ಬೆಂಗಳೂರು: (www.thenewzmirror.com);
ನಗರದ ಯಶವಂತಪುರ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಂದು ವಾಯು ಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಪೀಣ್ಯ ಬಳಿ ಇರೋ ಡ್ರೈವಿಂಗ್ ಟ್ರ್ಯಾಕ್‌ನಲ್ಲಿ ಆಯೋಜಿಸಿದ್ದ ಸರಳಕಾರ್ಯಕ್ರಮದಲ್ಲಿ ವಾಯು ಮಾಲಿನ್ಯದ ಬಗ್ಗೆ ಅರಿವು ಮೂಡಿಸಲಾಯ್ತು. ಇದರ ಜೊತೆಗೆ ಮಾಲಿನ್ಯಕ್ಕೆ ಕಾರಣಗಳೇನು..? ಇದರ ನಿಯಂತ್ರಣ ಹೇಗೆ ಎನ್ನುವ ಬಗ್ಗೆಯೂ ಅರಿವು ಮೂಡಿಸಲಾಯ್ತು.
ಸಾರ್ವಜನಿಕ ವಾಹನಗಳ ಹೆಚ್ಚು ಬಳಕೆ ಬಗ್ಗೆಯೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯ್ತು. ಮೋಟರ್ ವಾಹನಗಳ ಸಂಚಾರದಿಂದಾಗಿ ಅವುಗಳು ಹೊರಸೂಸುವ ಹೊಗೆಯಿಂದಾಗಿ ಶುದ್ಧ ಗಾಳಿಯೂ ವಿಷಕಾರಿಯಾಗುತ್ತದೆ. ಅವುಗಳು ಹೊರ ಹಾಕುವುದರಿಂದ ವಿಷಕಾರಿ ಅನಿಲಗಳಿಂದ ದುಷ್ಟ ಪರಿಣಾಮಗಳು ಉಂಟಾಗುತ್ತವೆ ಎಂಬ ವಿಷಯದ ಬಗ್ಗೆಯೂ ಮಾಹಿತಿ ನೀಡಲಾಯ್ತು.
ಇದೇ ವೇಳೆ ಪರಿಸರ ಮಾಲಿನ್ಯದಿಂದ ಉಂಟಾಗುವ ಸಮಸ್ಯೆ, ಇದರ ನಿಯಂತ್ರಣದ ಕುರಿತ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಲಾಯ್ತು.
ಈ ಸಂದರ್ಭದಲ್ಲಿ ಆರ್ ಟಿಓ ದೀಪಕ್, ಎಆರ್ ಟಿಓ ವೆಂಕಟೇಶಲು ಜೆ, ಮೋಟಾರ್ ಇನ್ಸ್ ಪೆಕ್ಟರ್ ರಾಜೇಶ್ ಎಸ್.ಪಿ. ಎಫ್ ಡಿಎ ಶಶಿಕುಮಾರ್,ಆನಂದ್ ಬಿ, ರವಿ ಕಿರಣ್ ಡಿ.ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.