ಬೆಂಗಳೂರು,(www.thenewzmirror.com):
ರಾಜ್ಯದಲ್ಲಿ ಅತಿ ಹೆಚ್ಚು ಬೊಕ್ಕಸಕ್ಕೆ ಆದಾಯ ತರೋ ಇಲಾಖೆ ಅಂದ್ರೆ ಅದು ಸಾರಿಗೆ ಇಲಾಖೆ ಅರ್ಥಾತ್ ಆರ್ ಟಿಓ. ರಾಜ್ಯದ ಶೇಕಡಾ ೫೦ ರಷ್ಟು ಬೊಕ್ಕಸ ತುಂಬುವುದು ಇದೇ ಇಲಾಖೆ.. ಹೀಗಾಗಿ ಈ ಇಲಾಖೆಯ ಮೇಲೆ ಸರ್ಕಾರದ ಇನ್ನಿಲ್ಲದ ಪ್ರೀತಿ.
ಹೊಸ ವಾಹನ ಖರೀದಿ ಮಾಡಿದ್ರೂ ಆದಾಯ.., ಮಾರಿದ್ರೂ ಆದಾಯ.., ಅದ್ರಲ್ಲೂ ಹಬ್ಬ ಹರಿದಿನ ಅಂತ ಬಂದ್ರೆ ಆದಾಯ ಇನ್ನಷ್ಟು ಹೆಚ್ಚಾಗುತ್ತದೆ ಕಾರಣ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಳ ವಾಗುತ್ತೆ.

ಅಷ್ಟಕ್ಕೂ ನಾನು ಈ ವಿಚಾರ ಯಾಕೆ ಹೇಳ್ತಾ ಇದೀನಿ ಅನ್ನೋದ್ರ ಬಗ್ಗೆ ಸವಿವರವಾಗಿ ಹೇಳ್ತೀನಿ ಕೇಳಿ.., ಹೇಗೆ ಕೆಲವೊಂದು ಸಮಯದಲ್ಲಿ ವಾಹನ ಖರೀದಿ ಹೆಚ್ಚಾಗುತ್ತೋ ಹಾಗೆಯೇ ಭ್ರಷ್ಟಾಚಾರವೂ ಹೆಚ್ಚಾಗುತ್ತಾ ಹೋಗ್ತಿದೆ ಅನ್ನೋ ಆರೋಪಾನೂ ಕೇಳಿಬರ್ತಿದೆ..
ಪ್ರಿಯ ವೀಕ್ಷಕರೇ ಇದಕ್ಕೆ ಇಂಬು ನೀಡುವಂಥ ಸಾಕ್ಷವೊಂದು ಸಿಕ್ಕಿದ್ದು ಇದ್ರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವುಂಟಾಗಿದೆ. ಈ ಹಿಂದೆ ನ್ಯೂಸ್ ಮಿರರ್ ನಲ್ಲಿ ಒಂದು ಸುದ್ದಿ ಬಂದಿತ್ತು ಕೋರಮಂಗಲ ಆರ್ ಟಿಓ ಕಚೇರಿಯಲ್ಲಿ ಹೇಗೆ ಕಾನೂನು ಉಲ್ಲಂಘನೆ ಆಗ್ತಿದೆ.. ಅದನ್ನ ತಡೆಗಟ್ಟಬೇಕಾದ ಜಂಟಿ ಆಯುಕ್ತ ಹಾಗೂ ಕೋರಮಂಗಲ ಆರ್ ಟಿಓ ಕಚೇರಿಯ ಮುಖ್ಯಸ್ಥ ಹಾಲಸ್ವಾಮಿ ಹೇಗೆ ಕೈಕಟ್ಟಿ ಕುಳಿತಿದ್ದಾರೆ ಅನ್ನೋದನ್ನ ತೋರಿಸಿದ್ವಿ.
ಇದೀಗ ಅದೇ ಕಚೇರಿಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ದುಬಾರಿ ಮೌಲ್ಯದ ಕಾರುಗಳನ್ನ ಸರ್ಕಾರದ ಫೀಸ್ ಕಟ್ಟಿಸಿಕೊಳ್ಳದೆ ಅಂದ್ರೆ ಝೀರೋ ಫೀಸ್ ಕಟ್ಟಿಸಿಕೊಂಡು ನೋಂದಣಿ ಮಾಡಿದ್ದಾರಂತೆ. ಇದಕ್ಕೆ ಆರ್ ಟಿಓ ಸಾಥ್ ಕೊಟ್ಟಿದ್ದಾರೆ ಎನ್ನುವ ಸುದ್ದಿಯೂ ಬಹಿರಂಗವಾಗಿ ಉಳಿದಿಲ್ಲ..
ಕೇವಲ ಇದೊಂದೇ ಕಚೇರಿಯಲ್ಲ.. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತರಾಗಿರುವವರ ಅಧೀನದಲ್ಲಿ ಬರುವ ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿ ಹಾಗೂ ಇಂದಿರಾನಗರ ಸಾರಿಗೆ ಕಚೇರಿಯಲ್ಲುಇ ಇದೇ ರೀತಿ ಬೊಕ್ಕಸಕ್ಕೆ ನಷ್ಟವುಂಟುಮಾಡಿ ದುಬಾರಿ ಮೌಲ್ಯದ ಕಾರುಗಳನ್ನ ನೋಂದಣಿ ಮಾಡಲಾಗಿದೆಯಂತೆ.
ಅಪರ ಸಾರಿಗೆ ಇಲಾಖೆ ಆಯುಕ್ತ ನರೇಂದ್ರ ಹೋಳ್ಕರ್, ಆರ್ ಟಿಓ ಇನ್ಸ್ ಪೆಕ್ಟರ್ ಗಳಾದ ಸುಧಾಕರ್, ರಾಜ್ ಕುಮಾರ್, ರಂಜಿತ್ ಸೇರಿದಂತೆ ಹಿರಿಯ ಅಧಿಕಾರಿಗಳು ತೆರಿಗೆ ಕಟ್ಟದ ಸುಮಾರು ೮ ಕ್ಕೂ ಹೆಚ್ಚು ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಆದರೆ ಬೆಂಗಳೂರು ನಹರದ ಜಂಟಿ ಆಯುಕ್ತ ಹಾಲಸ್ವಾಮಿ ಗೈರು ಹಾಜರಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ. ಉದ್ದೇಶ ಪೂರಕವಾಗಿಯೇ ಅವ್ರನ್ನ ಕಾರ್ಯಾಚರಣೆಯಿಂದ ದೂರ ಇಡಲಾಗಿತ್ತಾ ಇಲ್ಲಾ ಬೇರೆ ಏನಾದ್ರೂ ಉದ್ದೇಶ ಇತ್ತಾ ಅನ್ನೋ ಅನುಮಾನಕ್ಲೆ ಇನ್ನೂ ಉತ್ತರ ಸಿಕ್ಕಿಲ್ಲ..,
ಕೆಲ ರಿಜಿಸ್ಟ್ರೇಷನ್ ಆಗಿರೋ ಹೈ ಎಂಡ್ ಐಷಾರಾಮಿಕಾರುಗಳು ಟ್ಯಾಕ್ಸ್ ಕಟ್ಟಿಲ್ಲ.. ಟ್ಯಾಕ್ಸ್ ಕಟ್ಟದೇ ಕಾರು ರಿಜಿಸ್ಟ್ರೇಷನ್ ಆಗಿದೆ ಅನ್ನೋ ಅನುಮಾನ ಬಂದ ಹಿನ್ನಲೆ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈವೇಳೆ ಓರ್ವ ವ್ಯಕ್ತಿಗೆ ಸೇರಿದ 9 ಕಾರುಗಳು ಟ್ಯಾಕ್ಸ್ ಕಟ್ಟದೇ ರಿಜಿಸ್ಟ್ರೇಷನ್ ಆಗಿರೋ ಸಂಗತಿ ಬೆಳಕಿಗೆ ಬಂದಿದೆ.
ಬಿಎಂಡಬ್ಲೂ 730 LD, BMW S400, ಬೆಂಝ್ GLX, ಜಾಗ್ವಾರ್, ಫಾರ್ಚ್ಯೂನರ್, ಫೋರ್ಷೆ ಮತ್ತು ವೋಲ್ವೋ XC90 ಸೇರಿ ಒಟ್ಟು 9 ಐಷಾರಾಮಿ ಕಾರುಗಳನ್ನ ಆರ್ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಈ 9 ಕಾರಿನಿಂದ ಒಟ್ಟು 1 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್
ಮಾಹಿತಿ ನೀಡಿದ್ದಾರೆ.
ಈ ಅಕ್ರಮದಲ್ಲಿ ಕೆಲ ಆರ್ಟಿಓ ಅಧಿಕಾರಿಗಳೇ ಭಾಗಿಯಾಗಿರೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹೀಗಾಗಿ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸೋಕೆ ಆಯುಕ್ತರು ಆದೇಶಮಾಡಿದ್ದಾರೆ.
ಬಡಜನ್ರು ಒಂದು ಕಾರು ಕೊಳ್ಳೋಕೆ ಹೋದ್ರೆ ಮೂಗಿಗಿಂತ ಮೂಗುತ್ತಿ ಭಾರ ಅನ್ನೋಹಾಗಾಗುತ್ತೆ ಈ ಸರ್ಕಾರದ ಟ್ಯಾಕ್ಸ್. ಆದ್ರ ಜನ ಟ್ಯಾಕ್ಸ್ ವಂಚಿಸೋಕೆ ಹೋಗದೇ ಕಷ್ಟಪಟ್ಟಾದ್ರೂ ಟ್ಯಾಕ್ಸ್ ಕಟ್ಟೇ ಕಾರು ರಿಜಿಸ್ಟ್ರೇಷನ್ ಮಾಡಿಸ್ತಾರೆ. ಆದ್ರೆ ಸಿರಿವಂತರೇ ತಾವುಕೊಳ್ಳೋ ಐಷಾರಾಮಿ ಕಾರುಗಳಿಗೆ ಟ್ಯಾಕ್ಸ್ ವಂಚಿಸಿರೋದು, ಅದಕ್ಕೆ ಹಣಬಾಕ ಆರ್ಟಿಓ ಅಧಿಕಾರಿಗಳು ಸಾಥ್ ನೀಡಿರೋದು ನಿಜಕ್ಕೂ ಲಜ್ಜೆಗೇಡಿ ಕೆಲಸವೇ ಸರಿ.
ಈ ಬೃಹತ್ ಜಾಲದ ಹಿಂದೆ ಸಾರಿಗೆ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋ ಅನುಮಾನ ಕೇಳಿ ಬಂದಿದೆ. ಅಂಥವ್ರ ವಿರುದ್ಧ ಕ್ರಮ ಕೈಗೊಳ್ಳೋ ಅಧಿಕಾರವನ್ನ ಸಾರಿಗೆ ಆಯುಕ್ತರು ಮಾಡುತ್ತಾರಾ ಇಲ್ಲಾ ಇದೇನು ದೊಡ್ಡವಿಚಾರವಲ್ಲ ಅಂತ ಸುಮ್ನೆ ಕುಳಿತುಬಿಡ್ತಾರಾ ಕಾದು ನೋಡ್ಬೇಕು.