ಬೆಂಗಳೂರು, (www.thenewzmirror.com);
ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲಿದ್ದ ವಿಶ್ರಾಂತಿ ತಾಣವನ್ನ ಮಸೀದಿಯಾಗಿ ಪರಿವರ್ತನೆ ಮಾಡಲಾಗಿತ್ತು. ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಸಾರವೂ ಆಗಿತ್ತು. ಅಷ್ಟೇ ಅಲ್ಲದೆ ಹಿಂದೂಪರ ಸಂಘಟನೆಗಳ ವಿರೋಧಕ್ಕೂ ಕಾರಣವಾಗಿತ್ತು.
ಕಳೆದ ಹಲವು ವರ್ಷಗಳಿಂದ ವಿಶ್ರಾಂತಿ ತಾಣ ಮಸೀದಿಯಾಗಿದ್ದರೂ ಅದನ್ನ ನಿಯಂತ್ರಣ ಮಾಡದ ರೈಲ್ವೆ ಇಲಾಖೆ ನಡೆ ವಿರುದ್ಧವೂ ಅಸಮಧಾನ ವ್ಯಕ್ತವಾಗಿತ್ತು.
ಇದೀಗ ತನ್ನ ತಪ್ಪನ್ನ ಅರಿತ ರೈಲ್ವೆ ಇಲಾಖೆ ಇದೀಗ ಅಕ್ರಮ ಪ್ರಾರ್ಥನಾ ಮಂದಿರವನ್ನ ತೆರವು ಮಾಡಿದೆ. ಅಷ್ಟೇ ಅಲ್ಲದೆ ಆ ಜಾಗದಲ್ಲಿ ರೈಲ್ವೆ ನಿಲ್ದಾಣದ ರೆಸ್ಟ್ ರೂಂ ಸ್ಥಾಪನೆ ಮಾಡಿದೆ.
ಗೋಡೆಗೆ ಬಳಿಯಲಾಗಿದ್ದ ಹಸಿರು ಬಣ್ಣವನ್ನೂ ತೆರವು ಮಾಡಿದ ರೈಲ್ವೆ ಇಲಾಖೆ, ನೀಲಿ ಬಿಳುಪು ಬಣ್ಣ ಬಳಿದು ರೆಸ್ಟ್ ರೂಂ ಪುನರಾರಂಭ ಮಾಡಿದೆ. ಇದರ ಜತೆಗೆ ರೆಸ್ಟ್ ರೂಂನಲ್ಲಿ ಹಿಂದೂ, ಕ್ರೈಸ್ತ ಹಾಗೂ ಮುಸ್ಲೀಂ ದೇವರ ಫೋಟೋವನ್ನೂ ಹಾಕಿದೆ.