ಬೆಂಗಳೂರು, (www.thenewzmirror.com) ;
ಕಳೆದವಾರ ಏಕಾಏಕಿ ಸುರಿದ ಮಳೆಗೆ ಅಮಾಯಕ ಜೀವ ಅಂಡರ್ ಪಾಸ್ ನಲ್ಲಿ ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಇಂದು ಸಂಜೆ ವೇಳೆಗೆ ಸುರಿದ ಮಳೆಗೆ ಮತ್ತೆ ರಸ್ತೆಗಳು ಕೆರೆಯಂತಾಗಿವೆ.
ಕಳೆದ ವರ್ಷ ಮಳೆಗಾಲದಲ್ಲಿ ಬೆಳ್ಳಂದೂರು ಸಮೀಪ ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೇ ನೀರು ನಿಂತು ನಗರದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು. ಸ್ವತಃ ಕೇಂದ್ರ ಸರ್ಕಾರದಿಂದಲೂ ಈ ಬಗ್ಗೆ ವರದಿ ಕೇಳಿತ್ತು. ಇದೆಲ್ಲಾ ಆಗ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ, ಮತ್ತೊಮ್ಮೆ ಇಂತಹ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ತೀವಿ ಅಂತ ಹೇಳಿತ್ತು.
ಇನ್ನು ಹೊಸದಾಗಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಸೂಚನೆ ಕೊಟ್ಟಿತ್ತು. ಆದರೂ ಬಿಬಿಎಂಪಿ ಅಧಿಕಾರಿಗಳು ಗಾಢ ನಿದ್ದೆಯಿಂದ ಎದ್ದಂತೆ ಕಂಡಿಲ್ಲ.
ಕಾರಣ ಇಂದಿನ ಮಳೆಗೆ ವೈಟ್ ಫೀಲ್ಡ್, ಬೆಳ್ಳಂದೂರು ಸೇರಿದಂತೆ ಹೊರ ವರ್ತುಲ ರಸ್ತೆಗಳು ಮತ್ತೆ ಕೆರೆಯಂತಾಗಿದೆ. ಸೋಮವಾರ ಆಗಿದ್ದರಿಂದ ಕಚೇರಿಯಿಂದ ಮನೆಗಳಿಗೆ ತೆರಳುತ್ತಿದ್ದೋರಿಗೆ ವರುಣ ಅಡ್ಡಿ ಮಾಡಿದ್ದು ಮತ್ತೊಮ್ಮೆ ಬಿಬಿಎಂಪಿಗೆ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿತ್ತು.
https://twitter.com/NammaWhitefield/status/1668287098661801984?t=wrwoQriZENANoIWS_Hm7XA&s=19
ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಬಿಬಿಎಂಪಿ ನಿರ್ಲಕ್ಷ್ತಕ್ಕೆ ತೆರಿಗೆದಾರರು ಹಿಡಿಶಾಪ ಹಾಕುತ್ತಿದ್ದಾರೆ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ಹೊರಹಾಕುತ್ತಿದ್ದಾರೆ.