ಬೆಂಗಳೂರು, (www.thenewzmirror.com ) ;
ಇದು ಎಲ್ಲೂ ಇಲ್ಲದ ರೂಲ್ಸ್.., ಈ ರೂಲ್ಸ್ ಗೆ ಹೈರಾಣಾಗಿದ್ದಾರೆ ಸಿಬ್ಬಂದಿ.., ಯಾವುದೇ ಕೆಲ್ಸ ಮಾಡಿದ್ರೂ ಅದ್ರಲ್ಲಿ ತಪ್ಪು ಹುಡುಕ್ಬೇಕು ಅಂತ ಅಂದುಕೊಂಡಿರೋ ನಿಗಮದ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ ಇದು.
ಬಿಎಂಟಿಸಿಯ ವಾರದ ಪಾಸ್ ನೀಡುವಾಗ ನಿರ್ವಾಹಕ ಪಾಸ್ ನಲ್ಲಿ ರಂಧ್ರ ಮಾಡಿಲ್ಲ ಕೇವಲ ಪೆನ್ನಿನಲ್ಲಿ ಟಿಕ್ ಮಾಡಿದ್ದಾರೆ ಅನ್ನೋ ಕಾರಣಕ್ಕೆ ನೊಟೀಸ್ ನೀಡಿದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಆನೆಕಲ್ ನಿಂದ ಹೊಸಕೋಟೆಗೆ ತೆರಳುತ್ತಿದ್ದ ಬಸ್ ನಲ್ಲಿ ಚೆಕಿಂಗ್ ಆಫೀಸರ್ಸ್ ಈ ರೀತಿ ನೊಟೀಸ್ ಕೊಟ್ಟಿದ್ದಾರೆ.
ಅಲ್ಲ ಸ್ವಾಮಿ ಪಾಸ್ ಕೊಟ್ಟಿಲ್ಲ ಅಂದ್ರೆ ಅವ್ರಿಗೆ ನೊಟೀಸ್ ನೀಡೋಕೆ ಓಕೆ. ಆದ್ರೆ ಪಾಸ್ ಕೊಟ್ಟಿದ್ದರೂ ಅದರಲ್ಲಿ ರಂಧ್ರ ಮಾಡಿಲ್ಲ ಅಂತ ಹೇಳಿ ಈ ರೀತಿ ನೊಟೀಸ್ ಕೊಟ್ಟರೆ ಹೇಗೆ ಹೇಳಿ..?
ವಾಸ್ತವದಲ್ಲಿ ರಂಧ್ರ ಮಾಡದೇ ಪಾಸ್ ಕೊಟ್ಟಿದ್ದರೂ ಪ್ರಯಾಣೀಕರಿಗೆ ಪಾಸ್ ನೀಡುವಾಗ ನಿರ್ವಾಹಕ ತಮ್ಮ ಬಳಿ ಇರೋ ಪೆನ್ನಿನಿಂದ ನಿಗಧಿತ ದಿನಾಂಕ, ತಿಂಗಳು, ವಾರಕ್ಕೆ ಪೆನ್ನಿನಿಂದ ಮಾರ್ಕ್ ಮಾಡಿಕೊಡುತ್ತಾರೆ.
ಒಮ್ಮೆ ಮಾರ್ಕ್ ಮಾಡಿದ ಮೇಲೆ ಅದನ್ನ ಅಳಿಸೋಕೆ ಆಗೋದಿಲ್ಲ., ಒಂದು ವೇಳೆ ಅಳಿಸೋಕೆ ಪ್ರಯತ್ನ ಪಟ್ಟರೂ ಅದು ನೋಡಿದ ಕೂಡಲೇ ಗೊತ್ತಾಗುತ್ತೆ. ಹೀಗಿದ್ದರೂ ಇಂಥ ಕ್ಷುಲ್ಲಕ ಕಾರಣಕ್ಕೆ ನೊಟೀಸ್ ನೀಡಿ ಕಿರುಕುಳ ನೀಡ್ತಿರೋದು ಎಷ್ಟು ಸರಿ ಅನ್ನೋ ಪ್ರಶ್ನೆ ಸಿಬ್ಬಂದಿಯನ್ನ ಕಾಡುತ್ತಿದೆ.
ಕಳೆದ ವರ್ಷ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಿಂದಾಗಿ ಇಂಥ ಸಣ್ಣಪುಟ್ಟ ವಿಚಾರಕ್ಕೂ ನೊಟೀಸ್ ಎನ್ನುವ ಅಸ್ತ್ರವನ್ನ ಪ್ರಯೋಗ ಮಾಡಲಾಗ್ತಿದೆ. ಇದ್ರಿಂದ ಸಿಬ್ಬಂದಿಗೆ ನೆಮ್ಮದಿಯಿಂದ ಕೆಲ್ಸ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಕೆಲವರ ಅಭಿಪ್ರಾಯ.
ನೊಟೀಸ್ ನಲ್ಲಿ ಉಲ್ಲೇಖವಾದ ಅಂಶ
ನೀವು 7X7 ದಿನ ಪಾಸಿನಲ್ಲಿ ದಿನಾಂಕ ಮತ್ತು ತಿಂಗಳನ್ನ ರಂಧ್ರಗೊಳಿಸದೆ ನೀಲಿ ಶಾಹಿಯಿಂದ ಗುರುತಿ ಪ್ರಯಾಣಿಕರಿಗೆ ವಿತರಣೆ ಮಾಡಿದ್ದಿರಿ. ಒಟ್ಟು 7 ದಿನ ಪಾಸಗಳನ್ನು ದಿನಾಂಕ ಮತ್ತು ತಿಂಗಳನ್ನ, ರಂಧ್ರಗೊಳಿಸದೆ ವಿತರಣೆ ಮಾಡಿದ್ದಿರಿ ಎಂದು ನಿರ್ವಾಹಕರಿಗೆ ನೊಟೀಸ್ ನೀಡಲಾಗಿದೆ.