ಬೆಂಗಳೂರು,(wwwthenewzmirror.com):
ಕೊನೆಗೂ ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ವಕ್ಕರಿಸಿಯೇ ಬಿಟ್ಟಿದೆ.., ಪತ್ತೆಯಾದ ಎರಡೂ ಪ್ರಕರಣಗಳು ಬೆಂಗಳೂರಿನಲ್ಲೇ ಇದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ.., ದೇಶದಲ್ಲೇ ಮೊದಲ ವೈರಸ್ ಪತ್ತೆಯಾಗಿದ್ದ ಕರುನಾಡಿನಲ್ಲಿ ಇದೀಗ ಮತ್ತೊಮ್ಮೆ ಆತಂಕ ಎದುರಾಗಿದೆ.., ಸೂಪರ್ ಪಾಸ್ಟ್ ಸ್ಪ್ರೆಡ್ಡರ್ ಆಗಿರೋ ಒಮಿಕ್ರಾನ್ ಹರಡಿದ್ದು ಭಯ ಹುಟ್ಟಿಸಿದೆ.
ಬೆಂಗಳೂರಿನಲ್ಲಿ ಒಮಿಕ್ರಾನ್ ವೈರಸ್ ಪತ್ತೆ ವಿಚಾರವನ್ನ ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸುತ್ತಾ ಇದ್ದಂತೆ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಸೋಂಕಿತ ಇಬ್ಬರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದ ಮೂಲದವರಾಗಿದ್ದು, ಅವ್ರು ಗುಣಮುಖರಾಗಿ ದುಬೈಗೆ ವಾಪಾಸಾಗಿದ್ದಾರೆ.., ಮತ್ತೊಬ್ಬನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಆರೋಗ್ಯ ಸ್ಥಿರವಾಗಿದೆ.
ಒಮಿಕ್ರಾನ್ ವೈರಸ್ ಪತ್ತೆಯಾದವ್ರ ಟ್ರಾವೆಲ್ ಹಿಸ್ಟರಿ ಏನು..?
ಮೊದಲ ಸೋಂಕಿತ
- ಮೂಲತಃ ದಕ್ಷಿಣ ಆಫ್ರಿಕಾದ 66 ವರ್ಷದ ವ್ಯಕ್ತಿ
- ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಮಾಡಿದಾಗ ಕೋವಿಡ್ ಪತ್ತೆ
-20 ರಂದು ಸ್ಯಾಂಪಲ್ ಪಡೆಯಲಾಗಿತ್ತು - ಜಿನೋಮಿಕ್ ಸೀಕ್ವೆನ್ಸ್ ಗೆ ಮಾದರಿ ರವಾನೆ
- ವರದಿಯಲ್ಲಿ ಒಮಿಕ್ರಾನ್ ವೈರಸ್ ಇರೋದು ಪತ್ತೆ
- ಸೋಂಕಿತನ 14 ಪ್ರೈಮರಿ ಹಾಗೂ 240 ಸೆಕೆಂಡರಿ ಕಾಂಟ್ಯಾಕ್ಟ್ ಗೆ ಟೆಸ್ಟ್
- ಎಲ್ಲರ ವರದಿಯೂ ನೆಗೆಟಿವ್, ಮುನ್ನೆಚ್ಚರಿಕೆಯಾಗಿ ಕ್ವಾರಂಟೈನ್
- ನವೆಂಬರ್ 27 ರಂದು ದುಬೈಗೆ ತೆರಳಿದ ಸೋಂಕಿತ
- ಗುಣಮುಖರಾಗಿ ವಾಪಾಸ್ ತೆರಳಿದ ಸೋಂಕಿತ
ಎರಡನೇ ಸೋಂಕಿತ
- 46 ವರ್ಷದ ಬೆಂಗಳೂರು ಮೂಲದ ವೈದ್ಯ
- ಖಾಸಗಿ ಕಾರ್ಯಕ್ರಮದಲ್ಲಿ ಮೂರು ದಿನ ಭಾಗಿ
- ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು
- ಟೆಸ್ಟ್ ಮಾಡಿಸಿದಾಗ ಕೋವಿಡ್ ಪಾಸಿಟಿವ್, ಜೀನೋಮಿಕ್ ಸೀಕ್ವೆನ್ಸ್ ಗೆ ರವಾನೆ
- ನವೆಂಬರ್ 22 ರಂದು ಟೆಸ್ಟ್ ಮಾಡಿಸಿದಾಗ ಕೋವಿಡ್ ಪಾಸಿಟಿವ್
- ಸೋಂಕಿತನ ಸಂಪರ್ಕದಲ್ಲಿ 13 ಪ್ರೈಮರಿ ಹಾಗೂ 205 ಸೆಕೆಂಡರಿ ಕಾಂಟ್ಯಾಕ್ಟ್
- 3 ಪ್ರೈಮರಿ ಹಾಗೂ 2 ಸೆಕೆಂಡರಿಗೆ ಕೊವಿಡ್ ಪಾಸಿಟಿವ್
- ಪಾಸಿಟಿವ್ ಆದ ಸ್ಯಾಂಪಲ್ಸ್ ಜೆನೋಮಿಕ್ ಸೀಕ್ವೆನ್ಸ್ಗೆ ಕಳುಹಿಸಲಾಗಿದೆ
- ಸೋಂಕಿತ ವ್ಯಕ್ತಿ ಆರೋಗ್ಯ ಸ್ಥಿರವಾಗಿದ್ದು, ಬೌರಿಂಗ್ ನಲ್ಲಿ ಚಿಕಿತ್ಸೆ
ಇನ್ನೊಂದು ಆತಂಕದ ವಿಚಾರ ಅಂದ್ರೆ ಬೆಂಗಳೂರಿನ ಎರಡು ಸೋಂಕಿತರ ಪೈಕಿ ಓರ್ವ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ…, ಇದೊಂದು ಆತಂಕದ ವಿಚಾರ ಅನ್ನೋದನ್ನ ಸ್ವತಃ ಬಿಬಿಎಂಪಿ ಒಪ್ಪಿಕೊಂಡಿದೆ ಅಷ್ಟೇ ಅಲ್ದೇ ನಗರದ ಹಲವರಲ್ಲಿ ಒಮಿಕ್ರಾನ್ ವೈರಸ್ ದೇಹದೊಳಗೆ ಇದ್ರೂ ಇರಬಹುದು ಅನ್ನೋ ಆತಂಕಕಾರಿ ವಿಚಾರವನ್ನ ಹೊರಹಾಕಿದ್ದಾರೆ.
ಸದ್ಯ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಆತಂಕ ಮನೆ ಮಾಡಿದ್ದು, ಇನ್ನಷ್ಟು ಕಠಿಣ ಕ್ರಮದ ಅಗತ್ಯ ಇದೆ ಅಮತ ತಜ್ಞರು ಸಲಹೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಸಿಎಂ ಜತೆ ಮಹತ್ವದ ಸಭೆ ನಡೆಯಲಿದ್ದು, ಇನ್ನಷ್ಟು ಟಫ್ ರೂಲ್ಸ್ ಜಾರಿಯಾದ್ರೂ ಅಚ್ಚರಿ ಪಡ್ಬೇಕಿಲ್ಲ.