ಬೆಂಗಳೂರು,(www.thenewzmirror.com):
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಹಿಜಾಬ್ ವಿವಾದ ಹೆಚ್ಚಾಗ್ತಿದೆ.. ಒಂದ್ಕಡೆ ಹೈ ಕೋರ್ಟ್ ವಿಚಾರಣೆ ನಡೆಸ್ತಿದ್ರೆ ಮತ್ತೊಂದ್ಕಡೆ ವಿವಾದದ ಕಿಚ್ಚು ಹೆಚ್ಚಾಗ್ತಿದೆ.
ಇದರ ಬೆನ್ನಲ್ಲೇ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರುತ್ತಿರೋದನ್ನ ಅರಿತ ಸರ್ಕಾರ ಮೂರು ದಿನ ರಜೆ ಘೋಷಣೆ ಮಾಡಿದೆ.
ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿದ ಸಿಎಂ, ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರೋದಾಗಿ ತಿಳಿಸಿದ್ರು.
ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಇದೇ ವೇಳೆ ಮನವಿ ಮಾಡಿದ್ದಾರೆ.