ಬೆಂಗಳೂರು, (www.thenewzmirror.com) ;
ಪತ್ರಿಕೋದ್ಯಮ, ರೇಡಿಯೋ,ಸಿನಿಮಾ,ಗ್ರಾಫಿಕ್ಸ್ ಮತ್ತು ಆನಿಮೇಷನ್ ಕ್ಷೇತ್ರದಲ್ಲಿ ವೃತ್ತಿ ಕಂಡುಕೊಳ್ಳಬೇಕೆಂಬುದು ಬಹುತೇಕರ ಕನಸು.ಆದರೆ ಸರಿಯಾದ ಶೈಕ್ಷಣಿಕ ವೇದಿಕೆ ಸಿಗದೆ ಕೊರಗುವವರೆ ಹೆಚ್ಚು.ಆದ್ರೆ ಈಗ ಅದಕ್ಕೆ ಸರಿಯಾದ ಸಮಯ ಎದುರಾಗಿದೆ.
ಪತ್ರಿಕೋದ್ಯಮ, ಸಿನಮಾ ಕ್ಷೇತ್ರದಲ್ಲಿ ಕೆಲ್ಸ ಮಾಡ್ಬೇಕೆಂಬ ಆಸೆ ಬಹುತೇಕರಲ್ಲಿ ಆಸೆ ಇದ್ದೇ ಇರುತ್ತೆ. ಆದ್ರೆ ಅಂಥವ್ರಿಗೆ ಉತ್ತಮ ತರಬೇತಿ ಹಾಗೂ ಅವಕಾಶದ ಕೊರತೆ ಇರುತ್ತೆ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ವಿವಿ ಮುಂದಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿರುವ ವಿದ್ಯುನ್ಮಾನ(ಎಲೆಕ್ಟ್ರಾನಿಕ್) ವಿಭಾಗದ ವತಿಯಿಂದ ಎಂ.ಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ, ಎಂಎಸ್ಸಿ.ಫಿಲ್ಮ್ ಮೇಕಿಂಗ್,ಎಂಎಸ್ಸಿ ಗ್ರಾಫಿಕ್ಸ್ ಆಂಡ್ ಆನಿಮೇಷನ್ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ ವಿದ್ಯುನ್ಮಾನ ವಿಭಾಗ ಅನುಭವಿ ಶಿಕ್ಷಕ ವರ್ಗವನ್ನು ಹೊಂದಿದ್ದು ವೃತ್ತಿ ಕ್ಷೇತ್ರದಲ್ಲಿನ ಬೇಡಿಕೆಗೆ ತಕ್ಕಂತೆ ಪಠ್ಯ ಶಿಕ್ಷಣವನ್ನು ಒದಗಿಸುತ್ತದೆ. ಈಗಾಗಲೇ ವಿವಿಯ ವಿದ್ಯುನ್ಮಾನ ವಿಭಾಗದಿಂದ ಪದವಿ ಪಡೆದ ವಿದ್ಯಾರ್ಥಿಗಳು ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ವಾಹಿನಿಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯಾಧುನಿಕ ಸ್ಟುಡಿಯೋ, ಉಪಕರಣಗಳು, ಕಂಪ್ಯೂಟರ್ ಲ್ಯಾಬ್, ತಂತ್ರಜ್ಞಾನಗಳಿಂದ ಕೂಡಿದ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಬೆಂವಿವಿ ವೃತ್ತಿಪರ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿದ್ಯಾರ್ಥಿಗಳಿಗೆ ವಿಷಯ ತಜ್ಞರು, ಪರಿಣಿತರಿಂದ ಮಾರ್ಗದರ್ಶನ ಒದಗಿಸಲಾಗುವುದು. ಉದ್ಯೋಗದಲ್ಲಿ ಕೂಡ ಬೆಂಬಲಿಸಲಾಗುವುದು.
ಬೆಂಗಳೂರು ವಿಶ್ವವಿದ್ಯಾಲಯ ಮಲ್ಟಿಮೀಡಿಯಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಲ್ಲದೇ ಈ ಪದವಿ ಅನುಭವ ಪಡೆದ ವಿದ್ಯಾರ್ಥಿಗಳು ನ್ಯೂಸ್ ಏಜೆನ್ಸಿ, ಸುದ್ದಿ ವಾಹಿನಿ, ಮನರಂಜನಾ ವಾಹಿನಿ, ಸಾರ್ವಜನಿಕ ಸಂಪರ್ಕ ವಿಭಾಗ, ಕಾರ್ಪೋರೆಟ್ ಸಂವಹನ ವಿಭಾಗ, ಜಾಹೀರಾತು ಕಂಪನಿ, ರೆಡಿಯೋ, ಸಿನಿಮಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್ ಆನ್ಲೈನ್ ಪೋರ್ಟಲ್ (https://uucms.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2 ಕೊನೆ ದಿನವಾಗಿದ್ದು ದಂಡ ಶುಲ್ಕದೊಂದಿಗರ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಬೆಂವಿವಿ ವಿದ್ಯುನ್ಮಾನ ವಿಭಾಗ ಸಂಪರ್ಕಿಸಬಹುದಾಗಿದೆ.
ಕೋರ್ಸ್ ಗಳ ವಿಶೇಷತೆ..!
– 100% ಉದ್ಯೋಗ
– ಇಂಟರ್ನ್‌ಶಿಪ್ ಪ್ರೋಗ್ರಾಂ
– ಕ್ಷೇತ್ರಪರಿಣಿತರಿಂದ ಮಾರ್ಗದರ್ಶನ
– ಅನುಭವಿ ಶಿಕ್ಷಕ ವರ್ಗ
– ಹಾಸ್ಟೆಲ್ ಸೌಲಭ್ಯ