Aero Show 2025 | ಫೆ. 10 ರಿಂದ 14ರ ವರೆಗೆ ಏರೋ ಇಂಡಿಯಾ 2025 ಆಯೋಜನೆ; ಹೇಗಿರಲಿದೆ ಗೊತ್ತಾ ಈ ಬಾರಿಯ ಏರೋ ಶೋ?

Aero show 2025

ಬೆಂಗಳೂರು, (www.thenewzmirror.com) ;

ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಶೋ ಇಂಡಿಯಾ 2025 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಲಹಂಕದ ವೈಮಾನಿಕ ವಾಯುನೆಲೆಯಲ್ಲಿ ಫೆ. 10 ರಿಂದ 14ರ ವರೆಗೆ ಆಯೋಜಿಸಲಾಗಿದ್ದು, ಸಿದ್ದತೆಗಳು ಭರದಿಂದ ಸಾಗುತ್ತಿವೆ. ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜನೆಗೊಳ್ಳುತ್ತಿರೋ ಏರೋ ಶೋ 2025 ಏಷ್ಯಾದ ಅತಿದೊಡ್ಡ ಏರೋ ಶೋನ 15 ನೇ ಆವೃತ್ತಿಯಾಗಿದೆ.

RELATED POSTS

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದ ವಾಯುನಲೆಯ ಕೇಂದ್ರದಲ್ಲಿ ನಡೆಯಲಿದೆ. ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಅಂದ್ರೆ ಬಿಲಿಯನ್ ಅವಕಾಶಗಳಿಗೆ ರನ್ ವೇ ಎಂಬ ವಿಶಾಲ ಧ್ಯೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ.

ಒಟ್ಟು ಐದು ದಿನಗಳ ಕಾಲ ನಡೆಯಲಿರೋ ಏರೋ ಶೋನಲ್ಲಿ ಮೊದಲ ಮೂರು ದಿನಗಳು ಅಂದರೆ ಫೆಬ್ರವರಿ10, 11 ಮತ್ತು 12 ವ್ಯವಹಾರದ ದಿನಗಳಾಗಿರುತ್ತವೆ. ಕೊನೆಯ ಎರಡು ದಿನಗಳು ಅಂದರೆ ಫೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನಗಳನ್ನು ಒಳಗೊಂಡಿದೆ.

ಏರೋ ಶೋನಲ್ಲಿ ದೇಶ, ವಿದೇಶಗಳು ಯುದ್ದ ವಿಮಾನಗಳ ಚಮಾತ್ಕಾರ ನಡೆಯಲಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಲಿದ್ದು, ನೋಡುಗರ ಕಣ್ಣಿಗೆ ರಸದೌತಣ ನೀಡೋದು ಗ್ಯಾರಂಟಿ. ವೈಮಾನಿಕ ಪ್ರದರ್ಶನದಲ್ಲಿ ಮೊದಲ ಮೂರು ದಿನಗಳಲ್ಲಿ ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರುಗಳ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಲಾಗಿದೆ. ಇದರ ಜತೆಗೆ ಉಸಿರು ಬಿಗಿಹಿಡಿದು ನೋಡುವ ಮೈನವಿರೇಳಿಸುವ ಏರ್ ಶೋಗಳು ಹಾಗೂ ಇಂಡಿಯಾ ಪೆವಿಲಿಯನ್ ನಲ್ಲಿ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ ಕೂಡ ಒಳಗೊಂಡಿದೆ. ದೇಶದ ರಕ್ಷಣಾ ವಿಚಾರದಲ್ಲಿ ಈ ಏರೋ ಶೋ ಬಹಳ ಪ್ರಾಮುಖ್ಯತೆ ವಹಿಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ತನ್ನದೇ ಆದ ಬದಲಾವಣೆಗೆ ಇದು ಸಹಕಾರಿಯಾಗಲಿದೆ. ಇದರ ಜತೆಗೆ ಮೇಕ್‌ ಇನ್‌ ಇಂಡಿಯಾಗೆ ಹೆಚ್ಚು ಉತ್ತೇಜನ ಸಿಗಲಿದ್ದು, ಹೊಸ ಹೊಸ ಅನ್ಚೇಷಣೆಗಳಿಗೂ ಇದು ಸಹಕಾರಿಯಾಗಲಿದೆ.

1996ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ 14 ಯಶಸ್ವಿ ಆವೃತ್ತಿಗಳೊಂದಿಗೆ ಈಗಾಗಲೇ ಜಾಗತಿಕವಾಗಿ ಒಂದು ಪ್ರಮುಖ ವೈಮಾನಿಕ ಪ್ರದರ್ಶನವಾಗಿ ತನ್ನದೇ ಆದ ಸ್ಥಾನ ಗಳಿಸಿದೆ. ಕಳೆದ ಆವೃತ್ತಿಯು ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿತ್ತು, ಏಕೆಂದರೆ ಇದು ಏಳು ಲಕ್ಷಕ್ಕೂ ಅಧಿಕ ವೀಕ್ಷಕಕರು, 98 ದೇಶಗಳ ಗಣ್ಯರು ಮತ್ತು ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್ ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರನ್ನು ಆಕರ್ಷಿಸಿತು. 201 ಒಡಂಬಡಿಕೆಗಳಿಗೆ ಸಹಿ, ಪ್ರಮುಖ ಘೋಷಣೆಗಳು, ಉತ್ಪನ್ನ ಬಿಡುಗಡೆಗಳು ಮತ್ತು 75,000 ಕೋಟಿ ರೂ.ಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ 250 ಪಾಲುದಾರಿಕೆಗಳಿಗೆ ಸಾಕ್ಷಿಯಾಯಿತು. 2025ರ ಆವೃತ್ತಿಯು ಈ ಸಾಧನೆಗಳನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿದೆ ಮತ್ತು ವೈಮಾನಿಕ ಪ್ರದರ್ಶನದ ವ್ಯಾಪ್ತಿ ಮತ್ತು ವೈಭವ ಮತ್ತಷ್ಟು ಹೆಚ್ಚಾಗಲಿದೆ ಎಂಬ ಭರವಸೆಯಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist