ಜಾಗತಿಕ ಮಟ್ಟದಲ್ಲಿ ಬೆಂಗಳೂರು ಐಟಿ ಕ್ರಾಂತಿ: ದೇಶದ ಮೊದಲ 64-ಕ್ಯೂಬಿಟ್ ಕ್ವಾಂಟಮ್ ಪ್ರೊಸೆಸರ್ ‘ಕಾವೇರಿ’ ರೆಡಿ!

ಬೆಂಗಳೂರು(www.thenewzmirror.com): ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಬೆಂಗಳೂರು ಮೂಲದ ಮುಂಚೂಣಿ ಐಟಿ ಸಂಸ್ಥೆಯೊಂದು ಭಾರತದ ಅತ್ಯಂತ ಶಕ್ತಿಶಾಲಿ ಹಾಗೂ ಸಂಪೂರ್ಣ ದೇಶೀಯ ತಂತ್ರಜ್ಞಾನದ 64-ಕ್ಯೂಬಿಟ್ (64-qubit) ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಪ್ರೊಸೆಸರ್ ‘ಕಾವೇರಿ’ಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಸಾಧನೆಯು ಭಾರತದ ವಿಜ್ಞಾನ ಲೋಕಕ್ಕೆ ಸಂದ ಜಯ ಎಂದಿದ್ದಾರೆ.

RELATED POSTS

ವಿಶ್ವದಾದ್ಯಂತ ಕೇವಲ 7 ಪ್ರಮುಖ ರಾಷ್ಟ್ರಗಳು ಮಾತ್ರ ಇಂತಹ ಅತ್ಯಾಧುನಿಕ ಕ್ವಾಂಟಮ್ ಪ್ರೊಸೆಸರ್ ವಿನ್ಯಾಸಗೊಳಿಸುವ ಸಾಮರ್ಥ್ಯ ಹೊಂದಿದ್ದು, ಈಗ ಭಾರತ ಹಾಗೂ ನಮ್ಮ ಕರ್ನಾಟಕ ರಾಜ್ಯವು ಈ ಹೆಮ್ಮೆಯ ಸಾಲಿಗೆ ಲಗ್ಗೆ ಇಟ್ಟಿದೆ.

ಏನಿದು ‘ಕಾವೇರಿ’ ಚಿಪ್ ಸಾಧನೆ?

ಕ್ವಾಂಟಮ್ ತಂತ್ರಜ್ಞಾನದಲ್ಲಿ ಅತ್ಯಂತ ಕಠಿಣ ಲೆಕ್ಕಾಚಾರಗಳನ್ನು ಸಾಂಪ್ರದಾಯಿಕ ಕಂಪ್ಯೂಟರ್‌ಗಳಿಗಿಂತ ವೇಗವಾಗಿ ಮಾಡಲು ಕನಿಷ್ಠ 50-ಕ್ಯೂಬಿಟ್ ಮಿತಿಯನ್ನು ದಾಟಬೇಕಾಗುತ್ತದೆ ಎಂದು ಜಾಗತಿಕ ವಿಜ್ಞಾನಿಗಳು ಗುರುತಿಸುತ್ತಾರೆ. ಪ್ರಸ್ತುತ ಭಾರತದಲ್ಲೇ ತಯಾರಾಗಿರುವ ‘ಕಾವೇರಿ’ ಪ್ರೊಸೆಸರ್ ಈ ಮಿತಿಯನ್ನು ಮೀರಿ 64-ಕ್ಯೂಬಿಟ್ ಸಾಮರ್ಥ್ಯ ತಲುಪಿದ್ದು, ಸೂಪರ್ ಕಂಪ್ಯೂಟಿಂಗ್ ಜಗತ್ತಿನಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ದಾರಿಯಾಗಿದೆ. ಇದು ಬೆಂಗಳೂರಿನ ಪ್ರೌಢ ತಂತ್ರಜ್ಞಾನ ಪರಿಸರಕ್ಕೆ ಸಿಕ್ಕ ಮತ್ತೊಂದು ಗೌರವವಾಗಿದೆ.

ರಾಜ್ಯದಲ್ಲಿ ಮೊದಲ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆ:

ಕರ್ನಾಟಕ ಸರ್ಕಾರದ ಐಟಿಬಿಟಿ ಇಲಾಖೆಯ ‘ಲೀಪ್’ (LEAP) ಯೋಜನೆಯ ಅಡಿಯಲ್ಲಿ, ದೇಶದಲ್ಲೇ ಮೊದಲ ಬಾರಿಗೆ ವಾಣಿಜ್ಯ ಬಳಕೆಯ ಕ್ವಾಂಟಮ್ ಕಂಪ್ಯೂಟರ್ ಅನ್ನು ಐಐಐಟಿ ಧಾರವಾಡ ಮತ್ತು ಐಐಐಟಿ ರಾಯಚೂರು ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಶೈಕ್ಷಣಿಕ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತರುವಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist