ಬೆಂಗಳೂರು,(www.thenewzmirror.com):
ನಂಬಿದ್ರೆ ನಂಬಿ ಬಿಟ್ರೆ ಬಿಡಿ.., 1999 ರೂ ಗೆ 4G ಸ್ಮಾರ್ಟ್ ಫೋನ್ ಸಿಗುತ್ತೆ.., ಅರೇ ಇದೇನಿದು ಇಷ್ಟು ಕಡಿಮೆ ಬೆಲೆಗಾ…? ಅಂತ ಹುಬ್ಬೆರಿಸ್ಬೇಡಿ.., ಜಿಯೋ ಇದೀಗ ಮೊಟ್ಟಮೊದಲ 4G ಸ್ಮಾರ್ಟ್‌ಫೋನ್ ಬಿಡುಗಡೆಮಾಡಿದೆ.., ರಿಲಯನ್ಸ್ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ‘ಜಿಯೋ ಫೋನ್ ನೆಕ್ಸ್ಟ್’ ಸ್ಮಾರ್ಟ್‌ಫೋನ್ ದೀಪಾವಳಿಯಿಂದ ಗ್ರಾಹಕರಿಗೆ ಲಭ್ಯವಾಗಲಿದೆ.
ಜಿಯೋವಿನ ಮೊಟ್ಟಮೊದಲ 4G ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ‘ಜಿಯೋ ಪೋನ್ ನೆಕ್ಟ್’ 4G ಫೋನ್ ಅನ್ನು ಮುಂಗಡ ಬಕ್ಕಿಂಗ್ ಕಾಯ್ದಿರಿಸುವಂತಹ ಸೇವೆಆರಂಭವಾಗಿದೆ. ಕಳೆದ ಜೂನ್ ತಿಂಗಳಲ್ಲಿ ರಿಲಯನ್ಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆದಿತ್ತು. ಈ ವೇಳೆ ಮುಕೇಶ್ ಅಂಬಾನಿ ಅವರು ಅಗ್ಗದ ಸ್ಮಾರ್ಟ್‌ಫೋನ್ ಜಿಯೋಫೋನ್ ನೆಕ್ಸ್ಟ್ ಲಾಂಚ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ, ಶೀಘ್ರವೇ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಖಚಿತಪಡಿಸಿದ್ದರು.
ಜಿಯೋಫೋನ್ ನೆಕ್ಸ್ಟ್ ಬೆಲೆ ಎಷ್ಟು?
ರಿಲಯನ್ಸ್ ಕಂಪನಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಭಾರತ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಲಿದೆ. 6499 ರೂ ಇದರ ಬೆಲೆಯಾಗಿದ್ದು, ಇಎಂಐ ಆಧಾರದಲ್ಲೂ ಖರೀದಿ ಮಾಡಬಹುದಾಗಿದೆ.
ದೇಶಾದ್ಯಂತ ಇರುವ ಎಲ್ಲಾ ಜಿಯೋ ಡಿಜಿಟಲ್ ರಿಟೇಲ್ ಮಳಿಗೆಗಳಲ್ಲಿ ಈ ಫೋನ್ ಲಭ್ಯವಿರಲಿದೆ. ಈ ಮೊಬೈಲ್‌ನ ದರವು 6499 ರು. ಆಗಿದ್ದು, ಗ್ರಾಹಕರು ಇಷ್ಟು ಹಣವನ್ನು ಒಮ್ಮೆಲೇ ಪಾವತಿಸಿಯೂ ಖರೀದಿಸಬಹುದಾಗಿದೆ. ಅಥವಾ ಮೊದಲಿಗೆ 1999 ರು. ಪಾವತಿಸಿ ಉಳಿದ ಹಣವನ್ನು 18-24 ತಿಂಗಳಲ್ಲಿ ಕಂತಿನಲ್ಲಿ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಇದೆ.
ಹೇಗಿರಲಿದೆ ಜಿಯೋ ಫೋನ್ ನೆಕ್ಟ್?
ಜಿಯೋಫೋನ್ ನೆಕ್ಸ್ಟ್ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್.., ಜಿಯೋ ಕಂಪೆನಿ ಇದೀಗ ಗೂಗಲ್ ಕಂಪೆನಿ ಜೊತೆಗೂಡಿ ಸ್ಮಾರ್ಟ್‌ಫೋನ್ ಅಭಿವೃದ್ದಿಪಡಿಸಿದೆ. ತೀರಾ ಅಗ್ಗದ ದರದಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಒದಗಿಸುವುದು ಕಂಪನಿಯ ಗುರಿಯಾಗಿದೆ.
ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ ಫೋನ್.!
ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆದ್ದರೆ, ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ.
ಸ್ಮಾರ್ಟ್ ಫೋನ್ ನ ಮತ್ತಷ್ಟು ವೈಶಿಷ್ಟ್ಯತೆ..!
– 10 ಭಾರತೀಯ ಭಾಷೆಗಳಲ್ಲಿ ಟ್ರಾನ್ಸ್ ಲೇಟ್ ಲಭ್ಯವಿದೆ
– ಫ್ರಂಟ್ ಕ್ಯಾಮೆರಾ 13MP
– ಹಿಂಬದಿ ಕ್ಯಾಮೆರಾ 8 MP
– 5.45″ ಮಲ್ಟಿ ಟಚ್ ಡಿಸ್ ಪ್ಲೇ
– ಆಂಟಿ ಫಿಂಗರ್ ಪ್ರಿಂಟ್ ಕೋಟಿಂಗ್ ನೊಂದಿಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಇರುವ ಸ್ಕ್ರೀನ್
– 2GB RAM, 32Gb ಇನ್ ಬಿಲ್ಟ್, 512 GB ಎಕ್ಸ್ ಪ್ಯಾಂಡಬಲ್ ಸ್ಟೋರೇಜ್
– 2300mAH ಬ್ಯಾಟರಿ
– ಡ್ಯುಯಲ್ ಸಿಮ್( ನ್ಯಾನೋ)