ಬೆಂಗಳೂರು, (www.thenewzmirror.com):
ಹಸಿದ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಅನ್ನೋ ಗಾದೆಮಾತು ಎಲ್ಲರಿಗೂ ಗೊತ್ತೇ ಇದೆ.. ಈ ಗಾದೆ ಮಾತು ಸಾರಿಗೆ ಸಚಿವರಿಗೆ ಸೂಕ್ತ ಅಂತ ಅನ್ನಿಸುತ್ತೆ. ಯಾಕಂದರೆ ಲಕ್ಷಾಂತರ ರೂಪಾಯಿ ಕೊಟ್ಟು ಬಸ್ ಅನ್ನ ಖರೀದಿ ಮಾಡ್ತಾರೆ( ಮತ್ತೆ ಕೆಲವುಗಳಿಗೆ ಒಂದು ಕೋಟಿನೂ ಮೀರಿರುತ್ತೆ). ಅಂಥದರಲ್ಲಿ ದಶಮಿ ಹಬ್ಬಕ್ಕೆ ಡೆಕೊರೇಟ್ ಮಾಡಲು ಕೇವಲ ನೂರು ರೂಪಾಯಿ ಕೊಡುವ ಕೆಲ್ಸ ನಾಲ್ಕೂ ಸಾರಿಗೆ ನಿಗಮಗಳಿಂದ ಆಗುತಿದೆ.
ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕೂ ನಿಗಮಗಳು ವರ್ಷಕ್ಕೊಮ್ಮೆ ಬರುವ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡೋದಕ್ಕೂ ಕೊಕ್ಕೆ ಹಾಕುವ ಕೆಲ್ಸವನ್ನ ಮಾಡುತ್ತಿದೆ. ರೂಟ್ ಗಳಲ್ಲಿ ನಿರೀಕ್ಷಿತ ಆದಾಯ ಬರಲಿಲ್ಲ ಅಂದ್ರೆ ಸುಖಾಸುಮ್ಮನೆ ನೊಟೀಸ್ ನೀಡುವ ಸಂಸ್ಥೆ., ಇಲಾಖೆಗೆ ಆದಾಯ ತರುವ ಬಸ್ ಗಳಿಗೆ ಪೂಜೆ ಮಾಡೋದಕ್ಕೆ ಕನಿಷ್ಠ ಹಣವನ್ನ ನೀಡುತ್ತಿರುವುದು ಸಿಬ್ಬಂದಿ ಅಸಮಧಾನಕ್ಕೆ ಕಾರಣವಾಗಿದೆ.
ದುಬಾರಿ ದುನಿಯಾದಲ್ಲಿ ಕೇವಲ 100 ರೂ ಒಂದು ಬಸ್ ಅಲಂಕಾರ ಮಾಡಲು ಸಾಕಾಗುತ್ತಾ…? ಎಂದು ಪ್ರಶ್ನೆ ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ. ಮೊದಲೇ ಅರ್ಧಂಬರ್ಧ ವೇತನ ನೀಡಿ ಕೈ ತೊಳೆದುಕೊಂಡಿರುವ ನಿಗಮಗಳು ಇದೀಗ ನಾಮಕಾವಸ್ತೆ ಎನ್ನುವಂತೆ ನೀಡಿದ ಹಣ ನೀಡದೇ ಇದ್ದರೆ ಚೆನ್ನಾಗಿ ಇರುತ್ತಿತ್ತು ಅನ್ನೋದು ಅಭಿಪ್ರಾಯವೂ ಕೇಳಿಬರುತ್ತಿದೆ.