ಬೆಂಗಳೂರು, (www.thenewzmirror.com) ;
ಬಿಬಿಎಂಪಿ ಕೇಂದ್ರ ಕಛೇರಿ ಅವರಣದ ಡಾ.ರಾಜ್ ಕುಮಾರ್ ಗಾಜಿನಮನೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಚುನಾವಣೆ ನಡೆಯಿತು. ಇಂದು ಬೆಳಗ್ಗೆಯಿಂದ ನಡೆದಿದ್ದ ಚುನಾವಣೆ ಫಲಿತಾಂಶ ಸಂಜೆ ವೇಳೆಗೆ ಪ್ರಕಟವಾಯಿತು.
17ನಿರ್ದೇಶಕ ಸ್ಥಾನಗಳಿಗೆ 35ಜನ ಸ್ಪರ್ಧಿಸಿದ್ದರು ಎರಡು ಮಹಿಳಾ ಅಭ್ಯರ್ಥಿಗಳು ಅಮೃತ್ ರಾಜ್ ರವರ ತಂಡಕ್ಕೆ ಬೆಂಬಲಿಸಿ ಕಣದಿಂದ ಹಿಂದೆ ಸರಿದಿದ್ದರು.
ಬೆಳಗ್ಗೆ 9ಗಂಟೆಯಿಂದ ಮತದಾನ ಆರಂಭವಾಗಿ ಸಂಜೆ 4ಗಂಟೆಗೆ ಮುಕ್ತಾಯವಾಗಿ ಏಣಿಕೆ ಕಾರ್ಯ ಪ್ರಾರಂಭವಾಯಿತು 8ಟೇಬಲ್ ನಲ್ಲಿ ಏಣಿಕೆ ಮಾಡಲಾಯಿತು.
2171ಮತಗಳು ಹಾಗೂ 74ಕುಲಗೆಟ್ಚ ಮತಗಳು .
ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ನೇತೃತ್ವದಲ್ಲಿ 17ನಿರ್ದೇಶಕರ ಸ್ಥಾನಗಳಿಸಿ ಜಯಭೇರಿ ಬಾರಿಸಿದರು.
ಎ.ಅಮೃತ್ ರಾಜ್ -1892
ಕೆ.ಜಿ.ರವಿ- 1610
ಡಾ.ಶೋಭಾ -1292
ಸೋಮಶೇಖರ್ ಎನ್.ಎಸ್- 1149,
ಹೆಚ್.ಕೆ.ತಿಪ್ಪೇಶ್-1319 ಆರ್.ರೇಣುಕಾಂಬ-1257 ವಿ.ಉಮೇಶ್-1302
ಡಿ.ರಾಮಚಂದ್ರ-,1432 ಕೆ.ಮಂಜೇಗೌಡ-1376 ಎಸ್.ಜಿ.ಸುರೇಶ್- 1560
ಶ್ರೀಧರ್ ಎನ್-1151
ಸಂತೋಷ್ ಕುಮಾರ್ ಎಂ.-1216 ಎನ್.ಮಂಜುನಾಥ್-,1518 ಕೆ.ನರಸಿಂಹ -1516
ಹೆಚ್.ಬಿ.ಹರೀಶ್-1124 ಕೆ.ಸಂತೋಷ್ ಕುಮಾರ್ ನಾಯ್ಕ್-1230,
ಬಿ.ರುದ್ರೇಶ್-1446
ಎ..ಅಮೃತ್ ರಾಜ್ ಮಾತನಾಡಿ ಕಳೆದ ಐದು ವರ್ಷದಲ್ಲಿ ಅಧ್ಯಕ್ಷನಾಗಿ ಮತ್ತು ಪದಾಧಿಕಾರಿಗಳ ಜೊತೆಯಲ್ಲಿ ಅಧಿಕಾರಿ,ನೌಕರರ ಪರ ಹಲವಾರು ಹೋರಾಟಗಳು ಮತ್ತು ವೃಂದ ಮತ್ತು ನೇಮಕಾತಿ ಸಮರ್ಪಕವಾಗಿ ಜಾರಿಗೆ ನಮ್ಮ ಹೋರಾಟ ಯಶ್ವಸಿಯಾಗಿ ಸಾವಿರಾರು ನೌಕರರಿಗೆ ಬಡ್ತಿ ಭಾಗ್ಯ ಲಭಿಸಿತು ಹಾಗೂ ನೂರಾರು ಜನರಿಗೆ ಆರೋಗ್ಯ, ಕಂದಾಯ ಹಾಗೂ ಇಂಜನಿಯರ್ ವಿಭಾಗದಲ್ಲಿ ನೂತನವಾಗಿ ನೇಮಕವಾಯಿತು.
ಬಿಬಿಎಂಪಿ ಅಧಿಕಾರಿ, ನೌಕರರು ಒಂದು ಕುಟುಂಬದಂತೆ ಅವರ ಹಿತರಕ್ಷಣೆ ಕಾಯುವುದು ಸಂಘದ ಕರ್ತವ್ಯವಾಗಿದೆ.
ನಮ್ಮ ಸಂಘದ ಸಾಧನೆಗಳು ಮತ್ತು ಯೋಜನೆಗಳನ್ನು ಗುರುತಿಸಿ ಅತ್ಯಧಿಕ ಮತಗಳನ್ನು ನೀಡಿ ನಮ್ಮ ತಂಡಕ್ಕೆ ಬೆಂಬಲ ನೀಡಿ, ಮತ ಹಾಕಿದ್ದಾರೆ.
ಸೋಲಿನ ಭೀತಿಯಿಂದ ವಿರೋಧಿ ಬಣದವರು ಜಾತಿ ರಾಜಕೀಯ ಬಣ್ಣ ಬಳೆಯಲು ಪ್ರಯತ್ನ ಮಾಡಿದರು.
ಅದರೆ ನಮ್ಮ ತಂಡದ ಬೆಂಬಲವಾಗಿ ಎಸ್.ಸಿ./ಎಸ್.ಟಿ ಹಾಗೂ ಹಿಂದುಳಿದ ವರ್ಗ ಮತ್ತು ಒಕ್ಕಲಿಗ, ಲಿಂಗಾಯಿತ ಬ್ರಾಹ್ಮಣ,ಕಿಶ್ಚಿಯನ್ , ಅಲ್ಪಸಂಖ್ಯಾತ ಎಲ್ಲ ಜಾತಿ,ವರ್ಗ ಮತ ಭೇಧ ಮರೆತು ಸಂಘಟನೆಯ ಮುಖ್ಯ ಎಂದು ನಮ್ಮ ತಂಡದ ಬೆಂಬಲಕ್ಕೆ ನಿಂತರು.
ಕಂದಾಯ, ಇಂಜನಿಯರ್ ಮತ್ತು ಆರೋಗ್ಯ ಶಿಕ್ಷಣ ಇಲಾಖೆ ವಿಭಾಗದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.
ಸಂಘ ಮುಂದಿನ ಕಾರ್ಯ ಯೋಜನೆ ರೂಪಿಸಲಾಗಿದೆ ಸಿಬ್ಬಂದಿಗಳ ಕೊರತೆ ಮತ್ತು ಒತ್ತಡದ ಕೆಲಸದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ,ನೌಕರರ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಸಂಪೂರ್ಣ ವೈದ್ಯಕೀಯ ಚಿಕಿತ್ಯೆ ಉಚಿತಕ್ಕಾಗಿ ಹೋರಾಟ.
ಮದುವೆ, ಹುಟ್ಟುಹಬ್ಬ ಮತ್ತು ಇತರೆ ಶುಭಾ ಕಾರ್ಯಗಳಿಗೆ ಅನುಕೂಲಕ್ಕೆ ಕಡಿಮೆ ಖರ್ಚಿನಲ್ಲಿ ಸಮುದಾಯ ಭವನ ನಿರ್ಮಾಣ.
ಬಿಬಿಎಂಪಿಯಲ್ಲಿ ಖಾಲಿ ಇರುವ 6500ಹುದ್ದೆಗಳಿಗೆ ಭರ್ತಿ ಮಾಡಲು ಹೋರಾಟ.
ಕನ್ನಡ ಭಾಷೆ ಉಳಿಸಿ,ಬೆಳಸಲು ಇದೇ ವರ್ಷ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೇಪಾಳದಲ್ಲಿ ಅಂತರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಆಯೋಜನೆ ಮಾಡಲಾಗಿದೆ.
ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿಗಾಗಿ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.