ಬೆಂಗಳೂರು, (www.thenewzmirror.com) ;
ದೇಶದಲ್ಲೇ ನಂಬರ್ 1 ಸಾರಿಗೆ ಸಂಸ್ಥೆ ಎನ್ನುವ ಖ್ಯಾತಿಗೆ ಭಾಜನವಾಗಿರೋ KSRTC ಗೆ ಮತ್ತಷ್ಟು ಪ್ರಶಸ್ತಿಗಳು ಅರಸಿ ಬಂದಿವೆ.
ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಅವಾರ್ಡ್ಸ್ KSRTCಗೆ ಲಭಿಸಿದ್ದು, ಒಟ್ಟು 7ವಿಭಾಗಗಳಲ್ಲಿ ಜಯಗಳಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯ್ತು.
– ಅತ್ಯುತ್ತಮ ಉದ್ಯೋಗದಾತ ಬ್ರಾಂಡ್
– ಕಂಪನಿಯಲ್ಲಿ ಆರೋಗ್ಯ ನಿರ್ವಹಣೆಗೆ ಅತ್ಯುತ್ತಮ ಕನಸುಗಳ ಉದ್ಯೋಗ ಸ್ಥಳ
– ವ್ಯಾಪಾರ ನಾಯಕತ್ವ ಪ್ರಶಸ್ತಿ – ಉದ್ಯೋಗಸ್ಥಳ ಮತ್ತು ಜನಾಭಿವೃದ್ಧಿ
– ವಿಶ್ವ ಆರೋಗ್ಯ ಸೇವಾ ಪ್ರಶಸ್ತಿ – ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ
– ವಿಶ್ವ ನಾವೀನ್ಯತೆ ಪ್ರಶಸ್ತಿ – ಆರೋಗ್ಯ ಸೇವಾ ತಂತ್ರಜ್ಞಾನದಲ್ಲಿ ಅತ್ಯುತ್ತಮ ನಾವೀನ್ಯತೆ
– ಜಾಗತಿಕ ಉತ್ಪಾದನಾ ನಾಯಕತ್ವ ಪ್ರಶಸ್ತಿ – ಸ್ಥಿರತೆಯ ಸಾಧನೆ
– ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ
ಈ ಸಂದರ್ಭದಲ್ಲಿ ಡಾ. ಕೆ.ನಂದಿನಿದೇವಿ, ಉಪಮುಖ್ಯ ಗಣಕ ವ್ಯವಸ್ಥಾಪಕರಾದ ಸುಧಾರಾಣಿ, ಕಾರ್ಮಿಕ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಲೂಧಿಯಾನ ಬೇವರೆಜಸ್ ಲಿಮಿಟೆಡ್ ನ ಮುಖ್ಯಸ್ಥೆ ಜಪಲೀನ್ ಕೌರ್ ಉಪಸ್ಥಿತರಿದ್ದರು.