ಬೆಂಗಳೂರು, (www.thenewzmirror.com);
ಚಿಲುಮೆ ಟ್ರಸ್ಟ್ ನಿಂದ ಮತದಾರರ ಮಾಹಿತಿ ಹೈಜಾಕ್ ವಿಚಾರದಲ್ಲಿ ತಪ್ಪು ಮಾಡಿದ್ದು ಯಾರೋ ಶಿಕ್ಷೆ ಇನ್ಯಾರಿಗೋ ಎನ್ನುವಂತಾಗಿದೆ. ತನಿಖೆ ಹೆಸರಲ್ಲಿ ಮಾನಸಿಕ ಹಿಂಸೆ ಆಗುತ್ತಿದೆ ಇದರ ಜತೆಗೆ ಕಿರುಕುಳ ಆಗುತ್ತಿದೆ ಅನ್ನೋ ನೋವನ್ನ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ವ್ಯಕ್ತಪಡಿಸಿದ್ದರು.
ಈ ಕುರಿತ ಲೇಖನ
https://thenewzmirror.com/?p=2099
ಇದರ ಬೆನ್ನಲ್ಲೆ ಇದೀಗ ನೌಕರರ ಸಂಘ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದೆ. ಅಷ್ಟಕ್ಕೂ ಮನವಿ ಮಾಡೋದಿಕ್ಕೆ ಕಾರಣವೇನು ಅನ್ನೋದರ ವಿವರ ಇಲ್ಲಿದೆ ನೋಡಿ.
ಚಿಲುಮೆ ಸಂಸ್ಥೆಯಿಂದ ಮತದಾರರ ಅಕ್ರಮ ಮಾಹಿತಿ ಸಂಗ್ರಹ ಪ್ರಕರಣವನ್ನ ಮೂರು ಇಲಾಖೆಗಳು ತನಿಖೆ ನಡೆಸುತ್ತಿವೆ. ಹಲಸೂರುಗೇಟ್ ಪೊಲೀಸರು.., ಪ್ರಾದೇಶಿಕ ಅಯುಕ್ತರು ಹಾಗೂ ಚುನಾವಣೆ ಅಯೋಗ. ಈ ಮೂರೂ ತನಿಖೆ ಸಂಸ್ಥೆಯಿಂದ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ವಿಚಾರಣೆ ಹೆಸರಲ್ಲಿ ಮಾನಸಿಕ ಹಿಂಸೆಯಾಗುತ್ತಿದೆಯಂತೆ.
ಕಳೆದ ಮೂರು ದಿನಗಳ ಹಿಂದೆ
ಮೂರು ಜನ ಆರ್.ಓ., ಎ.ಆರ್.ಓ ಗಳನ್ನ ಬಂಧಿಸಿದ್ದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ನಗರದ ಹತ್ತಕ್ಕೂ ಹೆಚ್ಚು ಠಾಣೆಗಳಲ್ಲಿ ವಿಚಾರಣೆ ನಡೆಯುತ್ತಿದೆ ವಿಚಾರಣೆ ನೆಪದಲ್ಲಿ ಪೊಲೀಸರು ತನಿಖೆ ನೆಪದಲ್ಲಿ ಬಿಬಿಎಂಪಿ ಸಿಬ್ಬಂದಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರಾ.? ಅನ್ನೋ ಆರೋಪ ಕೇಳಿ ಬರುತ್ತಿದೆ. ಹೀಗಂತ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದಿಂದ ಗಂಭೀರ ಆರೋಪ ಮಾಡುತ್ತಿದೆ.
ಪ್ರತಿನಿತ್ಯ ಮೂರು ತನಿಖೆ ಸಂಸ್ಥೆಗಳು ನೌಕರರಿಗೆ ಹಾಗೂ ಅಧಿಕಾರಿಗಳಿಗೆ ವಿಚಾರಣೆ ಗೆ ಬರಬೇಕು ಹೇಳುತ್ತಿದ್ದಾರಂತೆ ಒಂದುಕಡೆ ತೆರಿಗೆ ಸಂಗ್ರಹ ಮಾಡಬೇಕು ಮತ್ತೊಂದು ಕಡೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ಹೀಗಿರುವಾಗ ಎಲ್ಲಾ ಎ.ಅರ್.ಓ.ಹಾಗೂ ಅರ್.ಓ ಗಳಿಗೆ ವಿಚಾರಣೆಗೆ ಕರೆಯುತ್ತಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ವಿಚಾರಣೆ ವೇಳೆ ತನಿಖಾಧಿಕಾರಿಗಳು ನೀವು ಚಿಲುಮೆ ಸಂಸ್ಥೆ ಜೊತೆ ಪೋನ್ ನಲ್ಲಿ ಮಾತನಾಡಿದ್ದಿರಾ ಅಂತ ಪ್ರಶ್ನೆ ಮಾಡ್ತಿದ್ದಾರಂತೆ.., ಹಾಗೆನೇ ನಿಮ್ಮ ಪೋನ್ ಕಾಲ್ ಡಿಟೈಲ್ ನಲ್ಲಿ ಚಿಲುಮೆ ಸಂಸ್ಥೆ ಜೊತೆ ಸಂಭಾಷಣೆ ಮಾಡಿದಿರಾ ಅಂತ ಪ್ರತಿ ನಿತ್ಯ ತೊಂದರೆ ಕೊಡ್ತಿದ್ದಾರಂತೆ.. ಅದರಲ್ಲೂ ಹಲಸೂರು ಪೊಲೀಸರು ಪ್ರತಿನಿತ್ಯ ನಮ್ಮಗೆ ಪೋನ್ ಮುಖೇನ ಠಾಣೆ ಹಾಜರಾಗುವಂತೆ ಸೂಚನೆ ಕೊಡುತ್ತಿದ್ದಾರೆ ಅನ್ನೋ ಅಳಲು ಬಿಬಿಎಂಪಿ ನೌಕರರದ್ದು.
ಸದ್ಯ ಮೂರು ಸಂಸ್ಥೆಗಳ ಬದಲು ಯಾವುದಾದರೊಂದು ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆಸಿದರೆ ಉತ್ತಮ ಅನ್ನುವ ಅಭಿಪ್ರಾಯದ ಪತ್ರವನ್ನ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ್ದಾರೆ.
ನೌಕರರ ಸಂಘದ ಅಧ್ಯಕ್ಷ ಹೇಳೋದೇನು.?
ನಮ್ಮ ನೌಕರರು ವಿಚಾರಣೆಗೆ ಹೆದರುವುದಿಲ್ಲ.. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪ್ರತಿ ದಿನ ಒಂದೊಂದು ಸಂಸ್ಥೆ ವಿಚಾರಣೆಗೆ ಕರೆಯುತ್ತಿದ್ದರೆ ನಮಗೆ ವಹಿಸಿರುವ ಜವಾಬ್ದಾರಿ ಮಾಡಲು ಕಷ್ಟವಾಗುತ್ತಿದೆ. ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ವಿಚಾರಣೆ ನಡೆಸಲಿ ಎಂದು ಹೇಳುತ್ತಾರೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್.