ಬೆಂಗಳೂರು, (www.thenewzmirror.com):
ಬೆಂಗಳೂರಿನಲ್ಲಿ ಕಳೆದ ದಿನ ಸುರಿದ ಭಾರೀ ಮಳೆಗೆ ಮತ್ತೊಂದು ಕಟ್ಟಡ ಕುಸಿದು ಬಿದ್ದಿದೆ.. ಅದೃಷ್ಟವಶಾತ್ ಯಾವುದೇ ಸಾವುನೋವು ಉಂಟಾಗಿಲ್ಲ.
ಕಳೆದ ರಾತ್ರಿ ಘಟನೆ ನಡೆದಿದ್ದು ವಿಚಾರ ತಿಳಿಯುತ್ತಿದ್ದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಘಟನಾ ಸ್ಥಳಕ್ಕೆ ವಿಸಿಟ್ ಕೊಟ್ಟು ಪರಿಶೀಲನೆ ನಡೆಸಿದರು.
ಪೂರ್ವ ವಲಯ, ಹಲಸೂರು ವಾರ್ಡ್ ವ್ಯಾಪ್ತಿಯ ಮಿಲ್ಕ್ ಮ್ಯಾನ್ ಸ್ಟ್ರೀಟ್ ನಲ್ಲಿ ಇಂದು ಮುಂಜಾನೆ 6 ಗಂಟೆಗೆ 58 ವರ್ಷಗಳ ಹಳೆಯ ಕಟ್ಟಡ ಕುಸಿದು ಬಿದ್ದಿತ್ತು. ನೆಲ ಮತ್ತು ಮೊದಲ ಮಹಡಿಯನ್ನೊಳಗೊಂಡಿರುವ ಸುಮಾರು 20 ಚದುರದ ಅಡಿ ಕಟ್ಟಡವು ಕುಸಿದಿದ್ದು, ಈ ಕಟ್ಟಡವನ್ನು ಮಣ್ಣು ಹಾಗೂ ಇಟ್ಟಿಗೆಯಿಂದ ನಿರ್ಮಿಸಲಾಗಿದೆ.

ಶಿಥಿಲಗೊಂಡಿದ್ದ ಕಟ್ಟಡಕ್ಕೆ ಪಾಲಿಕೆ ಈಗಾಗಲೇ ನೋಟಿಸ್ ನೀಡಿ ಮಾಲೀಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು. ಕಟ್ಟಡ ಕುಸಿದ ವೇಳೆ ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ. ಪ್ರಸ್ತುತ ಭಗ್ನಾವಶೇಷಗಳ(ಕಟ್ಟಡ ತ್ಯಾಜ್ಯ) ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ಸ್ಥಳದಲ್ಲಿ ಇನ್ನೆರಡು ಕಟ್ಟಡಗಳು ಶಿಥಿಲಗೊಂಡಿದ್ದು, ಅವನ್ನು ಕೂಡಾ ಇಂದು ನೆಲಸಮಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.