ಬೆಂಗಳೂರು, (www.thenewzmirror.com):
ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅಂತ ಕರೆಸಿಕೊಳ್ತಿರೋ ಬಿಎಂಟಿಸಿ ಬಸ್ ಇಂದು ಧಗ ಧಗ ಹೊತ್ತಿ ಉರಿದಿದೆ.., ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಇಂದು ಬೆಳಿಗ್ಗೆ ಸುಮಾರು 1130 ರ ಸಮಯದಲ್ಲಿ ಡಿಪೋ 16 ದೀಪಾಂಜಲಿನಗರಕ್ಕೆ ಸೇರಿದ ಬಿಎಂಟಿಸಿ ಬಸ್ ಸಂಖ್ಯೆ ಕೆಎ- 57 ಎಫ್ -1592 ಕೆಂಪೇಗೌಡ ಬಸ್ ನಿಲ್ದಾಣದಿಂದ ದೀಪಾಂಜಲಿನಗರಕ್ಕೆ 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಮಯದಲ್ಲಿ ಮಕ್ಕಳಕೂಟ ಸಿಗ್ನಲ್ ಬಳಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕರ್ತವ್ಯ ನಿರತ ಚಾಲಕರ ಸಮಯ ಪ್ರಜ್ಞೆ ಯಿಂದ ವಾಹನದಲ್ಲಿದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿರುತ್ತಾರೆ. ತದನಂತರ ಬಸ್ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡಿರುತ್ತದೆ.
ಬಸ್ ನಲ್ಲಿದ್ದ 25 ಕ್ಕೂ ಹೆಚ್ಚು ಪ್ರಯಾಣಿಕರು ಎದ್ನೋ ಬಿದ್ನೋ ಅಂತ ಬಸ್ ನಿಂದ ಇಳಿದು ತಮ್ಮ ಪ್ರಾಣವನ್ನ ಉಳಿಸಿಕೊಂಡ್ತು. ಬೆಂಕಿ ಕಾಣಿಸಿಕೊಂಡಾಗ ಮೊದಲು ಬಿಬಿಎಂಪಿ ಕಸದ ವಾಹನದಿಂದ ಬೆಂಕಿ ನಂದಿಸೋ ಕಾರ್ಯ ನಡೆಸಲಾಯಿತು. ಆದ್ರೂ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ್ದರಿಂದ ಆರುವ ಯಾವ್ದೇ ಲಕ್ಷಣಗಳೂ ಕಾಣಲಿಲ್ಲ.., ಬಳಿಕ ಒಂದು ಅಗ್ನಿ ಶಾಮಕ ವಾಹನ ಬಂದು ಬೆಂಕಿ ನಂದಿಸೋ ಕೆಲ್ಸವನ್ನ ಮಾಡ್ತು. ಅಷ್ಟರಲ್ಲಾಗಲೇ ಬಸ್ ನ ದಾಖಲೆಗಳು.., ಟಿಕೆಟ್ ಗಳೆಲ್ಲವೂ ಸುಟ್ಟು ಕರಕಲಾಗಿದ್ವು.
ಘಟನೆ ನಡೆದಿದ್ದರಿಂದ ಕೆಲ ಕಾಲ ಆತಂಕದ ವಾತವರಣ ನಿರ್ಮಾಣವಾಗಿತ್ತು. ಅಷ್ಟೇ ಅಲ್ದೇ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.., ಸದ್ಯ ಬಸ್ ಅನ್ನ ಶಾಂತಿನಗರದಲ್ಲಿರೋ ವರ್ಕ್ ಶಾಪ್ ಗೆ ತೆಗೆದುಕೊಂಡು ಹೋಗಲಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದಿರೋದೇ ಇದಕ್ಕೆಲ್ಲಾ ಕಾರಣ ಅಂತ ಮೇಲ್ನೋಟಕ್ಕೆ ಹೇಳಲಾಗ್ತಿದೆ. ಅದೇನೇ ಇರ್ಲಿ, ಸ್ವಲ್ಪ ಯಾಮಾರಿದ್ರೂ ಬಸ್ ನಲ್ಲಿದ್ದ 35 ಪ್ರಯಾಣಿಕ್ರಿಗೆ ಇಂದು ಅಶುಭ ಶುಕ್ರವಾರ ಆಗ್ತಿತ್ತು.
ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಗುತ್ತಿದೆಯಾದ್ರೂ ಬಸ್ ಅನ್ನ ಸಮರ್ಪಕ ನಿರ್ವಹಣೆ ಮಾಡದೇ ಇರೋದೇ ಇದಕ್ಕೆಲ್ಲಾ ಕಾರಣ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ.,
ಬಿಎಂಟಿಸಿ ಹೇಳುವುದೇನು..?
ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಬೆಂಕಿಯನ್ನು ನಂದಿಸಿರುತ್ತಾರೆ ಹಾಗೂ ಹೆಚ್ಚಿನ ಹಾನಿಯಾಗುವುದನ್ನು ನಿಯಂತ್ರಿಸಿರುತ್ತಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿರುವುದಿಲ್ಲ. ಇದಲ್ಲದೆ, ಘಟನೆಯ ಕಾರಣದ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ತಂಡಕ್ಕೆ ಸೂಚಿಸಲಾಗಿದೆ.