ಬೆಂಗಳೂರು, (www.thenewzmirror.com):
ಇತ್ತೀಚೆಗೆ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆದಿದೆ. ಕೇಂದ್ರ ಈ ಹಿಂದೆ ಜಾರಿಗೆ ತರಲು ಮುಂದಾಗಿದ್ದ ಆ ಕಾಯ್ದೆ ವಿರೋಧಿಸಿ ಸಾಕಷ್ಟು ರೈತರು ಹೋರಾಟ ಮಾಡಿದ್ರು. ಹೀಗೆ ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಹೋರಾಟದಲ್ಲಿ ಪ್ರಾಣತೆತ್ತ 750 ರೈತರಿಗೆ 3 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ ತೆಲಂಗಾಣ ಸರ್ಕಾರ ಎಂದು ತಿಳಿದು ಬಂದಿದೆ…!!
ರೈತ ಹೋರಾಟದ ವೇಳೆ ಮೃತರಾಗಿರುವ ಅನ್ನದಾತರಿಗೆ ಪರಿಹಾರ ನೀಡುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರ ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿರುವ 750 ರೈತ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ ಎಂದು ಕೆಲವು ಕಡೆಗಳಲ್ಲಿ ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕೆಟಿಆರ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.