ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರೋ ಒಮಿಕ್ರಾನ್ ತಡೆಗೆ ರಾಜ್ಯ ಮತ್ತೆ ಕಟ್ಟುನಿಟ್ಟಿನ ನಿಯಮವನ್ನ ಜಾರಿಗೆ ತಂದಿದೆ.
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೆ ಮುಂದಾಗಿದ್ದು, ಬೆಂಗ್ಳೂರಿಗೆ ಪ್ರತ್ಯೇಕ ನಿಗಾ ಇಡೋಕೆ ಸರ್ಕಾರ ಹೊರಟಿದೆ ಅಂತ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದರು.
ಸಿಎಂ ಹಾಗೂ ತಜ್ಞರ ಸಮಿತಿ ಜತೆ ಸತತ ಮೂರುವರೆ ಗಂಟೆಗಳ ಸಭೆ ನಂತರ ಮಾಹಿತಿ ನೀಡಿದ ಸಚಿವ ಸುಧಾಕರ್ ಹಾಗೂ ಅಶೋಕ್, ಬೆಂಗಳೂರಲ್ಲಿ ಕೊವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ಹಾಗೆನೇ ರಾಜ್ಯಕ್ಕೆ ಪ್ರತ್ಯೇಕ ನಿಯಮ ಜಾರಿ ಮಾಡಲಾಗುವುದು ಅಂತ ತಿಳಿಸಿದರು.
ನೈಟ್ ಕರ್ಫ್ಯೂ ಇನ್ನೂ ಎರಡು ವಾರ ಮುಂದುವರೆಯಲಿದ್ದು, ಇದರ ಜತೆಗೆ ವೀಕೆಂಡ್ ಕರ್ಫ್ಯೂ ಕೂಡಾ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಪ್ರತ್ಯೇಕವಾಗಿ ಗೈಡ್‌ಲೈನ್ಸ್‌ನ್ನು ಸರ್ಕಾರ ಜಾರಿ ಮಾಡಿದ್ದು, ಬುಧವಾರ ರಾತ್ರಿ 10 ಗಂಟೆಯಿಂದಲೇ ಹೊಸ ರೂಲ್ಸ್ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಕೋವಿಡ್ ತಡೆಗೆ ಸರ್ಕಾರದ ನಿಯಮಗಳು
– ಆನ್ ಲೈನ್ ಕ್ಲಾಸ್ ನಡೆಸುವಂತೆ ಸೂಚನೆ
– ಎರಡು ವಾರಗಳ ಕಾಲ ಆನ್ ಲೈನ್ ಕ್ಲಾಸ್ ಇರೋದಿಲ್ಲ
– ಬೆಂಗಳೂರಲ್ಲಿ ಹತ್ತು ಮತ್ತು ಹನ್ನೆರಡನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿಗಳ ಬೌತಿಕ ತರಗತಿಗಳು ಇರುವುದಿಲ್ಲ
– ಶ್ರುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ವೀಕೆಂಡ್ ಕರ್ಪ್ಯೂ
– ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ
– ಸರ್ಕಾರಿ ಕಚೇರಿಗಳಿಗೆ ಭಾರತ ಸರ್ಕಾರದ ಮಾರ್ಗ ಅನ್ವಯ
– ಚಿತ್ರಮಂದಿರ, ಮಾಲ್, ಪಬ್, ಬಾರ್ ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶೇ.50 ರಷ್ಟು ಭರ್ತಿಗೆ ಅವಕಾಶ
– ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವವರು ಎರಡೂ ಡೋಸ್ ಲಸಿಕೆ ಕಡ್ಡಾಯ
– ಒಳಾಂಗಣದಲ್ಲಿ ಮದುವೆ ನಡೆದರೆ 100, ಹೊರಾಂಗಣದ ಕಾರ್ಯಕ್ರಮಕ್ಕೆ 200 ಜನಕ್ಕೆ ಮಾತ್ರ ಅವಕಾಶ
– ಬಸ್, ಮೆಟ್ರೋಗಳಲ್ಲಿ ಎಷ್ಟು ಜನ ಓಡಾಡಬೇಕು ಎಂಬುದರ ಬಗ್ಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಆರ್‌ಟಿಸಿ ಮಾರ್ಗಸೂಚಿ
– ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಕೊವಿಡ್ ಸೆಂಟರ್‌ಗಳ ಸ್ಥಾಪನೆ
– ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಅಂಬುಲೆನ್ಸ್
– ನಾಳೆಯಿಂದ ಯಾರೂ ಪ್ರತಿಭಟನೆ ಮಾಡುವಂತಿಲ್ಲ