ಬೆಂಗಳೂರು,(www.thenewzmirror.com):
ಸದಾ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿರೋ ಸಾರಿಗೆ ನೌಕರರ ಹೋರಾಟಕ್ಕೆ ಮತ್ತಷ್ಟು ಬಲಬಂದಿದೆ.
ಈಗಾಗಲೇ ದೆಹಲಿಯಲಿ ಭರ್ಜರಿ ಸರ್ಕಾರ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಇದೀಗ ಸಾರಿಗೆ ನೌಕರರ ಬೆಂಬಲಕ್ಕೆ ನಿಂತಿದೆ.
ಇತ್ತೀಚೆಗೆ ಮಾಜಿ ಸಚಿವರ ಸಿಡಿ ಕೇಸ್ ನಲ್ಲಿ ಸಂತ್ರಸ್ಥೆ ಯುವತಿಯ ಪರ ವಕಾಲತ್ತು ವಹಿಸಿದ್ದ ವಕೀಲ ಜಗದೀಶ್ ಇದೀಗ ಸಾರಿಗೆ ನೌಕರರ ಬೆಂಬಲಕ್ಕೆ ನಿಂತಿದ್ದಾರೆ.
ಸ್ವತಃ ಜಗದೀಶ್ ಈ ವಿಚಾರ ಬಹಿರಂಗ ಪಡಿಸಿದ್ದು ಕಾನೂನಾತ್ಮಕ ಹೋರಾಟದ ಮೂಲಕ ಬೆಂಬಲ ನೀಡುವ ಜತೆಗೆ ನ್ಯಾಯ ಕ್ಕಾಗಿ ಹೋರಾಟ ನಡೆಸೋ ಭರವಸೆಯನ್ನೂ ಜಗದೀಶ್ ನೀಡಿದ್ದಾರೆ.