ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ ; ಅಮಿತ್ ಶಾ

ಬೆಂಗಳೂರು, (www.thenewzmirror.com) ;

ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಹಸಿರಿಕರಣದಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದನ್ನ ತಡೆಯುವ ನಿಟ್ಟಿನಲ್ಲಿ ವರ್ಷಾಂತ್ಯದ ಒಳಗೆ 5 ಕೋಟಿ ಗಿಡಗಳನ್ನ ನೆಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮಾಹಿತಿ ನೀಡಿದರು.

RELATED POSTS

ಗ್ರೇಟರ್ ನೋಯ್ಡಾದ ಸುಟ್ಯಾನದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸೆಂಟರ್ಗೆ ಭೇಟಿ ನೀಡಿದ್ದ ಅವರು,  ಅಖಿಲ ಭಾರತ ಸಸಿ ಅಭಿಯಾನದಡಿ’ಯಲ್ಲಿ ನಾಲ್ಕನೇ ಕೋಟಿಯ ಸಸಿಯನ್ನು ನೆಟ್ಟ ಬಳಿಕ ಈ ವಿಷಾರ ತಿಳಿಸಿದರು.

ಬಳಿಕ ಮಾತನಾಡಿದ ಶಾ, ಇಂದು 40 ಮಿಲಿಯನ್ ಮರಗಳನ್ನು ನೆಡುವ ಗುರಿಯ  ಸಾಧನೆಯೊಂದಿಗೆ ನಾವು 50 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಸಾಧಿಸುವತ್ತ ಸಾಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಸಿಆರ್ಪಿಎಫ್ ಯೋಧರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಈ ಅಭಿಯಾನದಲ್ಲಿ ಗರಿಷ್ಠ ಆಮ್ಲಜನಕವನ್ನು ನೀಡುವ ಅಶ್ವತ್ಥ ಮರವನ್ನು ಕೇಂದ್ರ ಗೃಹ ಸಚಿವರು ನೆಟ್ಟರು.  ಜುಲೈ 2020 ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲಯವು ಪರಿಸರ ಸಂರಕ್ಷಣೆಗಾಗಿ ‘ಅಖಿಲ ಭಾರತ ಸಸಿ ನೆಡುವ ಅಭಿಯಾನ’ವನ್ನು ಪ್ರಾರಂಭಿಸಿತು.

ಶಾ ಮೇಲ್ವಿಚಾರಣೆಯಲ್ಲಿ, 2020 ರಿಂದ 2022 ರ ಅಲ್ಪಾವಧಿಯಲ್ಲಿ 3.55 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಯಿತು. 4 ಕೋಟಿ ಸಸಿಗಳ ನೆಡುವಿಕೆಯೊಂದಿಗೆ, ಈ ವರ್ಷ ಇನ್ನು 1 ಕೋಟಿ ಮರಗಳನ್ನು ನೆಡುವ ಗುರಿಯನ್ನು ನಿಗದಿಪಡಿಸಲಾಗಿದೆ.  ದೇಶದ ಭದ್ರತೆಯ ಜೊತೆಗೆ ಸಿಆರ್ಪಿಎಫ್ ಯೋಧರು ಪರಿಸರ ಸಂರಕ್ಷಣೆಗಾಗಿ ಮರಗಳನ್ನು ನೆಟ್ಟು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಶಾ ಪ್ರಶಂಸಿದರು.

ಮೋದಿಯವರ ನಾಯಕತ್ವದಲ್ಲಿ ಮತ್ತು ಶಾ ಮಾರ್ಗದರ್ಶನದಲ್ಲಿ ಪರಿಸರ ಸಂರಕ್ಷಣೆಯ ವಿಷಯವು ಕೇವಲ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮನ್ನಣೆಗೆ ಬಂದಿದೆ.  ಕಳೆದ 9 ವರ್ಷಗಳಲ್ಲಿ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಸಾಕಷ್ಟು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  ಮೋದಿಯವರ ಈ ಉಪಕ್ರಮಗಳಿಂದಾಗಿ ವಿಶ್ವಸಂಸ್ಥೆಯು ಅವರಿಗೆ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಎಂಬ ಬಿರುದನ್ನು ನೀಡಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist