ಭೋಪಾಲ್ (thenewzmirror);
ಸಾಮಾನ್ಯವಾಗಿ ಉದ್ಯೋಗದಲ್ಲಿರುವವರು ಏನಾದರೊಂದು ಬಲವಾದ ಕಾರಣಕ್ಕೆ ರಜೆ ಪಡೀತಿವಿ.. ಆದರೆ ಮಧ್ಯಪ್ರದೇಶದ ಇಂಜಿನಿಯರ್ ಒಬ್ಬರು ವಿಚಿತ್ರ ಕಾರಣ ನೀಡಿ ನನಗೆ ರಜೆ ಕೇಳಿದ್ದಾರೆ. ಆ ಕಾರಣ ಕೇಳಿ ಸ್ವತಃ ಮೇಲಾಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಎಂದಿನಂತೆ ಕೆಲ್ಸಕ್ಕೆ ಬಂದಿದ್ದ ಇಂಜಿನಿಯರ್ ಸೀದಾ ತನ್ನ ಮೇಲಾಧಿಕಾರಿ ಬಳಿ ತೆರಳಿ, ನನಗೆ ನನ್ನ ಪೂರ್ವ ಜನ್ಮದ ನೆನಪು ಮರುಕಳಿಸಿದೆ. ಈ ಕುರಿತು ಅಧ್ಯಯನ ಮಾಡಬೇಕಿದೆ. ಭಗವದ್ಗೀತೆ ಮಾರ್ಗದಲ್ಲಿ ನಡೆಯಬೇಕಿದೆ ಹೀಗಾಗಿ ನನಗೆ ರಜೆ ನೀಡಿ ಎಂದು ಕೇಳಿದ್ದಾರಂತೆ.
ನನ್ನ ಮನವಿ ಪರಿಶೀಲಿಸಿ ನನಗೆ ರಜೆ ಮಂಜೂರು ಮಾಡಿ ಎಂದು ಸಬ್ ಎಂಜಿನಿಯರ್ ರಾಜ್ ಕುಮಾರ್ ಯಾದವ್ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಂಸತ್ ಸದಸ್ಯ ಅಸಾದುದ್ದೀನ್ ಓವೈಸಿ ಪೂರ್ವ ಜನ್ಮದಲ್ಲಿ ಬಾಲ್ಯ ಕಾಲದ ಸ್ನೇಹಿತ ನಕುಲನಾಗಿದ್ದ. ಮೋಹನ್ ಭಾಗವತ್ ಶಕುನಿ ಮಾಮನಾಗಿದ್ದ ಎಂದು ರಾಜ್ ಕುಮಾರ್ ಯಾದವ್ ಹೇಳಿದ್ದಾರಂತೆ.
ರಜೆ ಅರ್ಜಿ ನೋಡಿ ಹಿರಿಯ ಅಧಿಕಾರಿಗಳು ಸುಸ್ತಾಗಿದ್ದಾರಂತೆ.