ಉಡುಪಿ,(www.thenewzmirror.com):
ರಾಜ್ಯದಲ್ಲಿ ಕರೋನಾ ಆರ್ಭಟ ಹೆಚ್ಚಾದಾಗ ರಾಜ್ಯ ಆರೋಗ್ಯ ಇಲಾಖೆ ಒಂದು ಸುತ್ತೋಲೆ ಹೊರಡಿಸಿತ್ತು. ಯಾರಾದರೂ ಸಾರ್ವಜನಿಕವಾಗಿ ಉಗುಳಿದರೆ ದಂಡ ಹಾಕ್ತೀವಿ ಅಂತಾನೂ ಎಚ್ಚರಿಕೆ ಕೊಟ್ಟಿತ್ತು.
ಅದಾದ ಬಳಿಕ ಸಾರ್ವಜನಿಕರು ಸಾರ್ವಜನಿಕವಾಗಿ ಉಗುಳೋದಕ್ಕೆ ಬ್ರೇಕ್ ಹಾಕಿದ್ರು. ಆದ್ರೀಗ ಕರೋನಾ ಸೋಂಕು ಕಡಿಮೆಯಾಗಿದೆ. ನಿಯಮದಲ್ಲೂ ಕೆಲ ಸಡಿಲಿಕೆ ನೀಡಲಾಗಿದ್ದು, ಸಾರ್ವಜನಿಕರು ಕೋವಿಡ್ ನಿಯಮ ಪಾಲನೆ ಮಾಡೋದನ್ನೇ ಮರೆತಿದ್ದಾರೆ.
ಅದೇ ರೀತಿ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಉಗುಳಿದ್ದಕ್ಕೆ ದಂಡ ಬೆಂಗಳೂರು ಹೊರತು ಪಡಿಸಿ ಬೇರೆಡೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮಪಂಚಾಯತ್ ನಲ್ಲಿ 100 ರೂಪಾಯಿ ದಂಡ ಹಾಕಲಾಗಿದೆ. ಹಾವೇರಿ ಮೂಲದ ವ್ಯಕ್ತಿ ಸಾರ್ವಜನಿಕವಾಗಿ ಉಗುಳಿದ್ದಕ್ಕಾಗಿ ದಂಡ ವಿಧಿಸಿ ರಶೀದಿ ನೀಡಿದ್ದಾರೆ.
ನಮ್ನಲ್ಲಿ ಇನ್ನೂ ಕರೋನಾ ಹೋಗಿಲ್ಲ. ಹೀಗಿರುವಾಗ ನಿಯಮ ಪಾಲನೆ ಮಾಡದೇ ಇರುವುದು ಸರಿಯಲ್ಲ. ಸಾರ್ವಜನಿಕರ ನಿರ್ಲಕ್ಷ್ಯವೇ ಸೋಂಕು ಹೆಚ್ಚಾಗೋಕೆ ಕಾರಣವಾಗಿದೆ. ಹೀಗಾಗಿ ಎಲ್ಲರೂ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತ ಸಾಮಾಜಿಕ ಹೋರಾಟಗಾರ ಎಚ್. ಎಂ. ವೆಂಕಟೇಶ್ ಮನವಿ ಮಾಡಿದ್ದಾರೆ.