ಬೆಂಗಳೂರು,(www.thenewzmirror.com):
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಚಿನ್ನದ ಇಟ್ಟಿಗೆಯನ್ನ ಸಮರ್ಪಣೆ ಮಾಡಲಾಯಿತು. ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ರಾಮನ ಭಕ್ತರೂ ಆಗಿರುವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ರಾಮನಗರದ 150 ಭಕ್ತರೊಂದಿಗೆ ಭೇಟಿ ನೀಡಿ ದೃಢ ನಂಬಿಕೆಯೊಂದಿಗೆ ಅರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ರಾಮನಿಂದ ನಮ್ಮಲ್ಲಿ ರಾಮರಾಜ್ಯದ ಪರಿಕಲ್ಪನೆ ಬಂದಿದೆ.ರಾಮಾಯಣದ ಕಥೆ ಮೂಲಕ ಪ್ರಸಿದ್ಧಿ ಪಡೆದಿರುವ ಈ ಜಿಲ್ಲೆಯ ಭಕ್ತ ರೊಂದಿಗೆ ಚಿನ್ನದ ಇಟ್ಟಿಗೆ ಕೊಟ್ಟಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಶ್ರೀರಾಮ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಭಾರತೀಯತೆಯ ಪ್ರತೀಕವಾಗಿದ್ದಾನೆ. ನಮ್ಮೆಲ್ಲರ ಪಾಲಿನ ಆದರ್ಶಮೂರ್ತಿಯಾಗಿರುವ ಶ್ರೀರಾಮನಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದ್ದು, 2024 ರ ಜನವರಿಯ ಹೊತ್ತಿಗೆ ಮಂದಿರದ ಕಾಮಗಾರಿ ಮುಗಿದು ಭಕ್ತರ ದರ್ಶನಕ್ಕೆ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆನೇ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ತಮ್ಮ ಕಾಣಿಕೆಯೂ ಇರಬೇಕೆಂದು ರಾಮನಗರದ ಭಕ್ತ ಮಹಾಶಯರು ಅಪೇಕ್ಷೆ ವ್ಯಕ್ತಪಡಿಸಿದ್ದರು ಅದನ್ನ ಇದೀಗ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ರಾಮನಗರಕ್ಕೂ ರಾಮಾಯಣಕ್ಕೂ ಎಲ್ಲಿಲ್ಲದ ನಂಟು.!
ರಾಮನಗರಕ್ಕೆ ಹೊಂದಿಕೊಂಡಿರುವ ಕಾಕಾಸುರ ಬೆಟ್ಟ ಕುರಿತಾದ ಅನೇಕ ದಂಥ ಕಥೆಗಳಿವೆ. ರಾಮ ಮತ್ತು ಸೀತೆ ವಸವಾಸಕ್ಕೆ ಹೊರಟಾಗ ಸೀತೆಯ ಸೌಂದರ್ಯಕ್ಕೆ ಆಕರ್ಷಿತನಾದ ರಾಕ್ಷಸ ಕಾಕಾಸುರ ಒಂದು ಕಾಗೆಯ ರೂಪದಲ್ಲಿ ಬಂದು ಆಕೆಯನ್ನ ಕಾಡುತ್ತಿದ್ದನಂತೆ. ಆಗ ಸೀತೆ ರಾಮನ ನೆರವು ಕೋರಿದಾಗ, ರಾಮ ಒಂದು ಹುಲ್ಲಿನ ಕಡ್ಡಿಯನ್ನ ಕಾಗೆಯತ್ತ ಎಸೆದನಂತೆ. ಅದು ಒಂದು ಬಾಣವಾಗಿ ತೊಂದರೆ ಕೊಡುತ್ತಿದ್ದ ಕಾಗೆಯ ಕಣ್ಣಿಗೆ ತಾಗಿ ಅದರ ಕಣ್ಣು ಕುರುಡಾಯಿತಂತೆ. ಅಷ್ಟೇ ಅಲ್ಲದೆ ತನ್ನ ಜೀವಕ್ಕೆ ಕುತ್ತು ಬಂದಾಗ ಕಾಕಾಸು ಭಗವಾನ್ ರಾಮನಲ್ಲಿ ಪ್ರಾಣ ಭಿಕ್ಷೆ ಬೇಡಿದನಂತೆ. ಆಗ ರಾಮ ಕಾಕಾಸುರನ್ನ ಕ್ಷಮಿಸಿ ಬೆಟ್ಟಕ್ಕೆ ಹಿಂದಿರುಗದಂತೆ ಷರತ್ತು ವಿಧಿಸಿದ್ದನಂತೆ. ಅಂದಿನಿಂದ ಇಲ್ಲೀವರೆಗೂ ಒಂದು ಕಾಗೆಯೂ ಇಲ್ಲಿ ಕಾಣುತ್ತಿಲ್ಲ ಎನ್ನುವುದು ಸ್ಥಳೀಯರ ನಂಬಿಕೆ.