ಬೆಂಗಳೂರು, ( www.thenewzmirror.com) ;
ಶ್ರವಣಬೆಳಗುಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಇಂದು ನಿಧನರಾಗಿದ್ದಾರೆ.
1949 ರ ಮೇ 3 ರಂದು ಕಾರ್ಕಳ ತಾಲೂಕಿನ ವರಂಗದಲ್ಲಿ ಜನಿಸಿದ್ದ ಸ್ವಾಮೀಜಿ, ಕಳೆದ 53 ವರ್ಷದಿಂದ ಶ್ರವಣಬೆಳಗುಳದ ಮಠಾಧೀಪತಿಯಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ತನ್ನ 20 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಮಹಾಸ್ವಾಮೀಜಿ, ಅಂದಿನಿಂದ ಇಂದಿನ ವರೆಗೂ ಸಮುದಾಯದ ಏಳಿಗೆ ಜತೆಗೆ ಸಮಾಜವನ್ನ ತಿದ್ದುವ ಕಾರ್ಯವನ್ನ ನಿರಂತರವಾಗಿ ಮಾಡುತ್ತಾ ಬರುತ್ತಿದ್ದರು.