ಬೆಂಗಳೂರು, (www.thenewzmirror.com) :
ಒಂದ್ಕಡೆ ಮಾಜಿ ಸಿಎಂ ಬಿಎಸ್ ವೈ ಅವರು ದೂರ ಆಗುತ್ತಾರೆ ಅನ್ನೋ ಮಾತುಗಳ ನಡುವೆನೇ ಬಿಎಸ್ ವೈ ಅವರ ಸ್ಥಾನ ತುಂಬುವವರು ಯಾರು ಅನ್ನೋ ಪ್ರಶ್ನೆಗೆ ಇದೊಇಗ ಉತ್ತರ ಸಿಕ್ಕಿದೆ.
ಬಿಎಸ್ ವೈ ಉತ್ತರಾಧಿಕಾರಿಯಾಗಿ ಸಂಸದ ಬಿ.ವೈ. ರಾಘವೇಂದ್ರ ಆಯ್ಕೆಆಗುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಪೂರಕ ಎನ್ನುವಂತೆ ರಾಘವೇಂದ್ರ ಕೊಟ್ಟಿರುವ ಹೇಳಿಕೆ ಇದಕ್ಕೆ ಇಂಬು ನೀಡುತ್ತಿದೆ
ಪಕ್ಷದ ಹೈಕಮಾಂಡ್ ಒಪ್ಪಿದ್ರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಪಕ್ಷ ಯಡಿಯೂರಪ್ಪ ಹಾಗೂ ನಮ್ಮನ್ನು ಬೆಳೆಸಿದೆ. ಪಕ್ಷ ನಮಗೆ ತಾಯಿ ಇದ್ದಂತೆ. ವರಿಷ್ಠರು ಬಯಸಿದ್ರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.
ಇದೇ ವೇಳೆ ಪಕ್ಷ ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸಂಘಟನೆ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಕ್ಷ ಕಟ್ಟಲು ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದಾರೆ.