ಬೆಂಗಳೂರು/ಅಯೋಧ್ಯ,(www.thenewzmirror.com) :
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಮಧ್ಯಾಹ್ನ 12:00 ಆರತಿಯ ನಂತರ, ದೇವಾಲಯವು ಮಧ್ಯಾಹ್ನ 1:00 ಗಂಟೆಯವರೆಗೆ ಮುಚ್ಚಿರುತ್ತದೆ.
ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಬಾಗಿಲುಗಳು ಸುಮಾರು 50 ನಿಮಿಷಗಳ ಕಾಲ ಸಂದರ್ಶಕರಿಗೆ ಮುಚ್ಚಿರುತ್ತದೆ. ಆನ್‌ಲೈನ್ ದರ್ಶನ ಪಾಸ್‌ಗಳನ್ನ ಬೆಳಿಗ್ಗೆ 7:00 ರಿಂದ ರಾತ್ರಿ 10:00 ರವರೆಗೆ ಎರಡು ಗಂಟೆಗಳ ಸ್ಲಾಟ್‌ಗಳಲ್ಲಿ ಹಂಚಲಾಗುತ್ತದೆ.
ಪ್ರತಿ 2 ಗಂಟೆಗಳ ಆನ್‌ಲೈನ್ ದರ್ಶನ ಸ್ಲಾಟ್‌ಗೆ 300 ಜನರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಆನ್‌ಲೈನ್’ನಲ್ಲಿ ದರ್ಶನ ಪಾಸ್ ಪಡೆದವರು ರಾಮಲಲ್ಲಾ ದರ್ಶನ ಪಡೆಯಲು ಅನುಕೂಲವಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರ ಶಿಫಾರಸಿನೊಂದಿಗೆ, ಪ್ರತಿ ಸ್ಲಾಟ್‌ನಲ್ಲಿ 150 ಜನರು ರಾಮಲಲ್ಲಾನ ಅನುಕೂಲಕರ ದರ್ಶನವನ್ನ ಹೊಂದಲು ಸಾಧ್ಯವಾಗುತ್ತದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಮಹಾ ಪ್ರತಿಷ್ಠಾಪನೆ ನಡೆಯಿತು. ಮರುದಿನ ಅಂದರೆ ಜನವರಿ 23 ರಂದು ದೇವಾಲಯವನ್ನು ಸಾಮಾನ್ಯ ಜನರಿಗೆ ತೆರೆಯಲಾಯಿತು. ಆ ದಿನ ದಾಖಲೆಯ ಐದು ಲಕ್ಷ ಜನರು ರಾಮಲಾಲ ದರ್ಶನ ಪಡೆದರು. ಇದಾದ ನಂತರ ಮುಂದಿನ ದಿನಗಳಲ್ಲಿಯೂ ಭಕ್ತರ ದಂಡು ಅಯೋಧ್ಯೆ ತಲುಪುತ್ತಿದೆ.
ಇದನ್ನ ಗಮನದಲ್ಲಿಟ್ಟುಕೊಂಡು ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆಯ ಸಮಯವನ್ನ ವಿಸ್ತರಿಸಲಾಗಿತ್ತು. ಇದರೊಂದಿಗೆ ಈಗಾಗಲೇ ಆರತಿಗಾಗಿ ಸಲ್ಲಿಸಲಾಗಿದ್ದ ಆನ್‌ಲೈನ್ ಅರ್ಜಿಗಳನ್ನೂ ರದ್ದುಗೊಳಿಸಲಾಗಿದೆ. ಆದರೆ ಈಗ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ವ್ಯವಸ್ಥೆ ಮಾಡಲಾಗುತ್ತಿದೆ.