ಬೆಂಗಳೂರು,(www.thenewzmirror.com):
ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಮಾಡಲಾಗಿದೆ. ಹೀಗಾಗಿ ಪ್ರತಿ ವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸೋಕೆ ಸರ್ಕಾರ ತೀರ್ಮಾನ ಮಾಡಿ ಅಧಿವೇಶನವನ್ನೂ ನಡೆಸುತ್ತಿದೆ.
ಬೆಂಗಳೂರಿನಿಂದ ಹತ್ರತ್ರ ಐನೂರು ಕಿಲೋ ಮೀಟರ್ ದೂರದಲ್ಲಿರೋ ಬೆಳಗಾವಿಯಲ್ಲಿನ ಸುವರ್ಣಸೌಧದಲ್ಲಿ ಅಧಿವೇಶನ ನಡೆಸೋದು ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿದೆ.
ಇದೂವರೆಗೂ ಬೆಳಗಾವಿಯಲ್ಲಿ ಸದ್ಯ ಇವತ್ತಿಂದ ಆರಂಭವಾಗ್ತಿರೋದೂ ಸೇರಿದಂತೆ ಒಟ್ಟು 10 ಅಧಿವೇಶನಗಳು ನಡೆದಿವೆ. ಇದೂವರೆಗೂ(ಪ್ರಸ್ತುತ ಅಧಿವೇಶನದ ಲೆಕ್ಕಬಿಟ್ಟು) ಬರೋಬ್ಬರಿ 98.80 ಕೋಟಿ ರೂ ಗಳನ್ನ ಖರ್ಚು ಮಾಡಿದೆ.
ಹಾಗಿದ್ರೆ ಇದೂವರೆಗೂ ನಡೆದ ಅಧಿವೇಶನದಲ್ಲಿ ಸರ್ಕಾರ ಮಾಡಿರುವ ಖರ್ಚಿನ ವಿವರ
2006 ರಲ್ಲಿ ಐದು ದಿನಕ್ಕೆ 500 ಲಕ್ಷ ಖರ್ಚು
2009 ರಲ್ಲಿ 8 ದಿನಕ್ಕೆ 1233.64 ಲಕ್ಷ
2009 ರಲ್ಲಿ 7 ದಿನಕ್ಕೆ 739.07 ಲಕ್ಷ
2013 ರಲ್ಲಿ 10 ದಿನಕ್ಕೆ 1440 ಲಕ್ಷ
2014 ರಲ್ಲಿ 10 ದಿನಕ್ಕೆ 1009 ಲಕ್ಷ
2015 ರಲ್ಲಿ 10 ದಿನಕ್ಕೆ 695.73 ಲಕ್ಷ
2016 ರಲ್ಲಿ 10 ದಿನಕ್ಕೆ 720.41 ಲಕ್ಷ
2017 ರಲ್ಲಿ 10 ದಿನಕ್ಕೆ 2157.14 ಲಕ್ಷ
2018 ರಲ್ಲಿ 10 ದಿನಕ್ಕೆ 1318.15 ಲಕ್ಷ