ಹಾವೇರಿ,(www.thenewzmirror.com):
ರಾಜ್ಯದಲ್ಲಿ ಉಪಚುನಾವಣೆ ದಂಗಲ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಶತಾಯಗತಾಯ ಗೆಲ್ಲೋದಕ್ಕೆ ಇದೇ ಮೊದಲ ಬಾರಿಗೆ ಪ್ರತ್ಯೇಕ ಚುನಾವನಾ ಪ್ರನಾಳಿಕೆಯನ್ನ ಬಿಡುಗಡೆ ಮಾಡಿದೆ. ಒಟ್ಟು 19 ಅಂಶಗಳು ಪ್ರನಾಳಿಕೆಯಲ್ಲಿ ಸೇರಿಕೊಂಡಿವೆ
ಸಿಎಂ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ , ಸಚಿವರಾದ ಸಚಿವ ಸುಧಾಕರ್, ಮುನಿರತ್ನ , ಅಶೋಕ್, ಬಿ.ಸಿ ಪಾಟೀಲ್ ಇತರರು ಹಾಜರಿದ್ರು.
ಕಮಲಪಥ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಹೈಲೇಟ್ಸ್
- ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ
- ಪಟ್ಟಣದಲ್ಲಿ ಸುಂದರ ಉದ್ಯಾನವನಗಲಕ ನಿರ್ಮಾಣ
- ಕೈಗಾರಿಕೆಗಳ ಸ್ಥಾಪನೆ, ಕೈಗಾರಿಕಾ ಬಡಾವಣೆ ನಿರ್ಮಾಣ
- ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ
- ಪಟ್ಟಣದ ಎಲ್ಲ ಕುಟುಂಬಗಳಿಗೆ 5 ಲಕ್ಷ ರೂ ಆರೋಗ್ಯ ವಿಮೆ
- ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
- ವಸತಿ ರಹಿತ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ
- ಸರ್ವರಿಗೂ ಸೂರು ಯೋಜನೆ
- ನಿವೇಶನ ಪಡೆದ ಎಲ್ಲರಿಗೂ ಉಚಿತ ಸ್ವಂತ ಮನೆ ಕಟ್ಟಲು ನೆರವು
- ಪಟ್ಟಣದ ದೇವಸ್ತಾನಗಳ ಸಂರಕ್ಷಣೆ ಮತ್ತು ಪುನಶ್ಚೇತನ
- ಸಿ ಎಂ ಉದಾಸಿಯವರ ಅಂತ್ಯಕ್ರಿಯೆ ನಡೆದ ಸ್ಥಳದ ಅಭಿವೃದ್ಧಿ
- ಪಟ್ಟಣದ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಘಡಕ ಆಧುನೀಕರಣ
- ಪ್ರತಿ ಮನೆಯಿಂದಲೂ ಒಣ ಮತ್ತು ಹಸಿ ಕಸ ಸಂಗ್ರಹ
- ಪಟ್ಟಣದ ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಕ್ಕೆ ಕ್ರಮ
- ಆಟದ ಮೈದಾನಗಳಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ
- ಪಟ್ಟಣದ ಈಜುಕೊಳಗಳ ನವೀಕರಣ, ಸುಸಜ್ಜಿತ ಈಜುಕೊಳಗಳ ನಿರ್ಮಾಣ
- ಪಟ್ಟಣದ ಹೊರವಲಯದಲ್ಲಿ ಬಸ್ ತಂಗುದಾಣ ಮತ್ತು ಟ್ರಕ್ ಟರ್ಮಿನಲ್
- ಔಷಧ ಮಳಿಗೆಗಳಲ್ಲಿ ಎಲ್ಲ ಬಗೆಯ ಔಷಧಗಳ ಮಾರಾಟಕ್ಕೆ ಕ್ರಮ
- ಹೊಸ ಜನೌಷಧಿ ಮಳಿಗೆಗಳ ಸ್ಥಾಪನೆ
- ಪಟ್ಟಣದಲ್ಲಿ ಸಿಸಿಟಿವಿಗಳ ಅಳವಡಿಕೆ ಮತ್ತು ಪೊಲೀಸ್ ಗಸ್ತು ಸೌಕರ್ಯ
- ಪ್ರಮುಖ ಸಂಚಾರಿ ರಸ್ತೆಗಳ ಅಭಿವೃದ್ಧಿ. ಪಾದಚಾರಿ ರಸ್ತೆಗಳ ಅಭಿವೃದ್ಧಿ