ಮಾತಿನ ಮಲ್ಲಿ ಖ್ಯಾತಿಯ RJ ರಚನಾ ದಿಢೀರ್ ಸಾವು..!

ಬೆಂಗಳೂರು, (www.thenewzmirror.com) :

ಇತ್ತೀಚಿನ ದಿನಗಳಲ್ಲಿ ಯಾವುದು ನಿರೀಕ್ಷೆ ಇಲ್ಲವೋ ಅಂಥ ಘಟನೆಗಳು ಸಡನ್ ಆಗಿಯೇ ಜರುಗಿ ಬಿಡ್ತವೆ.., ಇದು ಬಹುತೇಕ ಜನ್ರ ಆತಂಕ ಹಾಗೂ ಅಘಾತಕ್ಕೂ ಕಾರಣವಾಗಿದೆ.., ಪುನೀತ್ ರಾಜ್ ಕುಮಾರ್ ಸಾವ್ ಇರಬಹುದು.., ಹಿರಿಯ ನಟ ಶಿವರಾಮ್ ಇರಬಹುದು.., ಲತಾ ಮಂಗೇಶ್ಕರ್ ಇರಬಹುದು ಹೇಳುತ್ತಾ ಹೋದ್ರೆ ದೊಡ್ಡ ಪಟ್ಟಿನೇ ಸಿಗುತ್ತೆ.., ಇದ್ರ ಬೆನ್ನಲ್ಲೇ ರಾಜ್ಯ ಸಿನೆಮಾ ರಂಗಕ್ಕೆ ಮತ್ತೊಂದು ಶಾಕ್ ಆಗಿದೆ. ಅದು ಮಾತಿನ ಮಲ್ಲಿ ಖ್ಯಾತಿಯ ಆರ್ ಜೆ ಅಂದ್ರೆ ರೇಡಿಯೋ ಜಾಕಿ ರಚನಾ ದಿಢೀರ್ ಸಾವನ್ನಪ್ಪಿದ್ದಾರೆ.

RELATED POSTS

ಮಾತಿನ ಮಲ್ಲಿ, ಪಟ ಪಟ ಅಂತ ಮಾತನಾಡುತ್ತಿದ್ದ ಆರ್​​.ಜೆ. ರಚನಾ ಕೊನೆಯುಸಿರೆಳೆದಿದ್ದಾರೆ. ಸುಮಾರು 39 ವರ್ಷದ ಆರ್​.ಜೆ ರಚನಾ ಹೃದಯಾಘಾತದಿಂದ ಅಸುನಿಗಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ರಚನಾ ಕೆಲಸ ಮಾಡಿದ್ದರು.

ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲವು ರಚನಾ. ಸಖತ್​ ಫಿಟ್​ ಅಂಡ್​​ ಫೈನ್ಆಗಿದ್ದ ರಚನಾಗೆ ಹಾರ್ಟ್ ಅಟ್ಯಾಕ್​ ಆಗಿದೆ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು. ಡಿಪ್ರೆಷನ್​, ಸ್ಟ್ರೆಸ್​ನಿಂದ ಹಾರ್ಟ್​ ಅಟ್ಯಾಕ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೂ ಕಳೆದ ಕೆಲ ವರ್ಷಗಳಿಂದ ಎಲ್ಲರಿಂದ ರಚನಾ ದೂರ ಇದ್ದರು ಎಂದು ಹೇಳಲಾಗುತ್ತುದೆ. ಸ್ನೇಹಿತರ ಕರೆಗೂ ಸರಿಯಾದ ಸ್ಪಂಧಿಸುತ್ತಿರಲಿಲ್ವಂತೆ. ಇಂದು ಹೃದಯಾಘಾತದಿಂದ ಆರ್​​.ಜೆ. ರಚನಾ ಸಾವಿಗೀಡಾಗಿದ್ದಾರೆ.

ರೆಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುವಾಗ ಆರ್​.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿನತ್ತ ಹೋಗುತ್ತಿತ್ತು. ಇನ್ನೂ ನಾರ್ಮಲ್​ ಲೈಫ್​ನಲ್ಲೂ ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಆಶ್ವರ್ಯ.

ಸದಾ ಡಯೆಟ್​, ವರ್ಕೌಟ್​ ಮಾಡುತ್ತಿದ್ದರೂ ಈ ರೀತಿ ಸಾವನ್ನಪ್ಪಿರುವುದು ಅವರ ಸ್ನೇಹಿತರಿಗೆ ಅತೀವ ಬೇಸರ ಮೂಡಿಸಿದೆ. ತಮ್ಮ ದೇಹದ ಮೇಲೆ ರಚನಾ ಅವರಿಗೆ ತುಂಬ ಪ್ರೀತಿ ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರಂತೆ ಆರ್​.ಜೆ ರಚನಾ. ಆದರೂ ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ.

ಜೆಪಿ ನಗರದ ಫ್ಲ್ಯಾಟ್ ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರ ಪೋಷಕರು ಚಾಮರಾಜಪೇಟೆಯಲ್ಲಿ ವಾಸವಿದ್ದರು.ರಚನಾ ಪಾರ್ಥಿವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತ್ತಿರುವುದಾಗಿ ರಚನಾ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಸುಮಾರು 7 ವರ್ಷದ ಹಿಂದೆ ರೆಡಿಯೋ ಮಿರ್ಚಿ ಬಿಟ್ಟು ರಚನಾ ಮನೆಯಲ್ಲೇ ಇದ್ದರಂತೆ. ಕೆಲ ತಿಂಗಳುಗಳಿಂದ ಯಾರಿಗೂ ಸಿಗುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ. ದೇಹ ಎಷ್ಟೇ ಗಟ್ಟಿ ಇದ್ದರೂ, ಮನಸ್ಸಿನ ಪಾತ್ರ ಮಾತ್ರ ತುಂಬಾ ಮುಖ್ಯ ಎಂಬುದಕ್ಕೆ ಇವರೇ ಸಾಕ್ಷಿ. ಯಾವಾಗಲೂ ಫಿಟ್​ ಮತ್ತು ಡಯೆಟ್​ ಮೇಲೆ ಗಮನ ಹರಿಸುತ್ತಿದ್ದ ರಚನಾ ಅವರು ಕಳೆದ ಕೆಲ ತಿಂಗಳುಗಳಿಂದ ಡಿಪ್ರೆಷನ್​ನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಆ ಡಿಪ್ರೆಷನ್ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist