ಬೆಂಗಳೂರು,(www.thenewzmirror.com):
ಕರೊನಾ ಮಹಾಮಾರಿ ಒಮಿಕ್ರಾನ್ ರೂಪದಲ್ಲಿ ವಕ್ಕರಿಸಿದ್ದು, ಇಡೀ ಜಗತ್ತನ್ನು ಮತ್ತೆ ಆತಂಕದ ಮಡುವಿಗೆ ದೂಡಿದೆ. ಓಮಿಕ್ರಾನ್ ಟೆನ್ಸನ್ ದಿನೇ ದಿನೇ ಜಾಸ್ತಿ ಆಗ್ತಿದ್ದು, ಇದ್ರ ಮಧ್ಯೆ ಕೆಲವು ಶಾಲೆ, ಕಾಲೇಜುಗಳಲ್ಲಿಯೂ ಕರೊನಾ ಹೆಚ್ಚಳವಾಗ್ತಿದೆ. ಇದು ಸಹಜವಾಗೇ ಸರ್ಕಾರಕ್ಕೆ ಆತಂಕ ತಂದಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅಭಿಪ್ರಾಐ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಟೆನ್ಸನ್ ದಿನೇ ದಿನೇ ಜಾಸ್ತಿ ಆಗ್ತಿದೆ. ಒಂದು ವರ್ಷ ಒಂಬತ್ತು ತಿಂಗಳು ಶಾಲಾ ಕಾಲೇಜುಗಳ ಕಡೆ ವಿದ್ಯಾರ್ಥಿಗಳು ಮುಖ ಹಾಕಿರಲಿಲ್ಲ. ಆದ್ರೆ ಎರಡನೇ ಅಲೆ ತಗ್ಗಿದ ಬಳಿಕ ಸಿಎಂ ಮತ್ತು ಶಿಕ್ಷಣ ಸಚಿವ ನಾಗೇಶ್ ಅಸಕ್ತಿ ತೋರಿ ಶಾಲಾ ಕಾಲೇಜು ಒಪನ್ ಮಾಡುವ ಕೆಲಸ ಮಾಡಿದ್ರು. ಆದ್ರೆ ಈಗ ಹೊಸದಾಗಿ ಕಾಣಿಸಿಕೊಂಡಿರುವ ಓಮಿಕ್ರಾನ್ ಮತ್ತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಒಮಿಕ್ರಾನ್ ಟೆನ್ಷನ್ ಹೆಚ್ಚಾಗುತ್ತಿರೋ ಹೊತ್ತಲ್ಲೇ ಈಗ ರಾಜ್ಯದ ಕೆಲ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸುತ್ತಿದೆ. ಶಾಲೆ-ಕಾಲೇಜುಗಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದ್ದು, ಜೀವ ಇದ್ರೆ ಮುಂದೆ ವಿದ್ಯಾಬ್ಯಾಸ ಅನ್ನೋ ಮಾತನ್ನ ಪೋಷಕರು ಹೇಳ್ತಿದ್ದಾರೆ.
ವಸತಿ ಶಾಲೆಗಳು ಬಿಟ್ರೆ ಬೇರೆ ಶಾಲೆಗಳಲ್ಲಿ ಕರೋನಾ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಸದ್ಯ ಶಾಲೆ ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಸೋಂಕು ಹೆಚ್ಚಳ ಸ್ವಲ್ಪ ಆತಂಕ ತಂದಿದೆ. ಅಕಸ್ಮಾತ್ ಸೋಂಕು ಹೆಚ್ಚಾದ್ರೆ ಸಿಎಂ ಜತೆ ಚರ್ಚಿಸಿ ಅಂತಿಮವಾದ ನಿರ್ಧಾರ ಮಾಡ್ತೀವಿ ಎಂದಿದ್ದಾರೆ.
ಇನ್ನು ಪೋಷಕರಿಗೆ ಧೈರ್ಯ ಹೇಳಿರುವ ಸಚಿವರು. ಶಾಲೆ ನಡೆಸಲೇಬೇಕೆಂಬ ಹಠ ಸರ್ಕಾರಕ್ಕೆ ಇಲ್ಲ. ಪೊಷಕರು ಮತ್ತು ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಜಿಲ್ಲೆಗಳಲ್ಲಿನ ವಸತಿ ಶಾಲೆಗಳ ಪರಿಸ್ಥಿತಿ, ಕಡ್ಡಾಯವಾಗಿ ಕರೋನಾ ನಿಯಮ ಪಾಲಿಸುವಂತೆ ಡಿಡಿಪಿಗಳಿಗೆ ಸೂಚಿಸಿರೋದಾಗಿ ನಾಗೇಶ್ ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿಗಳು ಸ್ವತಂತ್ರ ಸಿಕ್ಕ ಪಕ್ಷಿಗಳಂತೆ ಶಾಲೆಗೆ ಬರ್ತಿದ್ರು. ಆದ್ರೆ ರಾಜ್ಯದಲ್ಲಿ ಎಂಟ್ರಿ ಕೊಟ್ಟಿರುವ ಹೊಸ ತಳಿಯ ಓಮಿಕ್ರಾನ್ ವೈರಸ್ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೇ ಪೊಷಕರು ಮತ್ತು ಸರ್ಕಾರಕ್ಕೆ ಟೆನ್ಷನ್ ತರಿಸಿದೆ.