ಬೆಂಗಳೂರು,(www.thenewzmirror.com) :
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ 25 ಮಂದಿ ಹೊಸ ಸದಸ್ಯರು ಆಯ್ಕೆಯಾಗುದ್ದಾರೆ. ಅದರಲ್ಲಿ ಬಹುತೇಕ ಮಂದಿಗೆ ವಿಧಾನ ಸಭೆ ಸದಸ್ಯರ ನಂಟಿದೆ ಅರ್ಥಾತ್ ಎಂಎಲ್ ಎ ಗಳ ಸಂಬಂಧಿಕರು.
ಹೊಸದಾಗಿ ಆಯ್ಕೆಯಾಗಿರುವ ಒಟ್ಟು 25 ಸದಸ್ಯರ ಪೈಕಿ 10 ಸದಸ್ಯರಿಗೆ ರಾಜಕೀಯ ನಂಟಿದೆ. ಅಂದರೆ ಹಾಲಿ ಪ್ರಭಾವಿ ರಾಜಕಾರಣಿಗಳ ಸಂಬಂಧಿಗಳಾಗಿದ್ದಾರೆ.
ಇದೂವರೆಗೂ ಜೆಡಿಎಸ್ ಅನ್ನ ಫ್ಯಾಮಿಲಿ ಪಕ್ಷ.., ಅಲ್ಲಿ ಇರೋದು ಫ್ಯಾಮಿಲಿ ಪಾಲಿಟಿಕ್ಸ್ ಎಂದು ಟೀಕಿಸುವ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿಯೂ ಈ ಬಾರಿ ಪರಿಷತ್‌ನಲ್ಲಿ ಕುಟುಂಬದ ನಂಟನ್ನ ಕಾಣಬಹುದು.
ಕಾಂಗ್ರೆಸ್ ನಲ್ಲಿ ನಲ್ಲಿ ಐವರು ಸದಸ್ಯರಿದ್ದರೆ, ಬಿಜೆಪಿಯಲ್ಲಿ ಮೂವರು ಹಾಗೂ ಜೆಡಿಎಸ್ ನಿಂದ ಒಬ್ಬರು ಹಾಗೂ ಮತ್ತೊಬ್ಬರು ಪಕ್ಷೇತರರರು ಆಯ್ಕೆಯಾಗಿದ್ದಾರೆ.
ಫ್ಯಾಮಿಲಿ ಪಾಲಿಟಿಕ್ಸ್ ನಿಂದ ಬಂದವರು ಯಾರು ಯಾರು ಅನ್ನೋದನ್ನ ನೋಡುವುದಾದರೆ..,
- ಡಾ.ಸೂರಜ್ ರೇವಣ್ಣ- ಶಾಸಕ ಹೆಚ್.ಡಿ. ರೇವಣ್ಣ ಪುತ್ರ
- ಲಖನ್ ಜಾರಕಿಹೊಳಿ- ಶಾಸಕ ರಮೇಶ್ ಜಾರಕಿಹೊಳಿ ಸಹೋದರ
- ಪ್ರದೀಪ್ ಶೆಟ್ಟರ್ – ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ
- ಡಿ.ಎಸ್. ಅರುಣ್ – ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಪುತ್ರ
- ಸುಜಾ ಕುಶಾಲಪ್ಪ – ಅಪ್ಪಚ್ಚು ರಂಜನ್ ಸಹೋದರ
- ಆರ್ ರಾಜೇಂದ್ರ – ಮಾಜಿ ಶಾಸಕ ಕೆ.ಎನ್. ರಾಜ ಪುತ್ರ
- ಎಸ್. ರವಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಸಂಬಂಧಿ
- ಚನ್ನರಾಜು ಹಟ್ಟಿಹೊಳಿ – ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ
- ಸುನೀಲ್ ಗೌಡ ಪಾಟೀಲ್ – ಮಾಜಿ ಸಚಿವ ಎಂ.ಬಿ.ಪಾಟೀಲ್ ಸೋದರ
- ಶರಣಗೌಡ ಪಾಟೀಲ್ – ಶಾಸಕ ಅಮರೇಗೌಡ ಪಾಟೀಲ್ ಸಹೋದರ