BBMP Property Tax | BBMP ಆಸ್ತಿ ತೆರಿಗೆ ಪಾವತಿ ದಿನಾಂಕ ವಿಸ್ತರಿಸುವಂತೆ ಮನವಿ, FKCCI ನಿಂದ ಬಿಬಿಎಂಪಿಗೆ ಮನವಿ

ಬೆಂಗಳೂರು, (www.thenewzmirror.com) ;

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ದಿನಾಂಕ ಜುಲೈ ಅಂತ್ಯಕ್ಕೆ ಮುಕ್ತಾಯವಾಗುತ್ತಿದ್ದು, ಅದನ್ನ ಆಗಸ್ಟ್ ತಿಂಗಳ ಅಂತ್ಯದ ವರೆಗೂ ವಿಸ್ತರಣೆ ಮಾಡುವಂತೆ FKCCI ಬಿಬಿಎಂಪಿಗೆ ಮನವಿ ಮಾಡಿಕೊಂಡಿದೆ.

RELATED POSTS

FKCCI ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ

ಕರ್ನಾಟಕ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಬಾಕಿ ಇರುವ ಆಸ್ತಿ ತೆರಿಗೆಯನ್ನು ಪಾವತಿಸಲು ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ತಂದಿದ್ದು, ಇದು ಆಸ್ತಿ ತೆರಿಗೆದಾರರಿಗೆ ಬಡ್ಡಿ ಮನ್ನಾ, ದಂಡವನ್ನು ಅರ್ಧ ಮತ್ತು ವಸತಿ ಆಸ್ತಿಗಳಿಗೆ 5 ವರ್ಷಗಳ ಪರಿಷ್ಕರಣೆ ಪ್ರಕರಣಗಳಿಗೆ ಸೀಮಿತವಾಗಿದೆ. ಈ ಯೋಜನೆಯಿಂದ ಪಾವತಿಸಬೇಕಾದ ಆಸ್ತಿ ತೆರಿಗೆಯ ಕೊನೆ ದಿನಾಂಕ ಜುಲೈ 31ಕ್ಕೆ ಅಂತ್ಯವಾಗಲಿದೆ. ಒನ್ ಟೈಂ ಸೆಟಲ್ಮೆಂಟ್ ಯೋಜನೆ ಅತ್ಯುತ್ತಮವಾಗಿದೆ, ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳ ಸದಸ್ಯರುಗಳು ಬಳಸಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಒನ್-ಟೈಮ್ ಸೆಟಲ್ಮೆಂಟ್‌ ಅತ್ಯುತ್ತಮ ಯೋಜನೆಯಾಗಿದೆ. ಆದಾಗ್ಯೂ, ನಮ್ಮ ಅನೇಕ ಸದಸ್ಯರು ತಮ್ಮ ದಾಖಲೆಗಳನ್ನು ಪರಿಶೀಲಿಸುವ ಮತ್ತು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದು, ಇದಕ್ಕೆ ಹೆಚ್ಚು ಸಮಯ ಬೇಕಾಗಿರುತ್ತದೆ.

ಈ ನಿಟ್ಟಿನಲ್ಲಿ ಒನ್-ಟೈಮ್ ಸೆಟಲ್ಮೆಂಟ್ ಅನ್ನು ಆಗಸ್ಟ್ 31, 2024 ರವರೆಗೆ ವಿಸ್ತರಿಸಬೇಕೆಂದು FKCCI ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಮನವಿ ಮಾಡಿಕೊಂಡಿದೆ.

ಈ ರೀತಿ ದಿನಾಂಕ ವಿಸ್ತರಣೆ ಮಾಡುವುದರಿಂದ ಹೆಚ್ಚಿನ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ತೆರಿಗೆ ಇತ್ಯರ್ಥವನ್ನು ಕ್ರಮಬದ್ಧಗೊಳಿಸಲು ಅನುವು ಮಾಡಿಕೊಡುವುದಲ್ಲದೆ ಜೊತೆಗೆ ಬಾಕಿ ತೆರಿಗೆಯನ್ನು ಪಾವತಿಸುವ ಮೂಲಕ ಬಿಬಿಎಂಪಿಗೆ ಮತ್ತು ರಾಜ್ಯ ಸರ್ಕಾರದ ಖಜಾನೆಗೆ ಹೆಚ್ಚು ಆದಾಯವನ್ನು ಸಲ್ಲಿಸಿದಂತಾಗುತ್ತದೆ ಎಂದು FKCCI ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist