ಬೆಂಗಳೂರು, (www.thenewzmirror.com) :
ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿ ಪದೇ ಪದೇ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ತಿದೆ. ಒಂದ್ಕಡೆ ರಸ್ತೆಗಳನ್ನ ಗುಂಡಿ ಮುಕ್ತ ಮಾಡ್ತಿಲ್ಲ.., ಮತ್ತೊಂದ್ಕಡೆ ಗುಣಮಟ್ಟದ ರಸ್ತೆಯನ್ನೂ ನಿರ್ಮಿಸುತ್ತಿಲ್ಲ.., ಈ ಎಲ್ಲಾ ಇಲ್ಲಗಳ ನಡುವೆ ಇದೀಗ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ ರಸ್ತೆ ಗುಂಡಿ ನಿರ್ವಹಣೆ ಮಾಡದಿದ್ರೆ ಸೇನೆಗೆ ನೀಡಿ ಅಂತ ತಾಕೀತು ಮಾಡಿದೆ.
ಅದ್ಯಾಕೋ ಏನೋ ಬಿಬಿಎಂಪಿಗೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡೋದು ಗೊತ್ತಿಲ್ಲ ಅಂತ ಕಾಣುತ್ತೆ.., ಹೀಗಾಗಿಯೇ ಡಾಂಬರ್ ಹಾಕಿ ತಿಂಗಳೊಳಗೇ ರಸ್ತೆಗಳಲ್ಲಿ ಗುಂಡಿ ಕಾಣಿಸುತ್ತಿದ್ದು, ಸಾರ್ವಜನಿಕ್ರು ಅಷ್ಟೇ ಅಲ್ದೇ ಕೋರ್ಟ್ ನ ಅಸಮಧಾನಕ್ಕೂ ಕಾರಣವಾಗಿದೆ.
ಪರಿಸ್ಥಿತಿ ಯಾವ ಮಟ್ಟ ತಲುಪಿತ್ತೆಂದರೆ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಹೈಕೋರ್ಟ್ ನಿಂದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಗೆ ಎರಡು ದಿನಗಳ ಹಿಂದೆಯಷ್ಟೇ ಜಾಮೀನು ಸಹಿತ ವಾರೆಂಟ್ ಜಾರಿಯಾಗಿತ್ತು. ಕೊನೆಗೂ ಇಂದು ಕೋರ್ಟ್ ಗೆ ಹಾಜರಾದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಎಸ್. ಪ್ರಭಾಕರ್ ಗೈರು ಹಾಜರಿಗೆ ಬೇಷರತ್ ಆಗಿ ನ್ಯಾಯಾಲಯದ ಕ್ಷಮೆ ಕೋರಿದರು.
ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರುವುದು ಗೊತ್ತಿದೆಯೇ? ನಿಮ್ಮ ಎಂಜಿನಿಯರ್ ಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ? ಜೈಲಿಗೆ ಕಳುಹಿಸದೇ ನಿಮಗೆ ಕರುಣೆ ತೋರಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಗೆ ಹೈಕೋರ್ಟ್ ಪ್ರಶ್ನೆ ಮಾಡಿತು.
ಈ ವೇಳೆ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ಕೇಳಿದಾಗ ಇಂಜಿನಿಯರ್ ಉತ್ತರ ನೀಡೋಕೆ ತಡಬಡಾಯಿಸಿದ್ರು. ಇದು ಕೋರ್ಟ್ ನ ಕೆಂಗಣ್ಣಿಗೆ ಗುರಿಯಾಯ್ತು.., ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರೋದು ಗೊತ್ತಿದೆಯಾ..? ನಿಮ್ಮ ಇಂಜಿನಿಯರ್ ಗಳು ಸಮಸ್ಯೆ ಸೃಷ್ಟಿ ಮಾಡ್ತಾ ಕಾಲಹರಣ ಮಾಡ್ತಿದ್ದಾರೆ. ಅದ್ರಲ್ಲೂ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಅಂತ ಪ್ರಶ್ನೆ ಮಾಡಿದೆ. ಇದಕ್ಕೆ ಬಿಬಿಎಂಪಿ ಕಡೆಯಿಂದ ಎಷ್ಟೇ ಸಮಜಾಯಿಷಿ ಬಂದ್ರೂ ಇದ್ರಿಂದ ಸಮಾಧಾನಗೊಳ್ಳದ ನ್ಯಾಯಾಲಯ, ಬಾಳಿಕೆ ಬರುವಂತ ರಸ್ತೆ ನಿರ್ಮಿಸಿ.., ಇದು ಸಾಧ್ಯವಾಗದಿದ್ರೆ ರಸ್ತೆ ನಿರ್ವಹಣೆ ಹೊಣೆಯನ್ನ ಮಿಲಿಟರಿ ಇಂಜಿನಿಯರ್ಗಳಿಗೆ ನೀಡೋದಾಗಿ ಎಚ್ಚರಿಕೆ ನೀಡಿದೆ.
ಸದ್ಯ ವಿಚಾರಣೆಯನ್ನ ಮುಂದಿನ ತಿಂಗಳು ಮುಂದೂಡಿದ ಕೋರ್ಟ್, ಅಷ್ಟರೊಳಗೆ ಗುಣಮಟ್ಟದ ರಸ್ತೆ ನಿರ್ಮಿಸಿರುವ ಕುರಿತು ಮಾಹಿತಿ ನೀಡುವಂತೆಯೂ ತಾಕೀತು ಮಾಡಿದೆ. ಅದೇನೇ ಇರ್ಲಿ, ಪದೇ ಪದೇ ರಸ್ತೆ ಗುಂಡಿ ವಿಚಾರದಲ್ಲಿ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ತಿದ್ರೂ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಕಡಿಮೆಯಾಗದಿರೋದು ಮಾತ್ರ ದುರಂತ.