ವಾಷಿಂಗ್ಟನ್:
ವಿಶ್ವದ ಹಿರಿಯಣ್ಣ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 25 ವರ್ಷಗಳ ಬಳಿಕ ಅಮೆರಿಕದ ಫೋರ್ಬ್ಸ್ನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಟ್ರಂಪ್ನ ಸಂಪತ್ತು 2.5 ಬಿಲಿಯನ್ ಡಾಲರ್ ಆಗಿದ್ದು, 600 ಮಿಲಿಯನ್ ಡಾಲರ್ ಕಡಿಮೆಯಾದ ಕಾರಣದಿಂದಾಗಿ ಟ್ರಂಪ್ರನ್ನು ತನ್ನ ಶ್ರೀಮಂತರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಫೋರ್ಬ್ಸ್ನ ವರದಿ ತಿಳಿಸಿದೆ.
ಕರೊನಾ ವೈರಸ್ ಸೋಂಕು ಆರಂಭವಾದ ಬಳಿಕ ಟ್ರಂಪ್ನ ಸಂಪತ್ತಿನಲ್ಲಿ ಸುಮಾರು 600 ಮಿಲಿಯನ್ ಡಾಲರ್ಸ್ ಸಂಪತ್ತು ನಷ್ಟವುಂಟಾಗಿದೆ. ಅಮೆರಿಕಾದ 400 ಶ್ರೀಮಂತರ ಪಟ್ಟಿಯಲ್ಲಿ 7 ಭಾರತೀಯ ಮೂಲದವರಿಗೆ ಸ್ಥಾನಅಮೆರಿಕಾದ 400 ಶ್ರೀಮಂತರ ಪಟ್ಟಿಯಲ್ಲಿ 7 ಭಾರತೀಯ ಮೂಲದವರಿಗೆ ಸ್ಥಾನ ಲಭಿಸಿದೆ.