ಕಿರುವಯಸ್ಸಲ್ಲೇ ಮಹಾನ್ ಸಾಧನೆ ಮಾಡಿದ ಅಮನ.! ವಯಸ್ಸು 15 ,  ಪುಸ್ತಕ 4, ದಾಖಲೆ 8..!

ಬೆಂಗಳೂರು, (www.thenewzmirror.com) ;

ಸಾಧನೆ ಮಾಡೋಕೆ ವಯಸ್ಸು ಬೇಕಿಲ್ಲ, ಔಲ ಹಾಗೂ ಮನಸ್ಸು ಇದ್ದರೆ ಏನು ಬರೆಕಾದರೂ ಆಧನೆ ಮಾಡಬಹುದು ಅನ್ನೋದನ್ನ ಅಮನಾ ಎಂಬ ಬಾಲಕಿ ಸಾಧಿಸಿ ತೋರಿಸಿದ್ದಾರೆ.

RELATED POSTS

10 ನೇ ತರಗತಿ ಓದುತ್ತಿರುವ ಅಮನಾ, ನಾಲ್ಕನೇ ಪುಸ್ತಕವನ್ಮ ಬರೆದು ಮಹಾನ್ ವ್ಯಕ್ತಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಕುಮಾರಿ ಅಮನ ಜೆ.ಕುಮಾರ್ ಬರೆದಿರುವ Galore of Mysteries ನಾಲ್ಕನೇ ಹಾಗೂ ಮೊದಲ fiction writing ಪುಸ್ತಕವನ್ನ ನ್ಯಾ. ಎನ್. ಸಂತೋಷ್ ಹೆಗ್ಗಡೆ, ಬಿಡುಗಡೆ ಮಾಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರ ಸಂದೇಶವು ಈ ಪುಸ್ತಕದಲ್ಲಿ ಅಡಕವಾಗಿದೆ.

ಚಂದ್ರಯಾನ್ -3 ರ ಹಿರಿಯ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಪಿಮ ವೀರ ಮುತ್ತುವೇಲ್ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರೋದು ಮತ್ತೊಂದು ವಿಶೇಷವಾಗಿದೆ.

ಸದ್ಯ ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವಡ್ ವಿಶ್ವ ವಿದ್ಯಾಲಯದಿಂದ “Masterpieces of World Literature” ಕೋರ್ಸ್ ಮಾಡಿದ್ದಾರೆ.

ಕು. ಅಮನ

“ಅಮಾನಾಳ Galore of Mysteries”  ಪುಸ್ತಕವು, ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನೆಯ ಲೋಕಕ್ಕೆ ಕರೆದೊಯ್ಯುವ ಆಕರ್ಷಣೆಯನ್ನು ಹೊಂದಿದೆ.

ಕು. ಅಮನ ತಾಯಿ ಡಾ. ಲತಾ

ಕೆಎಸ್ಸಾರ್ಟಿಸಿ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಮಂಡಳಿ ಕಾರ್ಯದರ್ಶಿಯಾಗಿರುವ ಡಾ. ಲತಾ ಟಿ.ಎಸ್, ಹಾಗೂ ಜೈವಂತ್ ಕುಮಾರ್ ಅವರ ಮಗಳಾದ ಅಮನ 6ನೇ ತರಗತಿಯಲ್ಲಿದ್ದಾಗಲೇ ಇಂಗ್ಲೀಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಅವಳ ಪ್ರಥಮ ಕವನ  “Echoes of Soulful Poems”  ಎರಡನೇ “World Amidst the Words”  ಹಾಗೂ “Lafzon ki Mhfil “ ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿರುತ್ತವೆ.

ಅಮನಳ ದಾಖಲೆಗಳು

* ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಪ್ ರೆಕಾಡ್ಸ್ -2021
* ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು.
* ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021 ಗೋವಾದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
* ನೋಬಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ
ಕಿರಿಯ ಕವಯಿತ್ರಿ
* ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ
* ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ ಬರೆದಿದ್ದಾರೆ.
* ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ
* ಇಂಟರ್ನ್ಯಾಷನಲ್ ಬುಕ್ಅಪ್ ರೆಕಾರ್ಡ್ಸ್ ಕಿರಿಯ ಕವಿಯತ್ರಿ

ಇಲ್ಲಿಯವರೆಗೂ ಅಮನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಕವನಗಳನ್ನು ಬರೆದಿರುತ್ತಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist