ಬೆಂಗಳೂರು, (www.thenewzmirror.xom) :
ರಾಜ್ಯದಲ್ಲಿ ಮತ್ತೆ ಕೊರೋನಾ ಓಟಕ್ಕಿಳಿದಿದೆ. ಏಕಾಏಕಿಯಾಗಿ ಏರಿಕೆಯಾಗಿ ಮತ್ತೆ ಜನರ ಹಾಗೂ ಸರ್ಕಾರದ ನಿದ್ದೆಗೆಡಿಸಿದೆ. ಈ ಹಿನ್ನೆಲೆ ಸರ್ಕಾರ ಕೂಡ ಹಲವು ಬಿಗಿ ಕ್ರಮಗಳನ್ನು ಜಾರಿ ಮಾಡಿದೆ. ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದರ ಜೊತೆಗೆ ಇಂದು ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಕೂಡ ಜಾರಿಯಲ್ಲಿರಲಿದ್ದು, ಜನರ ವೀಕೆಂಡ್ ಮೋಜು ಮಸ್ತಿಗೆ ಬ್ರೇಕ್ ಬಿದ್ದಿದೆ.
ಕೊರೋನಾ ಮತ್ತೊಮ್ಮೆ ಜನರ ನೆಮ್ಮದಿ ಕೆಡಿಸಿದೆ. ಎಲ್ಲವೂ ಮುಗಿಯಿತು ಎನ್ನುವ ಹೊತ್ತಿಗೆ ಮತ್ತೊಂದು ಅಲೆ ಆಗಮಿಸಿ, ಮತ್ತೊಂದು ಲಾಕ್ ಡೌನ್ ಹಂತಕ್ಕೆ ಪರಿಸ್ಥಿತಿ ಸಾಗುತ್ತಿದೆ. ಹೀಗಾಗಿ ಈಗಿಂದೀಗಲೇ ಹಲವು ಬಿಗಿ ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ. ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ವೀಕೆಂಡ್ ಕರ್ಫ್ಯೂ ಅರ್ಥಾತ್ ವಾರಾಂತ್ಯ ಸಂಪೂರ್ಣ ಸ್ಥಬ್ಧವಾಗಲಿದೆ. ಈಗಾಗಲೇ ವೀಕೆಂಡ್ ಕರ್ಫ್ಯೂ ವೇಳೆ ಏನಿರಲ್ಲಾ ಏನಿರುತ್ತೆ ಎಂಬ ಚರ್ಚೆ ಆರಂಭವಾಗಿದೆ.
ರಾಜಧಾನಿಯಲ್ಲಿ ಇರಲ್ಲ BMTC ಓಡಾಟ.!!
- ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ
- ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ
- ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶ
- ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇಲ್ಲ
ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ.!!
- ಜನ ದಟ್ಟಣೆಗೆ ಅನುಸಾರವಾಗಿ ವೀಕೆಂಡ್ನಲ್ಲಿ KSRTC ಸೇವೆ
- ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿವೆ
- ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೆ ಟಫ್ ರೂಲ್ಸ್
- RTPCR ನೆಗೆಟಿವ್ ವರದಿ ಇಲ್ಲದಿದ್ದರೆ ಬಸ್ ಗೆ ಪ್ರವೇಶ ಇರುವುದಿಲ್ಲ
- ಕೋವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ ನಡೆಸಲಿದೆ
ವೀಕೆಂಡ್ನಲ್ಲಿ 20 ನಿಮಿಷಕ್ಕೊಂದು ಮೆಟ್ರೋ.!!
- ಕರ್ಫ್ಯೂ ವೇಳೆ ಮೆಟ್ರೋ ಎಂದಿನಂತೆ ಸಂಚಾರ ಇರಲಿದೆ
- ದೆಹಲಿ ಮಾದರಿಯನ್ನೇ ಅನಸರಿಸಿ ನಮ್ಮ ಮೆಟ್ರೋ ಸೇವೆ ಒದಗಿಸಲಿದೆ
- ಶನಿವಾರ ಹಾಗೂ ಭಾನುವಾರ 20 ನಿಮಿಷಗಳಿಗೊಮ್ಮೆ ಮೆಟ್ರೋ ಒಡಾಡಲಿದೆ
- ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ ಕಾರ್ಯಾಚರಣೆ
- ಉಳಿದಂತೆ ಎಲ್ಲಾ ದಿನವೂ ಬೆಳಗ್ಗೆ 5 ರಿಂದ 11 ರವರೆಗೆ ಮೆಟ್ರೋ ಸಂಚರಿಸಲಿದೆ
ಆಟೋ, ಓಲಾ ಊಬರ್ ಓಡಾಟಕ್ಕಿಲ್ಲ ಅನುಮತಿ.!!
- ಕರ್ಫ್ಯೂ ವೇಳೆ ಆಟೋ, ಕ್ಯಾಬ್ ಸಂಚಾರಕ್ಕೆ ಅವಕಾಶ ಇಲ್ಲ
- ಜನರು KSRTC ಬಸ್ನಲ್ಲಿ ಬಂದಿಳಿದರೂ ಮುಂದೆ ಹೋಗೋಕೆ ಬಿಎಂಟಿಸಿ ಬಸ್ಸೂ ಇಲ್ಲ
- ದೂರದಿಂದ ಬರುವ ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ
- ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಜನರು ಪ್ರಯಾಣ ಕೈಗೊಳ್ಳುವುದು ಉತ್ತಮ
ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್.!!
- ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್
- ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸ್ವತಂತ್ರರು
- ಪಾರ್ಸಲ್ ಗೂ ಅವಕಾಶ ಇಲ್ಲ. ಸಂಪೂರ್ಣ ಬಂದ್
- ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಬಂದ್
ಹಾಲು, ಮೊಟ್ಟೆ, ಮಾಂಸ, ತರಕಾರಿ ಅಗತ್ಯ ಸೇವೆಗಳಿಗೆ ತೊಡಕಿಲ್ಲ.!!
- ಹಾಲು, ಮೊಟ್ಟೆ, ಮಾಂಸ, ತರಕಾರಿ ಸಿಗುತ್ತೆ
- ದಿನ ಬಳಕಯೆ ಎಲ್ಲಾ ವಸ್ತುಗಳು ಸಿಗಲಿದೆ
- ತರಕಾರಿ, ಸೊಪ್ಪು, ಹಣ್ಣು ಎಲ್ಲವೂ ಇರಲಿದೆ
- ಚಿಕನ್, ಮಟನ್, ಮೊಟ್ಟೆ ಎಲ್ಲವೂ ದೊರಕಲಿದೆ
ಹೀಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡುವ ಮೂಲಕ ಕೊರೋನಾ ಮೂರನೇ ಅಲೆಯನ್ನು ಆರಂಭದಲ್ಲೇ ಕಟ್ಟಿ ಹಾಕುವ ಲೆಕ್ಕಾಚಾರ ಹಾಕಿಕೊಂಡಿದೆ ಸರ್ಕಾರ. ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಜನರು ಕೂಡ ಎಚ್ಚೆತ್ತುಕೊಂಡು ನಿಯಮ ಉಲ್ಲಂಘಿಸಿ ಓಡಾಟ ಬದಿಗಿಟ್ಟು ಕೊರೋನಾ ಮೂರನೇ ಅಲೆಯಲ್ಲಿನ ಈ ಹೋರಾಟದಲ್ಲಿ ಕೈ ಜೋಡಿಸಿದರೆ ಬೇಗನೆ ಮೂರನೇ ಅಲೆಯೂ ಕೊನೆಗಾಣಲಿದೆ.