ಬೆಂಗಳೂರು: (www.thenewzmirror.com)
ಕರ್ನಾಟಕದಲ್ಲಿ ಇನ್ಮುಂದೆ ಡ್ರೀಮ್ 11 ಕಾರ್ಯಾಚರಣೆ ಇರೋದಿಲ್ಲ. ಇದನ್ನ ಸ್ವತಃ ಕಂಪನಿಯೇ ಒಪ್ಪಿಕೊಂಡಿದ್ದು ಡ್ರೀಮ್ 11 ನಲ್ಲಿ ಹಣ ಗಳಿಸುವ ಆಸೆ ಹೊಂದಿದ್ದವರಿಗೆ ಇದೀಗ ನಿರಾಸೆಯಾಗಿದೆ.
ಆನ್‍ಲೈನ್ ಜೂಜು, ಬೆಟ್ಟಿಂಗ್ ಮತ್ತು ಪಣವನ್ನು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಯು ಇತ್ತೀಚೆಗೆ ತನ್ನ ಗೇಮಿಂಗ್ ಕಾನೂನಿಗೆ ತಿದ್ದುಪಡಿ ತಂದಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ತನ್ನ ಸದಸ್ಯ ಫ್ಯಾಂಟಸಿ ಸ್ಪೋಟ್ರ್ಸ್ ಆಪರೇಟರ್‍ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಅಭಿಪ್ರಾಯ ಹಂಚಿಕೊಂಡಿರುವ ಭಾರತೀಯ ಫ್ಯಾಂಟಸಿ ಕ್ರೀಡೆಗಳ ಒಕ್ಕೂಟ (ಎಫ್‍ಐಎಫ್‍ಎಸ್) ನಮಗೆ ಸಲಹೆ ನೀಡಿದೆ. ಏಕೆಂದರೆ ಫ್ಯಾಂಟಸಿ ಕ್ರೀಡೆಗಳ ಈ ಎಫ್‍ಐಎಫ್‍ಎಸ್ ಫಾಮ್ರ್ಯಾಟ್ ಅನ್ನು ಭಾರತದ ಗೌರವಾನ್ವಿತ ನ್ಯಾಯಾಲಯಗಳು ಜೂಜು, ಬೆಟ್ಟಿಂಗ್ ಅಥವಾ ಪಣ ಎಂದು ಪರಿಗಣಿಸುವುದಿಲ್ಲ.
ಆದಾಗ್ಯೂ, ಇತ್ತೀಚಿನ ಮಾಧ್ಯಮ ಪ್ರಸಾರವನ್ನು ಅನುಸರಿಸಿ, ನಮ್ಮ ಕರ್ನಾಟಕದ ಬಳಕೆದಾರರು ತಮ್ಮ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಆಳವಾದ ಕಾಳಜಿ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಬಳಕೆದಾರರ ಕಾಳಜಿಯನ್ನು ನಿವಾರಿಸುವ ಸಲುವಾಗಿ, ನಾವು ಕರ್ನಾಟಕದಲ್ಲಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ.
ಈ ನಿರ್ಧಾರವು ಕಾನೂನಿನ ಅಡಿಯಲ್ಲಿ ನಮ್ಮ ಹಕ್ಕುಗಳು ಮತ್ತು ವ್ಯಾಜ್ಯಗಳಿಗೆ ಪೂರ್ವಾಗ್ರಹ ರಹಿತವಾಗಿರುತ್ತದೆ.