ಬೆಂಗಳೂರು, (www.thenewzmirror.com);
ಬೆಂಗಳೂರು ಕೇಂದ್ರ ಸಾರಿಗೆ ಕಚೇರಿ ದೇಶದಲ್ಲೇ ಮಹತ್ತರ ಸಾಧನೆ ಮಾಡಿದೆ. ಆ ಮೂಲಕ ದೇಶದಲ್ಲೇ ರಾಜಸ್ವ ಸಂಗ್ರಹದಲ್ಲಿಒ ಎರಡನೇ ಸ್ಥಾನದಲ್ಲಿ ಬಂದು ನಿಂತಿದೆ. ಸಾರಿಗೆ ಕಚೇರಿಯ ಈ ಸಾಧನೆಗೆ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಕೇಂದ್ರ ಸಾರಿಗೆ ಕಚೇರಿ ಇಲಾಖೆ ನಿಗಧಿ ಪಡಿಸಿದ್ದಕ್ಕಿಂತ ಹೆಚ್ಚಿನ ರಾಜಸ್ವ ಸಂಗ್ರಹ ಮಾಡಿದೆ. ಆಗಸ್ಟ್ 2023 ರಲ್ಲಿ ಮಾಡಿದ ಈ ಸಾಧನೆಗೆ ಇತರ ಇಲಾಖೆಗೆ ಇದು ಮಾದರಿಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 109 ಕೋಟಿ 98 ಲಕ್ಷದ 7 ಸಾವಿರದ 898 ರೂಪಾಯಿ ರಾಜಸ್ವ ಸಂಗ್ರಹ ಮಾಡಿದ್ದು, ನೀಡಿದ್ದ ಟಾರ್ಗೇಟ್ ಗಿಂತ ಹೆಚ್ಚಿನ ರಾಜಸ್ವ ಸಂಗ್ರಹ ಮಾಡಿದೆ.
ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಧಿಕಾರಿಯಾಗಿ ಬಂದ ಎಲ್ ದೀಪಕ್ ಅವರ ನೇತೃತ್ವದಲ್ಲಿ ಈ ಸಾಧನೆ ಮಾಡಿದ್ದು, ಇಷ್ಟೇ ಅಲ್ಲದೇ ಸಾರ್ವಜನಿಕರಿಗೆ ಸಮರ್ಪಕವಾದ ಸೇವೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
ಸದ್ಯ ಸಾರ್ವಜನಿಕ ಸ್ನೇಹಿಯಾಗಿ ಬೆಂಗಳೂರು ಕೇಂದ್ರ ಸಾರಿಗೆ ಕಚೇರಿ ಮಾರ್ಪಾಡಾಗಿದ್ದು, ಕಚೇರಿಗೆ ಬರುವ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಾಯವಾಣಿ, ಕುಳಿತುಕೊಳ್ಳಲು ಉತ್ತಮ ಆಸನ, ಅದರಲ್ಲೂ ಪ್ರಮುಖವಾಗಿ ಮದ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಈ ಎಲ್ಲಾ ಸಾರ್ವಜನಿಕರ ಸ್ನೇಹಿ ಕಾರ್ಯದಿಂದಾಗಿ ಆಗಸ್ಟ್ 2023 ಒಂದೇ ತಿಂಗಳಲ್ಲಿ ದಾಖಲೆಯ 109 ಕೋಟಿ ರಾಜಸ್ವ ಸಂಗ್ರಹಿಸಿ, ದೇಶದಲ್ಲೇ ಎರಡನೇ ಸ್ಥಾನದಲ್ಲಿ ಬಂದು ನಿಂತಿದೆ. ಹೆಚ್ಚು ರಾಜಸ್ವ ಸಂಗ್ರಹಣೆ ಮಾಡಿದ ಕಚೇರಿಗಳ ಪೈಕಿ ಪೂನಾ ಮೊದಲನೇ ಸ್ಥಾನದಲ್ಲಿದ್ರೆ ಬೆಂಗಳೂರು ಕೇಂದ್ರ ಕಚೇರಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.