ಬೆಂಗಳೂರು, (www.thenewzmirror.com);
ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ ಹಠಾತ್ ನಿಧನರಾಗಿದ್ದಾರೆ.
ಇಂದು ಸಂಜೆ 6.30 ಕ್ಕೆ ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ಅಂಬಿಕಾಪತಿ ನಿಧನಕ್ಕೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಂತಾಪ ಸೂಚಿಸಿದ್ದಾರೆ.
ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಐಟಿದಾಳಿ ವೇಳೆ ಅಂಬಿಕಾಪತಿ ಹೆಸರು ಬಾಲ್ತಿಯಲ್ಲಿತ್ತು. ಕಾರಣ ದಾಳಿ ವೇಳೆ ಅಂಬಿಕಾಪತಿ ನಿವಾಸ ಹಾಗೂ ಅವರ ಕಚೇರಿಯಲ್ಲಿ ಸುಮಾರು 45 ಕೋಟಿ ಮೌಲ್ಯದ ಹಣ ಸಿಕ್ಕಿತ್ತು.