ಬೆಂಗಳೂರು, (www.thenewzmirror.com) :
ಕರುನಾಡು ಒಮಿಕ್ರಾನ್ ತವರೂರು ಆಗ್ತಾ ಇದ್ಯಾ ಅನ್ನೋ ಆತಂಕ ಮೂಡಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಐದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ ಐದು ಹೊಸ ಒಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ ಅಂತ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿನ ಸಂಖ್ಯೆ 13ಕ್ಕೆ ಏರಿದಂತಾಗಿದೆ.
![](https://thenewzmirror.com/wp-content/uploads/2021/12/IMG-20211218-WA0053.jpg)
ಹೊಸದಾಗಿ ಪತ್ತೆಯಾಗಿರೋ ಸೋಂಕುಗಳೆಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಅನ್ನೋದು ಆತಂಕ ಇನ್ನಷ್ಟು ಹೆಚ್ಚಿಸಿದೆ.
ಎಲ್ಲಾ ಪ್ರಯಾಣಿಕರು ಯುಕೆ ಯಿಂದ ವಾಪಾಸ್ಸಾಗಿದ್ದು, ಎರಡು ಕ್ಲಸ್ಟರ್ ಗಳನ್ನೂ ಆರೋಗ್ಯ ಇಲಾಖೆ ಪತ್ತೆಮಾಡಿದೆ.., ಕ್ಲಸ್ಟರ್ 1 ರಲ್ಲಿ 14 ಪ್ರಕರಣಗಳು ಇದರಲ್ಲಿ 4 ಒಮಿಕ್ರಾನ್, ಹಾಗೆನೇ ಕ್ಲಸ್ಟರ್ 2 ರಲ್ಲಿ 19 ಪ್ರಕರಣಗಳು ಇದರಲ್ಲಿ 1 ಒಮಿಕ್ರಾನ್ ಸೋಂಕು ಪತ್ತೆಯಾಗಿದೆ ಅಂತ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.