ಬೆಂಗಳೂರು, (www.thenewzmirror.com);
ಅಮೆರಿಕಾದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಮೇರಿಕಾದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ 12.3 ಲಕ್ಷಕ್ಕರ ಏರಿಕೆಯಾಗಿದೆ 2016 ರಲ್ಲಿ ಈ ಪ್ರಮಾಣ 3.2 ಲಕ್ಷದಷ್ಟಿತ್ತು.
ತೆಲುಗು ಭಾಷೆಯ ಪ್ರಭಾವ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ಅದು ಈಗ ಅಮೆರಿಕದಲ್ಲಿ 350 ಭಾಷೆಗಳಲ್ಲಿ 11ನೇ ಅತಿ ಹೆಚ್ಚು ಮಾತನಾಡುವ ವಿದೇಶಿ ಭಾಷೆಯಾಗಿದೆ. ಹಿಂದಿ ಮತ್ತು ಗುಜರಾತಿ ನಂತರ ಇದು ಮೂರನೇ ಹೆಚ್ಚು ಮಾತನಾಡುವ ಭಾರತೀಯ ಭಾಷೆಯಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಪ್ರತಿ ವರ್ಷ 60,000 ರಿಂದ 70,000 ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುತ್ತಾರೆ.
ಅದರ ಸಂಖ್ಯೆ ಸುಮಾರು 2 ಲಕ್ಷ. ನಂತರ ಟೆಕ್ಸಾಸ್ (1.5 ಲಕ್ಷ) ಮತ್ತು ನ್ಯೂಜೆರ್ಸಿ (1.1 ಲಕ್ಷ). ಇಲಿನಾಯ್ಸ್ (83,000), ವರ್ಜೀನಿಯಾ (78,000) ಮತ್ತು ಜಾರ್ಜಿಯಾ (52,000) ನಂತಹ ರಾಜ್ಯಗಳು ತೆಲುಗು ಮಾತನಾಡುವವರನ್ನು ಹೊಂದಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.