ಬೆಂಗಳೂರು, (www.thenewzmirror.com) :
ರಾಜ್ಯಾದ್ಯಂತ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಆಸ್ತಿ ಪತ್ರಗಳನ್ನ ಜಪ್ತಿ ಮಾಡಿದ್ದಾರೆ ಅಧಿಕಾರಿಗಳು..,
ಇಂದಿನ ದಾಳಿಯ ಹೈಲೇಟ್ಸ್
- ಒಟ್ಟು 15 ಸರ್ಕಾರಿ ನೌಕರರ 68 ಸ್ಥಳಗಳಲ್ಲಿ 503 ಎಸಿಬಿ ಅಧಿಕಾರಿಗಳಿಂದ ದಾಳಿ
- 68 ತಂಡಗಳಾಗಿ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು
- ಅಧಿಕಾರಿ 1 –
ಎಸ್. ಎಂ. ಬಿರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ,
ಸಿಕ್ಕ ದಾಖಲೆಗಳು
- ಕಲಬುರಗಿಯಲ್ಲಿ ೨ ವಾಸದ ಮನೆಗಳು, ಬೆಂಗಳೂರು ನಗರದಲ್ಲಿ ೧ ನಿವೇಶನ,
- ೩ ವಿವಿಧ ಕಂಪನಿಯ ಕಾರುಗಳು, ೧ ದ್ವಿಚಕ್ರ ವಾಹನ, ೧ ಸ್ಕೂಲ್ ಬಸ್,
- ೨ ಟ್ರಾಕ್ಟರ್‌ಗಳು, ೫೪,೫೦,೦೦೦ ರೂ ನಗದು ಹಣ,
- ಸುಮಾರು ೧೦೦ ಗ್ರಾಂ ಚಿನ್ನಾಭರಣಗಳು, ೩೬ ಎಕರೆ ಕೃಷಿ ಜಮೀನು,
- ೧೫ ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು,
- ಅಧಿಕಾರಿ 2 –
ಟಿ. ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ
ಸಿಕ್ಕ ದಾಖಲೆಗಳು
- ಶಿವಮೊಗ್ಗ ನಗರದಲ್ಲಿ ೨ ವಾಸದ ಮನೆಗಳು,
- ವಿವಿಧ ಕಡೆಗಳಲ್ಲಿ ೪ ನಿವೇಶನಗಳು,
- ೯ ಕೆ.ಜಿ ೪೦೦ಗ್ರಾಂ ಚಿನ್ನದ ಬಿಸ್ಕೇಟ್ ಹಾಗೂ ಆಭರಣಗಳು,
- ೩ ಕೆ.ಜಿ ಬೆಳ್ಳಿ ಸಾಮಾನುಗಳು, ೨ ವಿವಿಧ ಕಂಪನಿಯಕಾರುಗಳು,
- ೩ ದ್ವಿ ಚಕ್ರ ವಾಹನಗಳು, ೮ ಎಕರೆ ಕೃಷಿ ಜಮೀನು,
- ೧೫,೯೪,೦೦೦ ರೂಗಳು ಹಾಗೂ ೨೦ ಲಕ್ಷದ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 3 –
ಸಿಕ್ಕ ದಾಖಲೆಗಳು
ಶ್ರೀನಿವಾಸ್. ಕೆ, ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಬಿಸಿ-೩, ಕೆ.ಆರ್. ಪೇಟೆ
- ಮೈಸೂರು ನಗರದಲ್ಲಿ ೧ ವಾಸದ ಮನೆ, ಮೈಸೂರು ನಗರದಲ್ಲಿ ೧ ಫ್ಲಾಟ್,
- ಮೈಸೂರು ನಗರದಲ್ಲಿ ೨ನಿವೇಶನಗಳು,
- ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ೪ ಎಕರೆ ೩೪ ಗುಂಟೆ ಕೃಷಿ ಜಮೀನು,
- ನಂಜನಗೂಡಿನಲ್ಲಿ ೧ ಫಾರ್ಮ್ ಹೌಸ್, ೨ ವಿವಿಧ ಕಂಪನಿಯ ಕಾರುಗಳು,
- ೨ ದ್ವಿಚಕ್ರ ಚಕ್ರ ವಾಹನಗಳು, ೧ ಕೆಜಿ ಚಿನ್ನಾಭರಣಗಳು,
- ೮ ಕೆ.ಜಿ ೮೪೦ ಗ್ರಾಂ ಬೆಳ್ಳಿ ಸಾಮಾನುಗಳು,
-೯,೮೫,೦೦೦ ರೂಗಳು, ವಿವಿಧ ಬ್ಯಾಂಕ್‌ಗಳಲ್ಲಿ 22 ಲಕ್ಷ ರೂ ಠೇವಣಿ - ೮ ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 4 –
ಕೆ. ಎಸ್. ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು
ಸಿಕ್ಕ ದಾಖಲೆಗಳು
- ಮಂಗಳೂರು ನಗರದಲ್ಲಿ ೧ ವಾಸದ ಮನೆ,
- ಚಾಮರಾಜನಗರ ಮತ್ತು ಮಂಗಳೂರಿನಲ್ಲಿ ೩ ನಿವೇಶನಗಳು,
- ೨ ವಿವಿಧ ಕಂಪನಿಯ ಕಾರುಗಳು, ೧ ದ್ವಿಚಕ್ರ ವಾಹನ, ೧ ಕೆ. ಜಿ ಬೆಳ್ಳಿ ಆಭರಣಗಳು
- ೧೦ ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ.
- ಅಧಿಕಾರಿ 4 – ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಿಷನ್
- ಬೆಂಗಳೂರು ನಗರದಲ್ಲಿ ೧ ವಾಸದ ಮನೆ ಹಾಗೂ ನಿವೇಶನ,
- ನೆಲಮಂಗಲದಲ್ಲಿ ೧ ವಾಸದ ಮನೆ,
- ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು ೧೧ ಎಕರೆ ೨೬ ಗುಂಟೆ ಜಮೀನು,
- ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ,
- ೩ ವಿವಿಧ ಕಂಪನಿಯ ಕಾರುಗಳು, ೧.೭೬ ಗ್ರಾಂ ಚಿನ್ನಾಭರಣಗಳು,
- ೭ ಕೆ.ಜಿ ೨೮೪ ಗ್ರಾಂ ಬೆಳ್ಳಿ ಸಾಮಾನುಗಳು,
- ೪೩,೦೦,೦೦೦ ರೂಗಳು
- ಸುಮಾರು ೧೪ ಲಕ್ಷರೂಗಳ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 6 –
ಜಿ. ವಿ. ಗಿರಿ, ಗ್ರೂಪ್ ಡಿ ನೌಕರ, ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್
ಸಿಕ್ಕ ದಾಖಲೆಗಳು
- ಬೆಂಗಳೂರು ನಗರದಲ್ಲಿ ೬ ವಾಸದ ಮನೆಗಳು,
- ೪ ವಿವಿಧ ಕಂಪನಿಯ ಕಾರುಗಳು, ೪ ದ್ವಿಚಕ್ರ ವಾಹನಗಳು,
- ೮ ಕೆ. ಜಿ ಬೆಳ್ಳಿ ಸಾಮಾನುಗಳು, ೧ ಲಕ್ಷ ೧೮ ಸಾವಿರ ನಗದು ಹಣ
- ೧೫ ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ.
- ಅಧಿಕಾರಿ 7 –
ಎಸ್. ಎಸ್. ರಾಜಶೇಖರ್, ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ
ಸಿಕ್ಕ ದಾಖಲೆಗಳು
- ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ ೧ ಫ್ಲಾಟ್,
- ಯಲಹಂಕದ ಶಿವನಹಳ್ಳಿಯಲ್ಲಿ ೨ ಅಂತಸ್ತಿನ ಒಂದು ಫ್ಲಾಟ್
- ತಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ
ಮೈಲನಹಳ್ಳಿಯಲ್ಲಿ ಒಂದು ನಿವೇಶನ, ೧ ಕಾರ್, - ೧ ದ್ವಿಚಕ್ರ ವಾಹನ, ೪ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 8 –
ಮಾಯಣ್ಣ, ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ
ಸಿಕ್ಕ ದಾಖಲೆಗಳು
- ಬೆಂಗಳೂರು ನಗರದಲ್ಲಿ ೪ ವಾಸದ ಮನೆಗಳು,
- ವಿವಿಧ ಕಡೆ ೬ ನಿವೇಶನಗಳು, ೨ ಎಕರೆ ಕೃಷಿ ಜಮೀನು,
- ೨ ದ್ವಿಚಕ್ರ ವಾಹನಗಳು, ೧ ಕಾರು, ನಗದು ಹಣ ೫೯,೦೦೦ ರೂಗಳು,
- ೧೦ ಲಕ್ಷ ರೂ ನಿಶ್ಚಿತ ಠೇವಣಿ(ಎಫ್.ಡಿ),
- ಉಳಿತಾಯ ಖಾತೆ(ಎಸ್‌ಬಿ)ಯಲ್ಲಿ ೧,೫೦,೦೦೦ ರೂಗಳು,
- ೬೦೦ ಗ್ರಾಂ ಚಿನ್ನಾಭರಣ, ೩ ಸ್ಥಳಗಳಲ್ಲಿ ಬೇನಾಮಿ ಆಸ್ತಿ
- ೧೨ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 9 –
ಕೆ. ಎಸ್. ಶಿವಾನಂದ್, ಸಬ್-ರಿಜಿಸ್ಟಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ.
ಸಿಕ್ಕ ದಾಖಲೆಗಳು
- ಮಂಡ್ಯ ನಗರದಲ್ಲಿ ೧ ವಾಸದ ಮನೆ, ಬೆಂಗಳೂರು ನಗರದಲ್ಲಿ ೧ ಖಾಲಿ ನಿವೇಶನ,
- ೧ ಕಾರು, ೨ ದ್ವಿಚಕ್ರ ವಾಹನ, ಶಕ್ರಪುರ ಗ್ರಾಮದಲ್ಲಿ ೧ ಸಂಕೀರ್ಣ,
- ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ೭ ಎಕರೆ ಕೃಷಿ ಜಮೀನು,
- ೮ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 10 –
ಸದಾಶಿವ ರಾಯಪ್ಪ ಮರಲಿಂಗಣ್ಣನವರ್, ಹಿರಿಯ ಮೋಟಾರು ನಿರೀಕ್ಷಕ ಗೋಕಾಕ್,
ಸಿಕ್ಕ ದಾಖಲೆಗಳು
- ಬೆಳಗಾವಿ ನಗರದಲ್ಲಿ ೧ ವಾಸದ ಮನೆ, ೨೨ ಎಕರೆ ಕೃಷಿ ಜಮೀನು,
- ೧ ಕೆ.ಜಿ ೧೩೫ ಗ್ರಾಂ ಚಿನ್ನಾಭರಣಗಳು, ನಗದು ೮,೨೨,೦೦೦
- ಸುಮಾರು ೫ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ.
–
ಅಧಿಕಾರಿ 11 –
ಅಡವಿ ಸಿದ್ದೇಶ್ವರ ಕಾರೆಪ್ಪ ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು,
ಸಿಕ್ಕ ದಾಖಲೆಗಳು
- ಬೈಲಹೊಂಗಲ ನಗರದಲ್ಲಿ ೨ ವಾಸದ ಮನೆ, ೪ ನಿವೇಶನಗಳು,
- ೪ ವಿವಿಧ ಕಂಪನಿಯ ಕಾರುಗಳು, ೬ ದ್ವಿ ಚಕ್ರ ವಾಹನಗಳು,
- ೨೬೩ ಗ್ರಾಂ ಚಿನ್ನಾಭರಣಗಳು, ೯೪೫ ಗ್ರಾಂ ಬೆಳ್ಳಿ ಸಾಮಾನುಗಳು,
- ೧,೫೦,೦೦೦ ರೂ ಮೌಲ್ಯದ ಬ್ಯಾಂಕ್ ಡೆಪಾಸಿಟ್ ಮತ್ತು ಷೇರ್‌ಗಳು,
- ೧,೧೦,೦೦೦ ರೂಗಳು, ಸುಮಾರು ೫ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 12 –
ನಾಥಾಜಿ ಪೀರಾಜಿ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-೨, ಹೆಸ್ಕಾಂ, ಬೆಳಗಾವಿ ಜಿಲ್ಲೆ
ಸಿಕ್ಕ ದಾಖಲೆಗಳು
- ಬೆಳಗಾವಿ ನಗರದಲ್ಲಿ ೧ ವಾಸದ ಮನೆ,
-ಬೆಳಗಾವಿ ನಗರದಲ್ಲಿ ೨ ನಿವೇಶನ, ೧ ಕಾರು, ೧ ದ್ವಿ ಚಕ್ರ ವಾಹನ, - ೨೩೯ ಗ್ರಾಂ ಚಿನ್ನಾಭರಣಗಳು, ೧ ಕೆ.ಜಿ ೮೦೩ ಗ್ರಾಂ ಬೆಳ್ಳಿ ಸಾಮಾನುಗಳು,
- ನಗದು ೩೮,೦೦೦ ರೂಗಳು
- ಸುಮಾರು ೨೦ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 13 –
ಲಕ್ಷ್ಮಿ ನರಸಿಂಹಯ್ಯ, ರಾಜಸ್ವ ನಿರೀಕ್ಷಕರು, ಕಸಬಾ-೨ ದೊಡ್ಡಬಳ್ಳಾಪುರ ತಾಲ್ಲೂಕು,
ಸಿಕ್ಕ ದಾಖಲೆಗಳು
- ವಿವಿಧ ಕಡೆಗಳಲ್ಲಿ ೫ ವಾಸದ ಮನೆಗಳು, ವಿವಿಧ ಕಡೆಗಳಲ್ಲಿ ೬ ನಿವೇಶನಗಳು,
- ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ೨೫ ಗುಂಟೆ ಜಮೀನು,
- ೭೬೫ ಗ್ರಾಂ ಚಿನ್ನಾಭರಣಗಳು, ೧೫ ಕೆ. ಜಿ ಬೆಳ್ಳಿ ಸಾಮಾನುಗಳು,
- ೧ ಕಾರು, ೨ ದಿಚಕ್ರ ವಾಹನಗಳು, ನಗದು ೧,೧೩,೦೦೦ ರೂಗಳು
- ತನಿಖೆ ಮುಂದುವರೆದಿದೆ
- ಅಧಿಕಾರಿ 14 –
ವಾಸುದೇವ್. ಆರ್. ಎನ್, ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು)
ಸಿಕ್ಕ ದಾಖಲೆಗಳು
- ಬೆಂಗಳೂರು ನಗರದಲ್ಲಿ ೫ ವಾಸದ ಮನೆಗಳು,
- ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮದಲ್ಲಿ ೪ ಮನೆಗಳು,
- ಬೆಂಗಳೂರು ನಗರದಲ್ಲಿ ೮ ನಿವೇಶನಗಳು,
- ನೆಲಮಂಗಲ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಒಟ್ಟು ೧೦ ಎಕರೆ ೨೦ ಗುಂಟೆ ಕೃಷಿ ಜಮೀನು,
- ೮೫೦ ಗ್ರಾಂ ಚಿನ್ನಾಭರಣಗಳು, ೯ ಕೆಜಿ ೫೦೦ ಗ್ರಾಂ ಬೆಳ್ಳಿ ಸಾಮಾನುಗಳು,
- ನಗದು ೧೫,೦೦,೦೦೦ ರೂಗಳು ೯೮ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
- ತನಿಖೆ ಮುಂದುವರೆದಿದೆ.
- ಅಧಿಕಾರಿ 15 –
ಬಿ. ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕ, ನಂದಿನಿ ಹಾಲು ಉತ್ಪನ್ನಗಳು, ಬೆಂಗಳೂರು
ಸಿಕ್ಕ ದಾಖಲೆಗಳು
- ವಿವಿಧ ನಗರದಲ್ಲಿ ೩ ವಾಸದ ಮನೆಗಳು, ವಿವಿಧ ಕಡೆಗಳಲ್ಲಿ ೯ ನಿವೇಶನಗಳು,
- ಚಿಂತಾಮಣಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು ೫ ಎಕರೆ ೩೦ ಗುಂಟೆ ಕೃಷಿ ಜಮೀನು,
- ಹೊಸಕೋಟೆ ತಾಲ್ಲೂಕಿನಲ್ಲಿ ೧ ಪೆಟ್ರೋಲ್ ಬಂಕ್, ೩೮೩ ಗ್ರಾಂ ಚಿನ್ನಾಭರಣ,
- ೩೩೯೫ ಗ್ರಾಂ ಬೆಳ್ಳಿ ಸಾಮಾನುಗಳು, ನಗದು ೩,೦೦,೦೦೦ ರೂಗಳು ಪತ್ತೆ
- ತನಿಖೆ ಮುಂದುವರೆದಿದೆ