಯಸ್ಥರ ವಿರುದ್ಧ ಇಂಥ ಆರೋಪ ಕೇಳಿ ಬರ್ತಿದೆ.., ಹೀಗೆ ಆರೋಪ ಮಾಡ್ತಿರೋದು ಬೇರ್ಯಾರೂ ಅಲ್ಲ ಬಿಬಿಎಂಪಿಯ ಗುತ್ತಿಗೆದಾರರ ಸಂಘ.
ಬಿಬಿಎಂಪಿಯ IAS ಆಡಳಿತದಿಂದ ಬೇಸತ್ತು ಪ್ರತಿಭಟನೆಗೆ ಮುಂದಾಗಿದ್ದು, ಶುಕ್ರವಾರದಿಂದ ನಗರದಲ್ಲಿ ಕಸದ ಸಮಸ್ಯೆ ಉದ್ಬವವಾಗುವ ಸಾಧ್ಯತೆಯಿದೆ. ಕಾರಣ ಪ್ರತಿಭಟನೆಗೆ ಮುಂದಾಗಿದ್ದು ಕಸ ವಿಲೇವಾರಿ ಮಾಡುವ ಗುತ್ತಿಗೆದಾರರು.
ತುಳಸಿ ಮದ್ದಿನೇನಿ ವಿರುದ್ಧ ಕೇಳಿ ಬರ್ತಿರೋ ಆರೋಪ ಇಂದು ನಿನ್ನೆಯದಲ್ಲ.., ಕರೋನಾ ಸಮಯದಲ್ಲೂ ಇದೇ ರೀತಿ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರು ಕಳುಹಿಸಿದ್ದ ಶಿಫಾರಸ್ಸಿಗೂ ಮನ್ನಣೆ ನೀಡದೇ ಕಡತವನ್ನ ತಿರಸ್ಕಾರ ಮಾಡಿದ್ರಂತೆ.. ಹೀಗಾಗಿಯೇ ಕೆಲ ಅಧಿಕಾರಿಗಳು ಇವ್ರ ವಿರುದ್ಧ ಗರಂ ಆಗಿದ್ದಾರೆ.
ಹೇಗಾದ್ರೂ ಮಾಡಿ ಅವ್ರನ್ನ ಬೇರೆಡೆಗೆ ವರ್ಗಾವಣೆ ಮಾಡ್ಬೇಕು ಅಂದ್ರೂ ಸಾಧ್ಯವಾಗ್ತಿಲ್ಲ.., ಮತ್ತೊಬ್ಬ ಪ್ರಭಾವಿ ಸಚಿವರು ಇವರ ಬೆನ್ನಿಗೆ ನಿಂತಿದ್ದಾರಂತೆ. ಹೀಗಾಗಿಯೇ ಮುಖ್ಯ ಆಯುಕ್ತ ಗೌರವ್ ಗುಪ್ತ ಇವ್ರ ಮೇಲೆ ಯಾವುದೇ ಕ್ರಮ ಕೈಗೊಳ್ಳೋಕೆ ಆಗದೇ ಅಶಕ್ತರಾಗಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿದೆ.
ಕಳೆದ ಹಲವು ತಿಂಗಳಿನಿಂದ ಒಬ್ಬ IAS ಅಧಿಕಾರಿಯನ್ನ ಕೂಡಲೇ ವರ್ಗಾವಣೆ ಮಾಡಿ ಅನ್ನೋ ಕುಗೂಗಳೂ ಕೇಳಿ ಬರ್ತಿವೆ.., ಆದ್ರೆ ಅದು ಸಾಧ್ಯವಾಗ್ತಿಲ್ಲ.., ಹೀಗಾಗಿಯೇ ಮತ್ತೆ ಕಸದ ಸಮಸ್ಯೆ ಉದ್ಬವಿಸೋ ಸಾಧ್ಯತೆಯಿದೆ.ಅದಕ್ಕೆ ಅವಕಾಶ ನೀಡದೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಬೇಕಿದೆ.